ವಸತಿ ಶಾಲೆಗೆ ಸಿಇಓ ದಿಢೀರ್ ಭೇಟಿ : ಪರಿಶೀಲನೆ!

ತುಮಕೂರು:       ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಇಂದು ಪಾವಗಡ ತಾಲ್ಲೂಕಿನ ಕಣಿವೆಹಳ್ಳಿ ಗೇಟ್‍ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿ ನಿಲಯದ ಕೊಠಡಿಗಳು, ಭೋಜನಾ ಮಂದಿರ, ಅಡಿಗೆ ಮನೆ ಸ್ವಚ್ಛತೆ ಹಾಗೂ ಮಕ್ಕಳಿಗೆ ವಿತರಿಸಲು ತಯಾರಿಸಲಾಗುತ್ತಿದ್ದ ಆಹಾರದ ಪದಾರ್ಥಗಳ ಶುಚಿ-ರುಚಿಯನ್ನು ಪರಿಶೀಲನೆ ನಡೆಸಿದರು.       ವಸತಿ ಶಾಲೆಯಲ್ಲಿ ಅಡಿಗೆ ಮನೆ ಹಾಗೂ ಶೌಚಾಲಯಗಳ ಸ್ವಚ್ಛತೆ, ಮಕ್ಕಳಿಗೆ ವಿತರಿಸಲಾಗಿರುವ ಕೊಠಡಿಗಳನ್ನು ಸುಸ್ಥಿತಿಯಲ್ಲಿಟ್ಟಿಲ್ಲದಿರುವ ಬಗ್ಗೆ ಪರಿಶೀಲಿಸಿ ಕೂಡಲೇ ಸ್ವಚ್ಛಗೊಳಿಸಲು ಮತ್ತು ಪ್ರತಿದಿನ ಸ್ವಚ್ಛವಾಗಿಡಲು ಮುಖ್ಯೋಪಾಧ್ಯಾಯರಿಗೆ ನಿರ್ದೇಶನ ನೀಡಿದರು. ಮಕ್ಕಳಿಗೆ ಕುಡಿಯಲುಶುದ್ಧ ನೀರನ್ನೇ ಪೂರೈಸಬೇಕಲ್ಲದೆ ಅಡಿಗೆಗೂ ಶುದ್ಧ ನೀರನ್ನೇ ಬಳಸಲು ಸೂಚಿಸಲಾಯಿತು. ನಂತರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೂಡಲೇ ನಿಲಯದಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಸೂಚಿಸಿದರು.  …

ಮುಂದೆ ಓದಿ...

ಸ್ಮಾರ್ಟ್‍ಸಿಟಿ : ಜರ್ಮನಿಯ ರಾಜತಾಂತ್ರಿಕರ ನಡುವೆ ಒಪ್ಪಂದ

ತುಮಕೂರು :       ಜ್ಞಾನ ಮತ್ತು ಅನುಭವಗಳ ವಿನಿಮಯದೊಂದಿಗೆ ಅಭಿವೃದ್ಧಿ ಸಾಧಿಸುವ ಯೋಜನೆಗೆ ಸಂಬಂಧಿಸಿದಂತೆ ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಹಾಗೂ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ರಾಜತಾಂತ್ರಿಕ ಕಚೇರಿ ಅಧಿಕಾರಿಗಳ ನಡುವೆ ಬುಧವಾರ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಯಿತು. ಬೆಂಗಳೂರಿನಲ್ಲಿ ಬುಧವಾರ ಕಾನ್ಸುಲೇಟ್ ಜನರಲ್ ಆಫ್ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಡೆಪ್ಯುಟಿ ಕನ್ಸಲ್ ಜನರಲ್ Philipp Ehlerding ಇವರ ನೇತೃತ್ವದ ತಂಡ, ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಅಧ್ಯಕ್ಷೆ ಡಾ.ಶಾಲಿನಿ ರಜನೀಶ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಭೂಬಾಲನ್ ಅವರೊಂದಿಗೆ ಚರ್ಚೆ ನಡೆಸಲಾಯಿತು.       ಈ ಸಂದರ್ಭದಲ್ಲಿ ಮಾತನಾಡಿದ ಡಾ.ಶಾಲಿನಿ ರಜನೀಶ್ ತುಮಕೂರು ಸ್ಮಾರ್ಟ್‍ಸಿಟಿಗಳ ಪರಿಕಲ್ಪನೆ ಮತ್ತು ಉದ್ದೇಶಗಳನ್ನು ವಿವರಿಸಿ ತುಮಕೂರು ನಗರ ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರಲ್ಲದೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಹಯೋಗದೊಂದಿಗೆ ತುಮಕೂರು ನಗರದ ಸಂಪೂರ್ಣ ಅಭಿವೃದ್ಧಿಯನ್ನು ಎಲ್ಲರ ಸಹಕಾರ…

