ಹೇಮಾವತಿ ನಾಲಾ ಅಚ್ಚುಕಟ್ಟು ಕಾಮಗಾರಿ ಹೆಸರಿನಲ್ಲಿ ಕೋಟ್ಯಾಂತರ ಹಣ ಗೋಲ್‍ಮಾಲ್-ಶಾಸಕ ಆರೋಪ

ತುರುವೇಕೆರೆ:       ಹೇಮಾವತಿ ನಾಲಾ ಅಚ್ಚುಕಟ್ಟು ಕಾಮಗಾರಿ ಹೆಸರಿನಲ್ಲಿ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕೆಲಸ ಮಾಡದೆಯೇ ಕೋಟ್ಯಾಂತರ ರೂಪಾಯಿ ಹಣ ಗೋಲ್‍ಮಾಲ್ ಮಾಡಿದ್ದಾರೆಂದು ಶಾಸಕ ಮಸಾಲಜಯರಾಮ್ ಆರೋಪಿಸಿದರು.       ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಮಾವತಿ ನಾಲೆಯ ಎರಡೂ ಬದಿಯಲ್ಲಿ ಜಂಗಲ್ ಕಟಿಂಗ್ ಹಾಗೂ ಊಳೆತ್ತುವ ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ ನಿರ್ವಹಿಸಿದ್ದು, ಕಾಮಗಾರಿಯನ್ನು ಪೂರ್ಣಗೊಳೆಸದೆ ಅರ್ಧಂಭರ್ಧ ಮಾಡಿದ್ದಾರೆ ಹಾಗೂ ನಾಲೆಯ ಎರಡೂ ಬದಿಯಲ್ಲಿದ್ದ ಮರಗಳ ರಂಬೆ ಕೊಂಬೆಗಳನ್ನು ನಾಲೆಯಲ್ಲಿ ಬಿಸಾಡಿ ಹೋಗಿದ್ದರಿಂದ ತಾಲೂಕಿನ ಡಿ-10ಬಳಿಯಿರುವ ಹೇಮಾವತಿ ಸೇತುವೆಯಲ್ಲಿ ನೀರು ಬ್ಲಾಕ್ ಆಗಿ ನಾಲೆ ಹೊಡೆಯುವ ಹಂತಕ್ಕೆ ತಲುಪಿತ್ತು, ರೈತರು ಆತಂಕದಿಂದ ನನಗೆ ತಿಳಿಸಿದ ಸಂಧರ್ಭದಲ್ಲಿ ನಾನೆ ಖುದ್ದು ಸ್ಥಳಪರಿಶೀಲನೆ ಮಾಡಿ ಕೂಡಲೇ ನಾಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಪೊದೆಗಳು ಹಾಗೂ ಮರದ ರಂಬೆಗಳನ್ನು ಹೊರತೆಗೆಸುವಲ್ಲಿ ಹರ ಸಾಹಸ ಪಡಬೇಕಾಯಿತು.      …

ಮುಂದೆ ಓದಿ...

ಅಕ್ಷರ ದಾಸೋಹದಲ್ಲಿ ಅವ್ಯವಹಾರ ತನಿಖೆಗೆ ವಿಶೇಷ ತಂಡ ರಚನೆ!

ತುಮಕೂರು:       ಅಕ್ಷರ ದಾಸೋಹದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಾ ಅಕ್ಷರ ದಾಸೋಹದ ಅವ್ಯವಹಾರದ ತನಿಖೆಗಾಗಿ ತಂಡ ರಚಿಸಿದ್ದು, ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಸಭೆಯಲ್ಲಿ ತುಮಕೂರು ಮತ್ತು ಮಧುಗಿರಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ವಿವಿಧ ಕಾಮಗಾರಿಗಳ 1.93 ಕೋಟಿ ರೂಪಾಯಿಗಳ ಹಣದ ಬಿಲ್ ರದ್ದಾಗಿರುವ ಕುರಿತು ಅಧ್ಯಕ್ಷರ ಗಮನಕ್ಕೆ ತರಲಾಯಿತು.       ಬಿಲ್ ರದ್ದಾಗಿರುವ ಕುರಿತು ಮಾಹಿತಿ ಪಡೆದ ಸಿಇಒ ಅವರು ಬಿಲ್‍ಗಳನ್ನು ಸೂಕ್ತ ದಿನಾಂಕದೊಳಗೆ ಪಾವತಿಸಿರುವ ಬಗ್ಗೆ ಖಾತರಿ ಪಡಿಸಿಕೊಂಡು ಬಿಲ್ ರದ್ದಾಗಿರುವ ಬಗ್ಗೆ…

ಮುಂದೆ ಓದಿ...