ಚಿಕ್ಕನಾಯಕನಹಳ್ಳಿ: ಬೌದ್ಧ ಧರ್ಮಕ್ಕೆ ಸೇರಿದ್ದರೂ ಪರವಾಗಿಲ್ಲ ಕ್ರಿಶ್ಚಿಯನ್ ಆಗಬಾರದು ಎಂದು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು. ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗದ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ಈ ರೀತಿ ಹೇಳಿದರು. ಸಭೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಂದಿ ಹಾಜರಾಗಿದ್ದರು ಗಮನಿಸಿದ ಅವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಇದು ಸಭೆಯ ಅಥವಾ ಸಮಾರಂಭನ ಎಂದು ಪ್ರಶ್ನಿಸುತ್ತಾ ಕೇವಲ ಮುಖಂಡರುಗಳಿಗೆ ಮಾತ್ರ ಸಭೆಗೆ ಹಾಜರಾಗಲು ಸೂಚಿಸಬೇಕು ಇದು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಾಜಗಳಿಗೆ ಸೇರಿದ ಕುಂದು ಕೊರತೆಯ ಸಭೆ ಇಲ್ಲಿ ಖಾಸಗಿ ವೈಯಕ್ತಿಕ ಅಭಿಪ್ರಾಯಗಳು ಹೆಚ್ಚು ಬರುವುದು ಬೇಡ ಎಂದು ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಮುಖಂಡರಿಗೆ ಅಷ್ಟೇ ಆಹ್ವಾನ ನೀಡಬೇಕು ಎಂದು ಖಡಕ್ಕಾಗಿ ಅಧಿಕಾರಿಗೆ ಸೂಚಿಸಿದರು. ದುಗಡಿಹಳ್ಳಿ ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಮನಸಾರೆ ಜಾಬ್ ಕಾರ್ಡ್ ಬಳಸಿಕೊಂಡು ಅವರಿಗೆ ಬೇಕಾದ…
ಮುಂದೆ ಓದಿ...