ಮುಂದೆ ಓದಿ...

ತುಮಕೂರು ಸ್ಮಾರ್ಟ್ ರಸ್ತೆಗಳಿಗೆ “ಟೆಂಡರ್ ಶ್ಯೂರ್” ಟಚ್

ತುಮಕೂರು:     ಇತಿಚೀನ ದಿನಗಳಲ್ಲಿ ಕೇಬಲ್, ನೀರಿನ ಪೈಪ್, ಗ್ಯಾಸ್ ಸಂಪರ್ಕ, ಮತ್ತಿತರ ತಾಂತ್ರಿಕ ಕಾರಣಗಳಿಂದಾಗಿ ಕೋಟ್ಯಂತರ ರೂ.ಗಳನ್ನು ಖರ್ಚು ಮಾಡಿ ನಿರ್ಮಿಸಿದ ರಸ್ತೆಯನ್ನು ಕೆಲವೇ ದಿನಗಳಲ್ಲಿ ಅಗೆಯುವುದು, ಮತ್ತೆ ತೇಪೆ ಹಾಕುವುದು ಸಾಮಾನ್ಯವಾಗಿದೆ. ಮತ್ತೆ ಮತ್ತೆ ರಸ್ತೆಗಳನ್ನು ಅಗೆದು ವಿರೂಪಗೊಳಿಸುವ ಬದಲು ರಸ್ತೆ ಕಾಮಗಾರಿ ನಡೆಯುವಾಗಲೇ ಭವಿಷ್ಯದ ಬಗ್ಗೆ ಯೋಚಿಸಿ ಪೂರಕ ವ್ಯವಸ್ಥೆಗಳನ್ನು ಒದಗಿಸಿದರೆ ವ್ಯವಸ್ಥಿತ ರಸ್ತೆಯಾಗಿ ರೂಪುಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳನ್ನು ಅಗೆಯದಂತೆ ಸ್ಮಾರ್ಟ್ ಸಿಟಿ ಲಿಮಿಟೆಡ್‍ನಿಂದ ನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್ ರಸ್ತೆಗಳಿಗೆ “ಟೆಂಡರ್ ಶ್ಯೂರ್” ಟಚ್ ನೀಡುವ ಹೊಸ ಯೋಜನೆಯೊಂದನ್ನು ವಿನ್ಯಾಸಗೊಳಿಸಲಾಗಿದೆ.   ಏನಿದು ಟೆಂಡರ್ ಶ್ಯೂರ್?       ಯಾವುದೇ ಕಾರಣಕ್ಕೂ ರಸ್ತೆಗಳನ್ನು ಮತ್ತೆ ಅಗೆಯಲು ಅವಕಾಶ ಇಲ್ಲದಂತೆ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ವಿನ್ಯಾಸಗೊಳಿಸುವ ಯೋಜನೆಯೇ ಟೆಂಡರ್ ಶ್ಯೂರ್. ಜಗತ್ತಿನ ಬಹುತೇಕ ಪ್ರಮುಖ ನಗರಗಳ ರಸ್ತೆಗಳು ಈ…

ಮುಂದೆ ಓದಿ...