ಸಾಂಕ್ರಾಮಿಕ ಖಾಯಿಲೆ ಹರಡುವ ಭೀತಿಯಲ್ಲಿ ಜನ

ಚಿಕ್ಕನಾಯಕನಹಳ್ಳಿ:       ತಾಲ್ಲೂಕಿನಾದ್ಯಂತ ಈಗ ಮಲೇರಿಯಾ, ಡೆಂಗ್ಯು, ಚಿಕನ್ ಗುನ್ಯ ಮುಂತಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಜಾಗೃತಿ ಕಾರ್ಯಕ್ರಮಗಳು ನಡೆದಿದ್ದರೆ, ಪಟ್ಟಣದ 4ನೇ ವಾರ್ಡ್‍ನ ದಬ್ಬೆಗಟ್ಟ ಗ್ರಾಮದ ಮುಖ್ಯರಸ್ತೆಯೇ ಕೊಳಚೆಯಿಂದ ತುಂಬಿ ರೋಗವಾಹಕಗಳ ಆಶ್ರಯ ತಾಣವಾಗಿದ್ದು ಜನರು ಭಯದಿಂದ ಜೀವ ನಡೆಸುವಂತಾಗಿದೆ. ಪಟ್ಟಣದ ಪುರಸಭೆಗೆ ಸೇರಿದ ದಬ್ಬೆಘಟ್ಟ ಗ್ರಾಮದ ಶ್ರೀ ಮರುಳಪ್ಪ ದೇವಾಲಯದ ರಸ್ತೆಯಿಂದ ಶ್ರೀಕೆಂಪಮ್ಮ ದೇವಾಲಯದ ಮುಖ್ಯರಸ್ತೆ ಕೊಳಚೆ ನೀರಿನಿಂದ ಆವೃತಗೊಂಡಿದೆ. ಇದು ಗ್ರಾಮದ ಮುಖ್ಯ ರಸ್ತೆಯಾಗಿ ಬಳಕೆಯಾಗುತ್ತಿದ್ದು ಜನ ಜಾನುವಾರುಗಳ ಜೊತೆಗೆ ಧಾರ್ಮಿಕ ಉತ್ಸವಗಳು ಇದೇ ದಾರಿಯಲ್ಲಿ ಸಾಗಬೇಕಿದೆ. ಸದಾ ಕೊಳಚೆಯಿಂದ ಕೂಡಿರುವ ಈ ರಸ್ತೆಯ ಸನಿಹದಲ್ಲಿಯೇ ವಾಸದ ಮನೆಗಳಿದ್ದು, ಸೊಳ್ಳೆ ಹಾಗೂ ಕೊಳಚೆ ವಾಸನೆಯ ನಡುವೆಯೇ ವಾಸಿಸುತ್ತಿದ್ದಾರೆ. ಸದರಿ ರಸ್ತೆಯನ್ನು ಸರಿಪಡಿಸುವಂತೆ ಪುರಸಭೆಗೆ ಹಾಗೂ ವಾರ್ಡ್‍ನ ಸದಸ್ಯರಿಗೆ ಮನವಿ ಮಾಡಿದರೂ ಈ ಬಗ್ಗೆ ಈವರೆಗೂ ಗಮನ ಹರಿಸಿಲ್ಲ. ಮಳೆಗಾಲ ಆರಂಭಗೊಂಡಿದ್ದು,…

ಮುಂದೆ ಓದಿ...

