ಪತ್ರಿಕಾಭವನಕ್ಕೆ ಪಾಲಿಕೆ ಆಯುಕ್ತರ ಭೇಟಿ

 ತುಮಕೂರು:       ನಗರದ ಬಾಳನಕಟ್ಟೆ ಪ್ರದೇಶದಲ್ಲಿರುವ ಪತ್ರಿಕಾಭವನಕ್ಕೆ ಪಾಲಿಕೆ ಆಯುಕ್ತ ಭೂಬಾಲನ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.       ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಅವರು ಪತ್ರಿಕಾಭವನದ ಸುತ್ತಮುತ್ತ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ಭವನದ ಮುಂದೆ ಖಾಸಗಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ತೊಂದರೆಯುಂಟಾಗುತ್ತಿದ್ದು, ಕ್ರಮ ಕೈಗೊಳ್ಳಬೇಕೆಂದು ಆಯುಕ್ತರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಆಯುಕ್ತರು ಕೂಡಲೇ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.       ನಂತರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಭೇಟಿ ನೀಡಿ ಆವರಣವನ್ನು ಪರಿಶೀಲಿಸಿದರು. ಆವರಣದ ಮುಂದಿರುವ ಚರಂಡಿಯಲ್ಲಿ ಶೌಚಾಲಯದ ನೀರು ಹರಿಯುತ್ತಿರುವುದರಿಂದ ದುರ್ವಾಸನೆ ಬರುತ್ತಿದ್ದು, ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ವಾರ್ತಾ ಸಹಾಯಕಿ ರೂಪಕಲಾ ಅವರು ಮನವಿ ಮಾಡಿದಾಗ ಕೂಡಲೇ ಕ್ರಮ ಕೈಗೊಳ್ಳಬೇಕೆಂದು…

ಮುಂದೆ ಓದಿ...

ಕಂದಾಯ, ಅರಣ್ಯ ಇಲಾಖೆಯಿಂದ ಜಂಟಿ ಸರ್ವೆಗೆ ಸಚಿವರ ಸೂಚನೆ!

ತುಮಕೂರು:       ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಹಾಗೂ ಮರಳು ದಂಧೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಾಗೂ ಜನಪ್ರತಿನಿಧಿಗಳಿಂದ ಹಲವಾರು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಗಳಿಗೆ ಸೇರಿದ ಭೂಪ್ರದೇಶವನ್ನು ಕೂಡಲೇ ಜಂಟಿ ಸರ್ವೆಗೆ ಕ್ರಮ ಕೈಗೊಳ್ಳಬೇಕೆಂದು ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ಅವರು ಜಿಲ್ಲಾಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಪರವಾನಗಿ ಇಲ್ಲದೆ ಅನಧಿಕೃತವಾಗಿ ನಡೆಸುವ ಕ್ರಷರ್‍ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಗುತ್ತಿಗೆ ಪಡೆದ ಕ್ವಾರಿಗಳು ಸ್ಥಳಾಂತರಗೊಂಡಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು. ವಾಹನಗಳಲ್ಲಿ ಜಲ್ಲಿ, ಮರಳು, ಅಲಂಕಾರಿಕ ಶಿಲೆ ಮತ್ತಿತರ ಖನಿಜ ಹಾಗೂ ಗಣಿಗಾರಿಕೆ ಸರಕುಗಳನ್ನು ನಿಗಧಿತ ಭಾರಕ್ಕಿಂತ ಅತಿಯಾಗಿ ಹೇರಿಕೊಂಡು ಸಾಗಿಸುವಂತಿಲ್ಲ ಎಂದು ತಿಳಿಸಿದರಲ್ಲದೆ, ಗಣಿಬಾಧಿತ…

ಮುಂದೆ ಓದಿ...

ಗೊರವನಹಳ್ಳಿ ಬಳಿ ಸೀಮೆ ಎಣ್ಣೆ ಸುರಿದು ಯುವತಿಯ ಕೊಲೆ!!

