ತುಮಕೂರು : ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸ್ವಚ್ಛತಾ ಕಾರ್ಯ

 ತುಮಕೂರು :        ದಿನನಿತ್ಯ ನ್ಯಾಯಾಲಯ ಕಚೇರಿ, ಕಲಾಪದಲ್ಲಿಯೇ ಕಾಲ ಕಳೆಯುತ್ತಿದ್ದ ನ್ಯಾಯಾಧೀಶರು, ವಕೀಲರುಗಳು ಇಂದು ನ್ಯಾಯಾಲಯದ ಆವರಣವನ್ನು ಸ್ವಚ್ಛಗೊಳಿಸಿದರು.        ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘ(ರಿ)ಗಳ ಸಹಯೋಗದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ಅವರು ನ್ಯಾಯಾಲಯ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಅರಿವು ಮೂಡಿಸಿದರು.          ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೆಂದ್ರ ಶೆಟ್ಟಿಗಾರ್ ಅವರು ಮಾತನಾಡಿ, ಹುತ್ಮಾತರ ದಿನಾಚರಣೆ ಅಂಗವಾಗಿ “ನಮ್ಮ ನ್ಯಾಯಾಲಯ-ಸ್ವಚ್ಛ ನ್ಯಾಯಾಲಯ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತಾನು ವಾಸಿಸುವ ಮನೆ, ಕೆಲಸ ಮಾಡುವ ಸ್ಥಳದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಸ್ವಚ್ಛತೆ ಕಾಪಾಡಿದರೆ ಪ್ರತಿಯೊಬ್ಬರ ಆರೋಗ್ಯ ಚೆನ್ನಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಮನೆಯ…

ಮುಂದೆ ಓದಿ...

ಮಾರ್ಚ್ ಅಂತ್ಯದೊಳಗೆ ಅಂಗನವಾಡಿ ಕಟ್ಟಡಗಳ ಕಾಮಗಾರಿಗಳ ಪೂರ್ಣಗೊಳಿಸಲು

 ತುಮಕೂರು :        ವಿವಿಧ ಯೋಜನೆಗಳಡಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ಮಾರ್ಚ್-2021ರ ಅಂತ್ಯದೊಳಗಾಗಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ, ಮಕ್ಕಳ ಬಳಕೆಗೆ ಇಲಾಖೆಗೆ ಹಸ್ತಾಂತರ ಮಾಡಲು ನಿರ್ಮಾಣ ಏಜೆನ್ಸಿಗಳಾದ ನಿರ್ಮಿತಿ ಕೇಂದ್ರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‍ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.       ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅನುಷ್ಠಾನವಾಗುತ್ತಿರುವ ಐ.ಸಿ.ಡಿ.ಎಸ್ ಕಾರ್ಯಕ್ರಮ ಸೇರಿದಂತೆ ವಿವಿಧ ಯೋಜನೆ/ಕಾರ್ಯಕ್ರಮಗಳ 2020-21ನೇ ಸಾಲಿನ 3ನೇ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.        2020-21ನೇ ಸಾಲಿನಲ್ಲಿ ಜಿಲ್ಲೆಯ ಅಂಗನವಾಡಿ ಕಟ್ಟಡಗಳ ನಿರ್ವಹಣೆಗೆ ಬಿಡುಗಡೆಯಾಗಿರುವ 170 ಲಕ್ಷ ರೂ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿಕೊಂಡು ಅಂಗನವಾಡಿ ಕಟ್ಟಡ…

ಮುಂದೆ ಓದಿ...

2 ಕ್ವಿಂಟಲ್‍ಗೂ ಅಧಿಕ ಅಡಿಕೆ ಗೊನೆ ಕಳ್ಳತನ ಮಾಡಿದ್ದ ಕಳ್ಳರ ಬಂಧನ

ಕೊರಟಗೆರೆ :        ರೈತರ ಅಡಿಕೆ ತೋಟಕ್ಕೆ ರಾತ್ರೋರಾತ್ರಿ ಲಗ್ಗೆಯಿಟ್ಟು 2ಕ್ವಿಂಟಲ್‍ಗೂ ಅಧಿಕ ಅಡಿಕೆ ಗೊನೆಗಳನ್ನೇ ಕಳ್ಳತನ ಮಾಡಿದ್ದ 6ಜನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕೊರಟಗೆರೆ ಸಿಪಿಐ ನಧಾಪ್ ಮತ್ತು ಪಿಎಸೈ ಮುತ್ತುರಾಜು ನೇತೃತ್ವದ ಪೊಲೀಸರ ತಂಡ ಶುಕ್ರವಾರ ಯಶಸ್ವಿ ಆಗಿದ್ದಾರೆ.       ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಪಂ ವ್ಯಾಪ್ತಿಯ ಥರಟಿ ಗ್ರಾಮದ ರೈತ ಗೋವಿಂದಪ್ಪನ ಅಡಿಕೆ ತೋಟದಲ್ಲಿ ಡಿ.22ರಂದು ಮಧ್ಯರಾತ್ರಿ 2ಕ್ವಿಂಟಲ್‍ನಷ್ಟು ಅಡಿಕೆ ಗೊನೆಗಳನ್ನು 6ಜನ ಕಳ್ಳರ ತಂಡ ಕಳ್ಳತನ ಮಾಡಿಕೊಂಡು ಪರಾರಿ ಆಗಿರುವ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.       ಪ್ರಕರಣದ ಪತ್ತೆಗೆ ತುಮಕೂರು ಎಸ್ಪಿ ಡಾ.ಕೋನವಂಶಿಕೃಷ್ಣ, ಹೆಚ್ಚುವರಿ ಎಸ್ಪಿ ಉದೇಶ್, ಮಧುಗಿರಿ ಡಿವೈಎಸ್ಪಿ ರಾಮಕೃಷ್ಣ ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಐ ನಧಾಪ್, ಪಿಎಸೈ ಮುತ್ತುರಾಜು ನೇತೃತ್ವದ ವಿಶೇಷ ತಂಡವು 6ಜನ…