ಉಳ್ಳವರಿಗೆ ಸರಕಾರಿ ಗೋಮಾಳದ ಸಾಗುವಳಿ ಚೀಟಿ

ತುಮಕೂರು:       ಸುಮಾರು 40 ವರ್ಷಗಳಿಂದ ಸರಕಾರಿ ಗೋಮಾಳವನ್ನು ಉಳುಮೆ ಮಾಡುತ್ತಾ ಜೀವನ ನಡೆಸುತ್ತಾ ಇದ್ದ ಕುಟುಂಬವನ್ನು ಒಕ್ಕಲೆಬ್ಬಿಸಿ, ಸದರಿ ಜಾಗವನ್ನು ಶ್ರೀಮಂತ ಕುಟುಂಬವೊಂದಕ್ಕೆ ಸಾಗುವಳಿ ಚೀಟಿ ಮಾಡಿಕೊಟ್ಟಿರುವ ಕೊರಟಗೆರೆ ತಹಶೀಲ್ದಾರ ಅವರ ಕ್ರಮವನ್ನು ಖಂಡಿಸಿ ಸೋಮವಾರ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದಪಟೇಲ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಂತ್ರಸ್ತ ಕುಟುಂಬದೊಂದಿಗೆ ಸುರಿವ ಮಳೆಯ ನಡುವೆಯೂ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನಾನಿರತ ರೈತ ಸಂಘ ಮತ್ತು ಹಸಿರುಸೇನೆಯ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ ಪಟೇಲ್,ಕೊರಟಗೆರೆ ತಾಲೂಕು ಅಕ್ಕಾಜಿಹಳ್ಳಿ ಸರ್ವೆ ನಂ 33 ರಲ್ಲಿ ಬರುವ 641 ಎಕರೆ ಸರಕಾರಿ ಗೋಮಾಳದಲ್ಲಿ ಕಾಮಣ್ಣ ಬಿನ್. ಲೇ ಚಿಕ್ಕನರಸಪ್ಪ ಮತ್ತು ದಾಳಿ ನರಸಪ್ಪ ಬಿನ್ ಲೇ ಚಿಕ್ಕನರಸಪ್ಪ ಎಂಬುವವರು ತಲಾ…

ಮುಂದೆ ಓದಿ...

ಸಿಲಿಂಡರ್ ಸ್ಪೋಟ : ಲಕ್ಷಾಂತರ ರೂಪಾಯಿ ನಷ್ಟ

ಕೊರಟಗೆರೆ:       ಅಲೆಮಾರಿ ಕೂಲಿ ಕಾರ್ಮಿಕ ಕುಟುಂಬ ವಾಸಿಸುತ್ತಿರುವ ಗುಡಿಸಲಿನಲ್ಲಿ ಯಾರು ಇಲ್ಲದ ವೇಳೆ ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮೂರು ಗುಡಿಸಲು, ದ್ವಿಚಕ್ರ ವಾಹನ ಮತ್ತು ದವಸದಾನ್ಯ ಬೆಂಕಿಗೆ ಆಹುತಿ ಆಗಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದ ಸಮೀಪ ಅಲೆಮಾರಿ ಕೂಲಿ ಕಾರ್ಮಿಕ ಕುಟುಂಬ ವಾಸಿಸುತ್ತಿರುವ ಗುಡಿಸಲಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟದಿಂದ 1ಲಕ್ಷ ಮೌಲ್ಯದ ದವಸದಾನ್ಯ ನಾಶವಾಗಿದೆ. ಚಿಂಪುಗಾನಹಳ್ಳಿ ಕೂಲಿ ಕಾರ್ಮಿಕ ಹನುಮಂತರಾಯಪ್ಪ ಮಾತನಾಡಿ, ನಮಗೆ ಸ್ವಂತ ಮನೆಯೇ ಇಲ್ಲ. ಕಳೆದ 20ವರ್ಷದಿಂದ ಗುಡಿಸಲಿನ ಗುಡಾರವೇ ನಮ್ಮ ಅರಮನೆ ಆಗಿದೆ. ನಾವು ವಾಸಿಸುವ ಕುಟುಂಬ ಮತ್ತು ನಮ್ಮ ಮಕ್ಕಳಿಗೆ ಸಮರ್ಪಕ ಭದ್ರತೆ ಇಲ್ಲದಿರುವ ಪರಿಣಾಮ ಆಕಸ್ಮಿಕವಾಗಿ ಗ್ಯಾಸ್ ನಿಲಿಂಡರ್ ಸಿಡಿದು 3 ಗುಡಿಸಲು ಸುಟ್ಟು ಭಸ್ಮವಾಗಿ 1 ಲಕ್ಷಕ್ಕೂ ಅಧಿಕ…

ಮುಂದೆ ಓದಿ...