ಸರಗಳ್ಳತನ ಮಾಡಿದ ಆರೋಪಿಗೆ ಜೈಲು ಶಿಕ್ಷೆ!!

ತುಮಕೂರು:       ತುಮಕೂರು ತಾಲ್ಲೂಕು ಗೂಳೂರು ಹೋಬಳಿಯ ಕಾಳಿಂಗಯ್ಯನ ಪಾಳ್ಯ ಗ್ರಾಮದ ವಾಸಿಯಾದ ಲಕ್ಷ್ಮೀನರಸಮ್ಮನವರ ಸುಮಾರು 85 ಸಾವಿರ ಬೆಲೆಬಾಳುವ 70ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಪುಟ್ಟೇಗೌಡ ಎಂಬಾತ ಕಿತ್ತುಕೊಂಡು ಹೋಗಿರುವ ಆರೋಪಕ್ಕೆ 2 ವರ್ಷ ಜೈಲುವಾಸ ಮತ್ತು 10,000 ರೂ. ದಂಡ ವಿಧಿಸಿ 4ನೇ ಅಪರ ಸಿ.ಜೆ. ಮತ್ತು 5 ನೇ ಜೆ.ಎಂ.ಎಫ್.ಸಿ ನ್ಯಾಯಾಧೀಶ ವಿನೋದ್ ಬಾಲ್ ನಾಯ್ಕ ಅವರು ತೀರ್ಪು ನೀಡಿದ್ದಾರೆ. ಪ್ರಕರಣದ ಹಿನ್ನೆಲೆ:       ಆರೋಪಿ ಪುಟ್ಟೇಗೌಡ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಸಹಶಿಕ್ಷಕಿ ಲಕ್ಷ್ಮೀನರಸಮ್ಮ ಅವರನ್ನು ದಾರಿ ಮಧ್ಯೆ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಮಾಂಗಲ್ಯಸರವನ್ನು ಕಿತ್ತುಕೊಂಡು ಹೋಗಿರುವುದು ವಿಚಾರಣೆಯಿಂದ ಸಾಬೀತಾಗಿದೆ.       ಆರೋಪಿಗೆ ವಿಧಿಸಿರುವ ದಂಡದ ಮೊತ್ತ ಕೊಡಲು ತಪ್ಪಿದರೆ 6 ತಿಂಗಳ ಸಾದಾ ಸಜೆಯನ್ನು ವಿಧಿಸಿ ನ್ಯಾಯಾಲಯ…

ಮುಂದೆ ಓದಿ...

ಪರಿಸರದಿಂದ ಮನುಷ್ಯನ ಬದುಕು ಸುಂದರವಾಗಿದೆ -ಬಿಇಓ ರಂಗಪ್ಪ

ಮಧುಗಿರಿ:       ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಸೀಡ್‍ಬಾಲ್ ತಯಾರಿ ಹಾಗೂ ಬಿತ್ತನೆ ಕಾರ್ಯದ ತರಬೇತಿ ನೀಡುವುದು ಇಂದಿನ ದಿನಗಳಲ್ಲಿ ಮಹತ್ವದ್ದಾಗಿದೆ ಎಂದು ಬಿಇಓ ರಂಗಪ್ಪ ತಿಳಿಸಿದರು.       ಮಧುಗಿರಿ ಪಟ್ಟಣದ ಮಾಲೀಮರಿಯಪ್ಪ ರಂಗ ಮಂದಿರದಲ್ಲಿ ಪುರಸಭೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೀಡ್‍ಬಾಲ್ ತಯಾರಿ ಹಾಗೂ ಬಿತ್ತನೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರದಿಂದ ಮನುಷ್ಯನ ಬದುಕು ಸುಂದರವಾಗಿ ಹಾಗೂ ಆರೋಗ್ಯವಾಗಿದೆ. ಇದನ್ನು ಇಂದು ನಾವೆಲ್ಲ ಅವನತಿಯ ಅಂಚಿಗೆ ತಂದು ನಿಲ್ಲಿಸಿದ್ದೇವೆ. ಹೀಗೆ ಮುಂದುವರಿದಲ್ಲಿ ಪರಿಸರದಿಂದ ಮನುಕುಲಕ್ಕೆ ಅಪಾಯವಿದೆ. ಅದಕ್ಕಾಗಿ ಪರಿಸರವನ್ನು ಶುಚಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಪುರಸಭೆ ಸಿಬ್ಬಂದಿಗಳು ಮಧುಗಿರಿ ಸುತ್ತಲಿನ ಪ್ರಾಕೃತಿಯ ಬೆಟ್ಟ ಹಾಗೂ ನೆಡುತೋಪಿನಲ್ಲಿ ಈ ಸೀಡ್‍ಬಾಲ್‍ಗಳನ್ನು ಬಿತ್ತನೆ ಮಾಡುವುದರಿಂದ ಉತ್ತಮ ಮಳೆಯಾದರೆ ಪ್ರಕೃತಿ ಸುಂದರ ಹಾಗೂ ಆರೋಗ್ಯಕರವಾಗಿರುತ್ತದೆ. ಈ ಕೆಲಸಕ್ಕೆ…

ಮುಂದೆ ಓದಿ...

