ಬಸ್ ಪಾಸ್ ರಿಯಾಯಿತಿ ಕಡಿತ

ತುಮಕೂರು:      ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್‍ಅನ್ನು ಹಿಂದಿನ ವರ್ಷಗಳಂತೆ ನೀಡಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಒ) ಒತ್ತಾಯಿಸಿದೆ. ಪ್ರಸಕ್ತ ಸಾಲಿನಲ್ಲಿ ಶಾಲಾ, ಕಾಲೇಜುಗಳನ್ನು ತೆರೆದರೆ ಬಸ್ ಪಾಸ್ ರಿಯಾಯಿತಿ ವೆಚ್ಚವನ್ನು ಸರ್ಕಾರ ಭರಿಸುವುದಿಲ್ಲ ಎಂದು ನಿರ್ಧಾರ ಕೈಗೊಂಡಿರುವುದು ವಿದ್ಯಾರ್ಥಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ ಎಂದು ಎಐಡಿಎಸ್‍ಒ ಜಿಲ್ಲಾ ಸಂಚಾಲಕಿ ಟಿ.ಇ.ಅಶ್ವಿನಿ ಖಂಡಿಸಿದ್ದಾರೆ. ಈಗಾಗಲೇ ಕೋವಿಡ್‍ನಿಂದ ಜನಸಾಮಾನ್ಯರು ತತ್ತರಿಸಿದ್ದು, ಆರ್ಥಿಕ ಸಮಸ್ಯೆಗಳಿಂದ ನಲುಗಿದ್ದಾರೆ. ಅದೆಷ್ಟೋ ಕುಟುಂಬಗಳಿಗೆ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಉದ್ಯೋಗವಿಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಾನಸಿಕ ಒತ್ತಡ ಸೃಷ್ಟಿಸುವಂತಹ ಹಾಗೂ ಅವೈಜ್ಞಾನಿಕವಾಗಿ ‘ಒಂದು ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ’ ನಡೆಸಲು ಸರ್ಕಾರ ಮುಂದಾಗಿದೆ. ಅದರ ಜತೆಗೆ ಈಗ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡುವುದಿಲ್ಲ. ಪೂರ್ಣ ಹಣ ಭರಿಸಬೇಕು ಎಂದು ಹೇಳುತ್ತಿರುವುದು ವಿದ್ಯಾರ್ಥಿ ವಿರೋಧಿ…

ಮುಂದೆ ಓದಿ...

ಬಿಜೆಪಿ ಸರ್ಕಾರ ಕೆಳಗಿಳಿಯುವವರೆಗೂ ನಮ್ಮ ಹೋರಾಟ : ಜಯಚಂದ್ರ

ಚಿಕ್ಕನಾಯಕನಹಳ್ಳಿ:       ಜನಸಾಮಾನ್ಯರ ಬದುಕನ್ನು ಬೀದಿಗೆ ತಂದ ಬಿಜೆಪಿ ಸರ್ಕಾರ ಕೆಳಗಿಳಿಯುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಮಾಜಿ ಸಚಿವ ಟಿ. ಬಿ.ಜಯಚಂದ್ರ ತಿಳಿಸಿದರು. ಕಾಂಗ್ರೆಸ್‍ನ ರಾಜ್ಯಾಧ್ಯಕ್ಷರ ಕರೆಯ ಮೇರೆಗೆ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರಿಂದ ಪಟ್ಟಣದ ಶ್ರೀ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಎತ್ತಿನಗಾಡಿ ಹಾಗೂ ಸೈಕಲ್ ಜಾಥಾದೊಂದಿಗೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಟಿ.ಬಿ. ಜಯಚಂದ್ರ ಮಾತನಾಡಿ ಪೆಟ್ರೋಲ್, ಡೀಸೆಲ್, ಗ್ಯಾಸ್‍ಗಳ ಬೆಲೆ ಗಗನಕ್ಕೆ ಏರಿದೆ, ಇದರ ಜೊತೆ ಅಗತ್ಯ ವಸ್ತುಗಳ ಬೆಲೆಯೂ ಎರಿದ್ದು ಜನಸಾಮಾನ್ಯರ ಬದುಕು ಅತಂತ್ರವಾಗಿದೆ. ಕೋವಿಡ್ ನಿಯಂತ್ರಣದಲ್ಲಿ ವಿಫಲವಾದ ಬಿಜೆಪಿ ಸರ್ಕಾರ ಕೇವಲ ಅಂಬಾನಿ, ಅದಾನಿಯಂತಹವರ ಬೃಹತ್ ಉದ್ಯಮಿಗಳ ಕೈಗೆ ದೇಶದ ಆರ್ಥಿಕತೆ ನೀಡುವ ಮೂಲಕ ಸರ್ಕಾರ ಉದ್ಯಮಿಗಳ ಕೈಗೊಂಬೆಯಾಗಿದೆ. ಇದರಿಂದ ಎಲ್ಲಾ ಶ್ರಮಿಕ ವರ್ಗಗಳ ಬದುಕು ಡೋಲಾಯಮಾನವೆನಿಸಿದೆ ಎಂದರು. ಎಂಎಲ್‍ಸಿ ರಮೇಶ್‍ಬಾಬು ಮಾತನಾಡಿ, ಕಾರ್ಪೊರೇಟ್ ಸರ್ಕಾರದ ಅಧೀನದಲ್ಲಿರುವ ಈ…

ಮುಂದೆ ಓದಿ...

