ತುರುವೇಕೆರೆ: ರೈತ ನಾಯಕ ಟಿಕಾಯತ್ಗೆ ಮಸಿ ಬಳಿದಿರುವ ಘಟನೆಯನ್ನು ಖಂಡಿಸಿ ರೈತ ಸಂಘ, ಸಿ.ಐ.ಟಿ.ಯು. ಸೇರಿದಂತೆ ವಿವಿದ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು ಕೃಷಿ ಪ್ರಧಾನ ರಾಷ್ಟ್ರದಲ್ಲಿ ರೈತ ನಾಯಕನಿಗೆ ಮಸಿ ಬಳಿದಿರುವುದು ಇಡೀ ದೇಶದ ರೈತ ಸಂಕುಲವನ್ನು ಅವಮಾನಿಸಿದಂತಾಗಿದೆ. ಬಿ.ಜೆ.ಪಿ. ಪಕ್ಷವು ಪರೋಕ್ಷವಾಗಿ ತನ್ನದೇ ಪಕ್ಷದ ಗೂಂಡಾಗಳಿಂದ ಕೃತ್ಯವೆಗಿರುವುದು ನಾಚಿಕೆಗೇಡು. ರೈತ ನಾಯಕನೆಂದು ಬಿಂಬಿಸಿಕೊಂಡು ವಸೂಲಿ ದಂದೆಗಿಳಿದಿರುವ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಸರಕಾರ ತನಿಖೆ ನಡೆಸಲಿ ಎಂದು ಆಗ್ರಹಿಸಿದರು. ಸಿ.ಐ.ಟಿ.ಯು ಕಾರ್ಯದಶೀ ಸತೀಶ್ ಮಾತನಾಡಿ ದೇಶದಲ್ಲಿ ದಿನಗಳೆದಂತೆ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಬಿ.ಜೆ.ಪಿ. ಸರಕಾರ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ರೈತರು ಬಡ ಜನರನ್ನು ಶೋಷಣೆ ಮಾಡಲು ಮುಂದಾಗಿದೆ. ಹೋರಾಟಗಾರನ್ನು ಸಹ ಬಿಡದೇ ಅವಮಾನಿಸುತ್ತಿರುವುದು ದೇಶವಾಸಿಗಳಿಗೆ ಮಾಡಿದ ಅವಮಾನ, ದಿನಕ್ಕೊಂದು ಅನಗತ್ಯಗಳು ರಾಜ್ಯದಲ್ಲಿ ಘಟಿಸುತ್ತಿದ್ದು ರಾಜ್ಯ ಸರಕಾರದ ಆಡಳಿತ ನಿಷ್ಕ್ರಿಯವಾಗಿದ್ದು ರಾಷ್ಟ್ರಪತಿ ಆಳ್ವಿಕೆ…
ಮುಂದೆ ಓದಿ...