ನಾಗರಕಲ್ಲಿನ ಬಳಿ ಮದ್ಯದಂಗಡಿ ತ್ಯಾಜ್ಯ

ಹುಳಿಯಾರು:      ಪ್ರತಿನಿತ್ಯ ಎಲ್ಲರಿಂದಲೂ ಪೂಜಿಸಲ್ಪಡುವ ನಾಗರಕಲ್ಲು ಹಾಗೂ ಅರಳಿಕಟ್ಟೆಯ ಪಕ್ಕದಲ್ಲಿ ಬಾರಿನ ತ್ಯಾಜ್ಯ ತಂದು ಸುರಿಯುತ್ತಿರುವ ಬಾರ್ ಅಂಗಡಿಯವರ ಮೇಲೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.       ಹುಳಿಯಾರಿನ ಬಸ್ ನಿಲ್ದಾಣದ ಬಳಿ ಇರುವ ಆಟೋ ಸ್ಟ್ಯಾಂಡ್ ಪಕ್ಕದ ನಾಗರ ಕಟ್ಟೆಯ ಬಳಿ ಮದ್ಯದ ಪಾಕೆಟ್‍ಗಳು ಎಲ್ಲೆಂದರಲ್ಲಿ ಹಾಕಲ್ಪಡುತ್ತಿದೆ. ಸ್ವಚ್ಛತೆಯನ್ನು ಸಂಪೂರ್ಣ ನಿರ್ಲಕ್ಷಿಸಿ ಎಲ್ಲೆಂದರಲ್ಲಿ ಕಸ ಚೆಲ್ಲುವ ಇವರಿಗೆ ತ್ಯಾಜ್ಯ ಎಲ್ಲಿ ಹಾಕಬೇಕೆಂಬ ಬಗ್ಗೆ ಕನಿಷ್ಠ ಪ್ರಜ್ಞೆ ಇಲ್ಲದಾಗಿದೆ ಎಂದು ಟೀಕಿಸಿದ್ದಾರೆ. ಪ್ರತಿನಿತ್ಯವೂ ಕೆರೆಗೆ, ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಮನಬಂದಂತೆ ತ್ಯಾಜ್ಯ ತಂದು ಸುರಿಯುವ ಇವರಿಗೆ ಈ ಹಿಂದೆ ಪಟ್ಟಣ ಪಂಚಾಯಿತಿಯವರು ನೋಟಿಸ್ ನೀಡಿದ್ದರು ಇವರು ಮಾತ್ರ ಬದಲಾಗಿಲ್ಲ. ಹಾಗಾಗಿ ಸ್ವಚ್ಚತೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರುವ ಇವರುಗಳ ಬಗ್ಗೆ ಪಟ್ಟಣ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.

ಮುಂದೆ ಓದಿ...