ಸ್ಮಾರ್ಟ್‍ಸಿಟಿ ನಗರಕ್ಕೆ ಖಾಲಿ ನಿವೇಶನಗಳೇ ಕಂಟಕ

ತುಮಕೂರು:       ಸಾವಿರಾರು ಖಾಲಿ ನಿವೇಶನ. ಈ ನಿವೇಶನದಲ್ಲಿ ಬೆಳೆದ ಗಿಡ ಗಂಟಿಗಳಲ್ಲಿ ವಿಷಪೂರಿತ ಹಾವುಗಳು. ಜನವಸತಿ ಪ್ರದೇಶದ ಖಾಲಿ ನಿವೇಶನಗಳಲ್ಲಿಯೂ ತುಂಬಿ ಹೋಗಿರುವ ಕಸ, ಕಡ್ಡಿ ಕೋಳಿ ತ್ಯಾಜ್ಯ. ದುರ್ನಾತದ ಜತೆಯಲ್ಲೇ ಜನತೆಯ ನಿತ್ಯ ಜೀವನ? ಈ ಸಮಸ್ಯೆಗಳೆಲ್ಲಾ ಇರುವುದು ಬೇರೆಲ್ಲೂ ಅಲ್ಲ, ಶೈಕ್ಷಣಿಕ ನಗರ ಹಾಗೂ ಸ್ಮಾರ್ಟ್‍ಸಿಟಿ ನಗರಗಳ ಪಟ್ಟಿಗೆ ಸೇರ್ಪಡೆಯಾಗಿರುವ ತುಮಕೂರು ನಗರದಲ್ಲಿ. ರಾಜಧಾನಿ ಬೆಂಗಳೂರಿಗೆ ಹೆಬ್ಬಾಗಿಲಾಗಿರುವ ತುಮಕೂರು ನಗರ ಸ್ವತ್ಛತೆಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಈಗ ಮೊದಲನೇ ಸ್ಥಾನದ ಪ್ರಯತ್ನದಲ್ಲಿ ಇರುವ ಸ್ಮಾರ್ಟ್‍ಸಿಟಿ ನಗರದಲ್ಲಿನ ಖಾಲಿ ನಿವೇಶನ ಗಳು ಜನ ಸಾಮಾನ್ಯರಿಗೆ ಕಿರಿಕಿರಿಯನ್ನುಂಟು ಮಾಡಿವೆ. ನಗರ ಹೊರವಲಯದ ಜನವಸತಿ ಪ್ರದೇಶದ ಜನ ನಿತ್ಯವೂ ಸುಟ್ಟ ಕೆಟ್ಟ ವಾಸನೆ, ನಿವೇಶನಗಳಲ್ಲಿ ವಾಸವಾಗಿರುವ ಹಾವುಗಳು, ದುರ್ವಾಸನೆ ಒಂದಲ್ಲ, ಎರಡಲ್ಲ ಹತ್ತಾರು ಸಮಸ್ಯೆ ನಿತ್ಯಕಾಡುತ್ತಿದೆ. ಗಿಡ-ಗಂಟಿ:ಹಣವಂತರು ತಮ್ಮ ಹಣವನ್ನು ದ್ವಿಗುಣಗೊಳಿಸಲು ನಗರದ ವಿವಿಧ…

ಮುಂದೆ ಓದಿ...

85 ಸಾ.ಕೋ. ವೆಚ್ಚದಲ್ಲಿ ಜವಳಿ ಪಾರ್ಕ್ ನಿರ್ಮಾಣ : ಸಂಸದ ಬಸವರಾಜು

ಮಧುಗಿರಿ :        ಮಧುಗಿರಿ ತಾಲೂಕು ಅತ್ಯಂತ ಬರಪಿಡಿತ ಪ್ರದೇಶವಾಗಿದ್ದು, ಮುಂದಿನ 3 ವರ್ಷದೊಳಗೆ ತಾಲೂಕಿನ 1100 ಎಕರೆ ಪ್ರದೇಶದಲ್ಲಿ 85 ಸಾವಿರ ಕೋಟಿ ವೆಚ್ಚದಲ್ಲಿ ಜವಳಿ ಪಾಕ್ ನಿರ್ಮಾಣ ಸೇರಿದಂತೆ ಜೊತೆಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಜಿ.ಎಸ್. ಬಸವರಾಜು ಭರವಸೆ ನಿಡಿದರು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಮತ್ತು ತಾಲೂಕು ಆಡಳಿತ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದ ಅವರು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಮಧುಗಿರಿ ತಾಲೂಕು ಅತೀ ಹಿಂದುಳಿದ ತಾಲೂಕಾಗಿದ್ದು, ಪ್ರತಿ ನಿತ್ಯ ಸಾವಿರಾರು ಕಾರ್ಮಿಕರು ಉದ್ಯೋಗ ಅರಸಿ ದೊಡ್ಡಬಳ್ಳಾಪುರ, ಬೆಂಗಳೂರು ಸೇರಿದಂತೆ ಸುತ್ತಮುತ್ತಲ ನಗರಗಳಿಗೆ ಕುಟುಂಬಗಳನ್ನು ತೊರೆದು ಹೋಗುತ್ತಿದ್ದಾರೆ. ಇದನ್ನು ಮನಗಂಡು ತಾಲುಕಿನ ಜನತೆಗೆ…

ಮುಂದೆ ಓದಿ...