ಬಡ ಮಕ್ಕಳಿಗೆ 100 ಕೋಟಿ ರೂಗಳ ಬೃಹತ್ ವಸತಿಶಾಲೆ

ಕೊರಟಗೆರೆ:      ಸ್ವಾತಂತ್ರ್ಯದ ನಂತರ ಭಾರತದ ಶಿಕ್ಷಣವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆಯಾಗಿದ್ದು, ಕೊರಟಗೆರೆ ವಿಧಾನಸಭಾ ವ್ಯಾಪ್ತಿಯಲ್ಲು ಸಹ ಪ್ರತಿಭಾನ್ವಿತ ಬಡ ಮಕ್ಕಳಿಗೆ 100 ಕೋಟಿ ರೂಗಳ ಅನುದಾನದ ಬೃಹತ್ ವಸತಿಶಾಲೆಗಳನ್ನು ನಿರ್ಮಿಸಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ. ಪರಮೇಶ್ವರ್ ತಿಳಿಸಿದರು. ಅವರು ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟ ಸಮೀಪದ ನೇಗಳಾಲ ಗ್ರಾಮದ ಹೊರವಲಯದಲ್ಲಿ 24.5 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇಂದೀರಾಗಾಂಧಿ ವಸತಿ ಶಾಲೆಯ ಕಟ್ಟಡವನ್ನು ಪರಿಶೀಲಿಸಿ ಮಾತನಾಡಿ, ಸ್ವತಂತ್ರ ನಂತರ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬಹುದೊಡ್ಡ ಕ್ರಾಂತಿಯನ್ನು ಕಂಡಿದೆ. 1951ರಲ್ಲಿ ಶೇಕಡ 18.33 ರಷ್ಟಿದ ಸಾಕ್ಷಾರತಾ ಪ್ರಮಾಣವು 2011ರ ಹೊತ್ತಿಗೆ ಶೇಕಡ 74.04 ಕ್ಕೆ ಮಟ್ಟಕ್ಕೆ ಏರಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆಯಾಗಿದೆ. ಅದಕ್ಕಾಗಿ ಸರ್ಕಾರವು ಸಾವಿರಾರು ಕೋಟಿ ಯೋಜನೆಗಳನ್ನು ಅಕ್ಷರಜ್ಞಾನಕ್ಕಾಗಿ ನೀಡುತ್ತಿದೆ. ಸಮಾಜದಲ್ಲಿ ಬಡವರು,ತುಳಿತಕ್ಕೆ ಒಳಗಾದವರು ಶಿಕ್ಷಣದಿಂದ ಉನ್ನತ ಸ್ಥಾನವನ್ನು ತಲುಪಿದ್ದಾರೆ.…

ಮುಂದೆ ಓದಿ...