ಮಧುಗಿರಿ : ಸಸ್ಯ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಅನುದಾನ ಅಗತ್ಯ

ಮಧುಗಿರಿ :       ತಾಲೂಕಿನ ಸಸ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸಿಕೊಡಲಾಗುವುದು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ಪಟ್ಟಣದ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿ ನೆಟ್ಟು ಮಾತನಾಡಿದ ಅವರು ತಾಲೂಕಿನಲ್ಲಿ ಅಪಾರ ಗುಡ್ಡಗಾಡಿನ ಸಂಪತ್ತಿದ್ದು, ಅವುಗಳ ಒಡಲಲ್ಲಿ ಸಸ್ಯವನ್ನು ಬೆಳೆಸಿದರೆ ಸಮೃದ್ಧಿ ಅಂತರ್ಜಲ ಹಾಗೂ ಸುಸ್ಥಿರ ವಾರಾವರಣವನ್ನು ಸೃಷ್ಟಿಸಬಹುದು. ಈ ಗುಡ್ಡಗಾಡು ಪ್ರದೇಶದಲ್ಲಿ ನೀರನ್ನು ಹಿಡಿದಿಡುವ ಹಾಗೂ ಸೌಂದರ್ಯ ಹೆಚ್ಚಿಸುವ ಬಿದಿರನ್ನು ಹೆಚ್ಚಾಗಿ ಬೆಳಸಬೇಕು. ಅದಕ್ಕಾಗಿ ವಿಶೇಷ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿದರೆ ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸುತ್ತೇನೆ. ಇಂದು ಭೂಮಿಯ ಬೌಗೋಳಿಕ ಕ್ಷೇತ್ರ ಕಡಿಮೆಯಾಗುತ್ತಿದ್ದು, ಜನಸಂಖ್ಯೆ ಹೆಚ್ಚಾಗುತ್ತಿದೆ. ನೀರಿಗಾಗಿ ಬವಣೆ ಹಿಂದಿನ ಮಾತಾಗಿದ್ದು, ಪ್ರಸ್ತುತ ಉತ್ತಮ ಗಾಳಿಗಾಗಿ ಬವಣೆ ಎಂಬಂತಾಗಿದೆ. ಮರಗಳ ವೃದ್ಧಿಯಾಗದೆ ಉತ್ತಮ ಗಾಳಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮರಗಳನ್ನು ಬೆಳೆಸಿ ಉಳಿಸುವುದು ಕೇವಲ…

ಮುಂದೆ ಓದಿ...

ಮೂರನೇ ಅಲೆ ತಡೆಗೆ ಜಿಲ್ಲಾಡಳಿತ ಸಜ್ಜು

ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಂದ ವಿಶೇಷ ಮುತುವರ್ಜಿ, ಜಿಲ್ಲಾಡಳಿಕ್ಕೆ ಸದಾ ಮಾರ್ಗದರ್ಶನ, ಸೋಂಕಿನಿಂದ ಮಕ್ಕಳ ರಕ್ಷಣೆಗೆ ಪಣ ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಣಕ್ಕೆ ತಂದಿರುವ ತುಮಕೂರು ಜಿಲ್ಲಾಡಳಿತ ಈಗ ಸಂಭಾವ್ಯ ಮೂರನೇ ಅಲೆ ನಿಯಂತ್ರಣಕ್ಕೆ ಸಕಲ ರೀತಿಯಲ್ಲಿಯೂ ಸನ್ನದ್ಧವಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಮೂರನೇ ಅಲೆ ತಡೆಗೆ ವಿಶೇಷ ಯೋಜನೆಗಳನ್ನು ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಂಭಾವ್ಯ ಮೂರನೆ ಅಲೆಯ ಸೋಂಕಿನಿಂದ ಮಕ್ಕಳ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಿದೆ. ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಕ್ರಮ ವಹಿಸಿರುವ ಜಿಲ್ಲಾಡಳಿತ ಈಗಾಗಲೇ ಮಕ್ಕಳ ರಕ್ಷಣೆ ಕುರಿತು ವೈದ್ಯರಿಗೆ ವಿಶೇಷ ಕಾರ್ಯಾಗಾರ ನಡೆಸಿದೆ. ಇದರ ಜೊತೆಗೆ ಆಮ್ಲಜನಕ, ಹಾಸಿಗೆ ಸೇರಿದಂತೆ ಚಿಕಿತ್ಸಾ ಸೌಲಭ್ಯಗಳ ಸಿದ್ಧತೆಗೆ ಸಂಪೂರ್ಣ ವ್ಯವಸ್ಥೆ ಮಾಡಿಕೊಂಡಿದೆ. ವಿಶೇಷ ಕಾರ್ಯಾಗಾರ: ಸಂಭಾವ್ಯ ಕೋವಿಡ್ ಮೂರನೇ ಅಲೆಯು ಮಕ್ಕಳನ್ನು ಕಾಡುವ ನಿರೀಕ್ಷೆ ಹಿನ್ನೆಲೆಯಲ್ಲಿ ಕೋವಿಡ್…

ಮುಂದೆ ಓದಿ...