ಸವಾರರ ವರ್ತನೆ ಮೇಲೆ ನಿಗಾ ವಹಿಸಲು ಪೊಲೀಸರಿಗೆ 10 ಬಾಡಿ ಕ್ಯಾಮೆರಾ!

ತುಮಕೂರು:       ಸಂಚಾರ ಪೊಲೀಸರು ಮತ್ತು ವಾಹನ ಸವಾರರ ವರ್ತನೆ ಮೇಲೆ ನಿಗಾ, ಪಾರದರ್ಶಕತೆ ಕಾಯ್ದುಕೊಳ್ಳಲು, ಸಂಚಾರ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕಲು ಸಮವಸ್ತ್ರದಲ್ಲಿ(ಅಂಗಿ) ಅಳವಡಿಸಬಹುದಾದ 10 ಬಾಡಿ ಕ್ಯಾಮೆರಾಗಳನ್ನು ಸಂಚಾರ ಪೊಲೀಸರಿಗೆ ನೀಡಲಾಗಿದೆ.       ನಗರದ ಸಂಚಾರ ಠಾಣೆ ಇಬ್ಬರು ಪಿಎಸ್‍ಐ ಮತ್ತು 8 ಎಎಸ್‍ಐಗಳು ಈ ಕ್ಯಾಮೆರಾಗಳನ್ನು ಧರಿಸಿ ಕಾರ್ಯನಿರ್ವಹಿಸಲಿದ್ದಾರೆ. ಇವುಗಳನ್ನು ಧರಿಸುವ ಪೊಲೀಸ್ ಮುಂದೆ ನಡೆಯುವ ಚಟುವಟಿಕೆಗಳು ಕ್ಯಾಮೆರಾದಲ್ಲಿ ಸೆರೆಯಾಗುತ್ತವೆ.       ವಾಹನ ಸವಾರರು ಮತ್ತು ಚಾಲಕರು ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರಿಗೆ ಯಾಮಾರಿಸಿ ಪರಾರಿಯಾಗುವುದು, ಪೊಲೀಸ್ ಸಿಬ್ಬಂದಿ ಲಂಚ ಪೀಕುವುದು, ಕಿರುಕುಳ ನೀಡುವುದಕ್ಕೆ ಈ ವಿಶಿಷ್ಟ ಕ್ಯಾಮೆರಾ ಕಣ್ಗಾವಲಿನಿಂದ ಕಡಿವಾಣ ಬೀಳಲಿದೆ. ಗಲಾಟೆ, ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ವಾಗ್ವಾದ ಸಂದರ್ಭಗಳ ಅಸಲಿಯತ್ತು ಪತ್ತೆ ಮಾಡಲು ಈ ಕ್ಯಾಮೆರಾಗಳು ನೆರವಾಗಲಿವೆ.    …

ಮುಂದೆ ಓದಿ...

ಪೈಲೆಟ್ ಜಿಲ್ಲೆಯಾಗಿ ತುಮಕೂರು ಆಯ್ಕೆ!

ತುಮಕೂರು:       ಅಂಗನವಾಡಿ ಕೇಂದ್ರಗಳಲ್ಲಿ ಕಲ್ಪಿಸಲಾಗುತ್ತಿರುವ ಐ.ಸಿ.ಡಿ.ಎಸ್ ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಿದ್ಧಪಡಿಸಲಾಗಿರುವ ಸ್ನೇಹ ತಂತ್ರಾಂಶ(ಮೊಬೈಲ್ ಆ್ಯಪ್)ವನ್ನು ಪ್ರಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಬಳಸಲು ತುಮಕೂರನ್ನು ಪೈಲೆಟ್ ಜಿಲ್ಲೆಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.       ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರಿನ ಸಿ.ಸ್ಟೆಪ್ (ತಂತ್ರಜ್ಞಾನ ಮತ್ತು ನೀತಿ ಸಂಶೋಧನಾ) ಸಂಸ್ಥೆಗಳ ಸಹಯೋಗದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು/ ಅಂಗನವಾಡಿ ಕಾರ್ಯಕರ್ತೆಯರು/ ಮೇಲ್ವಿಚಾರಕರಿಗಾಗಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿಂದು ಆಯೋಜಿಸಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿ.ಸ್ಟೆಪ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಸ್ನೇಹ ಮೊಬೈಲ್ ತಂತ್ರಾಂಶವನ್ನು ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಅಳವಡಿಸುವುದರಿಂದ ಏಕರೂಪದ ಮಾಹಿತಿ ಸಂಗ್ರಹಿಸಲು ಅನುವಾಗುತ್ತದೆ ಎಂದು…

ಮುಂದೆ ಓದಿ...