ಕೊರಟಗೆರೆ:       ಅಪರಿಚಿತ ಯುವತಿಗೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಗುರುತು ಸೀಗದ ರೀತಿಯಲ್ಲಿ ಕೊಲೆ ಮಾಡಿರುವ ಘಟನೆ ತುಂಬುಗಾನಹಳ್ಳಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಭಾನುವಾರ ಮುಂಜಾನೆ ರೈತ ತನ್ನ ಜಮೀನಿಗೆ ತೆರಳುವ ವೇಳೆ ಶವ ಪತ್ತೆಯಾಗಿದ್ದು, ತಾಲೂಕಿನ ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ತುಂಬಗಾನಹಳ್ಳಿ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಬೇರೆ ಕಡೆ ಕೊಲೆ ಮಾಡಿ ಗುರುತು ಸೀಗದೇ ಇರಲಿ ಎಂದು ದೂರದ ಅರಣ್ಯದಲ್ಲಿ ಯುವತಿಯ ಶವ ತಂದು ಸೀಮೆಎಣ್ಣೆಯಿಂದ ಸಂಪೂರ್ಣವಾಗಿ ಸುಟ್ಟು ಹಾಕಿದ್ದಾರೆ.       ಕೊಲೆಯಾದ ಯುವತಿಗೆ ಸುಮಾರು 22ರಿಂದ 25ವರ್ಷ ವಯಸ್ಸಾಗಿದೆ. ಕಾಲಿಗೆ ಹೊಸ ಚಪ್ಪಲಿ, ಕೈತುಂಬ ಹಸಿರು ಬಳೆ ಮತ್ತು ಚೂಡಿದಾರ ಹಾಕಿದ್ದಾಳೆ. ಕುತ್ತಿಗೆ, ಮುಖ, ತಲೆ ಮತ್ತು ದೇಹ ಗುರುತು ಸೀಗದಂತಾಗಿದೆ. ಹಾಕಿ ಮೇಲ್ನೋಟಕ್ಕೆ ಪ್ರೀತಿಯ…

ಮುಂದೆ ಓದಿ...

ಕೆಎಸ್‍ಒಯು: ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನ ನಿಗಧಿ

ತುಮಕೂರು:       ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕವನ್ನು ನಿಗಧಿಪಡಿಸಲಾಗಿದೆ ಎಂದು ತುಮಕೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ.       ವಿ.ವಿ.ಯಲ್ಲಿ 2011-12 ಹಾಗೂ 2012-13ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ಬಿ.ಎ/ಬಿ.ಕಾಂ ವಿದ್ಯಾರ್ಥಿಗಳು ಹಾಗೂ 2018-19ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ಬಿ.ಎ/ಬಿ.ಕಾಂ, ಎಂ.ಎ/ಎಂ.ಕಾಂ ವಿದ್ಯಾರ್ಥಿಗಳು 200 ರೂ.ಗಳ ದಂಡದೊಂದಿಗೆ ಪರೀಕ್ಷಾ ಶುಲ್ಕ ಪಾವತಿಸಲು ಜೂನ್ 29 ಅಂತಿಮ ದಿನವಾಗಿರುತ್ತದೆ. ಅದೇ ರೀತಿ 2018-19ನೇ ಸಾಲಿನಲ್ಲಿ ಪ್ರವೇಶ ಪಡೆದ ಎಂಬಿಎ ವಿದ್ಯಾರ್ಥಿಗಳಿಗೆ (ಪ್ರಥಮ ಸೆಮಿಸ್ಟರ್)ದಂಡದೊಂದಿಗೆ ಪರೀಕ್ಷಾ ಶುಲ್ಕ ಪಾವತಿಸಲು ಜುಲೈ 6 ಕಡೆಯ ದಿನವಾಗಿದೆ.ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‍ಸೈಟ್ www.ksoumysore.karnataka.gov.in  ಅಥವಾ ದೂರವಾಣಿ ಸಂಖ್ಯೆ 0821-2519947/2515405/2519948/2519942ನ್ನು ಸಂಪರ್ಕಿಸಬಹುದೆಂದು ಅವರು ತಿಳಿಸಿದ್ದಾರೆ.

ಮುಂದೆ ಓದಿ...