ಮುಂದೆ ಓದಿ...

ರಸ್ತೆ ಅಪಘಾತವನ್ನು ತಡೆಗಟ್ಟಿ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳಿ

ಕೊರಟಗೆರೆ:      ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸುವುದರ ಮೂಲಕ ರಸ್ತೆ ಅಪಘಾತವನ್ನು ತಡೆಗಟ್ಟಿ ದೇವರು ಕೊಟ್ಟಿರುವ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳಿ ಎಂದು ಎ.ಎಸ್.ಐ ಯೋಗೇಶ್ ತಿಳಿಸಿದರು.       ಪಟ್ಟಣದ ಎಸ್.ಎಸ್.ಆರ್ ಸರ್ಕಲ್ ನ ಬಸ್ಸ್ ನಿಲ್ದಾಣದಲ್ಲಿ ಗುರುವಾರ ನೂರಾರು ಆಟೋ ಚಾಲಕರು, ದ್ವಿಚಕ್ರ ವಾಹನ ಸವಾರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳ ಒಂದೆಡೆ ಸೇರಿಸಿ ರಸ್ತೆ ಸುರಕ್ಷಾ ಸಪ್ತಾಹದ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು.       ವಾಹನ ಚಾಲಕ ನಮ್ಮ ಪಾಲಿನ ದೇವರು. ಶ್ರೀಕೃಷ್ಣ ರಥವನ್ನು ಮುನ್ನಡಿಸಿದಂತೆ ತಾವು ವಾಹನವನ್ನು ಚಲಾಯಿಸುತ್ತೀರಿ. ಕಡ್ಡಾಯವಾಗಿ ವಾಹನ ಚಾಲನಾ ಪತ್ರವನ್ನು ಪಡೆದುಕೊಂಡು ಚಲಾಯಿ ಸಬೇಕು. ಚಾಲನಾ ಪರವಾನಿಗೆ ಇಲ್ಲದೆ ಹಾಗೂ ಅಪ್ರಾಪ್ತ ಬಾಲಕರು ವಾಹನ ಚಾಲನೆ ಮಾಡುವುದು ಕಾನೂ ನು ಅಪರಾಧ ವಾಗಿದೆ. ವಾಹನಗಳಿಗೆ ಖಡ್ಡಾಯವಾಗಿ ವಿಮಾಪಾಲಿಸಿ ತಮ್ಮ ಕುಟುಂಬಗಳನ್ನು ರಕ್ಷಿಸಿ…

ಮುಂದೆ ಓದಿ...

ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ : ವಿದ್ಯಾರ್ಥಿನಿ ಸಾವು

ಕೊರಟಗೆರೆ:       ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಶಾಲೆ ಮುಗಿಸಿ ತನ್ನ ತಂದೆಯೊಡನೆ ಮನೆಗೆ ವಾಪಾಸ್ಸು ಆಗುತ್ತಿದ್ದ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.        ಪಟ್ಟಣದ ದೊಡ್ಡೇಗೌಡ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದ್ದು ತುಮಕೂರು ಮಾರ್ಗದಿಂದ ವೇಗವಾಗಿ ಬಂದ ದ್ವಿಚಕ್ರ ವಾಹನ ಮತ್ತು ಶಾಲೆ ಮುಗಿಸಿಕೊಂಡು ತಂದೆಯೊಟ್ಟಿಗೆ ಊರಿಗೆ ಹಿಂತಿರುತ್ತಿದ್ದ ದ್ವಿ ಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವವಾಗಿ ವಿದ್ಯಾರ್ಥಿನಿ ಅಸುನೀಗಿದ್ದಾಳೆ ಎಂದು ತಿಳಿದು ಬಂದಿದೆ.       ತಾಲ್ಲೂಕಿನ ಸಿ.ಎನ್ ದುರ್ಗ ಹೋಬಳಿಯ ಮಾಲಿಂಗನಹಟ್ಟಿ ಗ್ರಾಮದ ವಾಸಿ ಗೋಪಾಲಕೃಷ್ಣ ತನ್ನ ಮಗಳನ್ನು ಶಾಲೆಯಿಂದ ಕರೆದುಕೊಂಡು ಹೋಗುವಾಗ ಈ ಘಟನೆ ನಡೆದಿದ್ದು, 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವರ್ಷಿತಾ(12ವರ್ಷ)ಎಂಬ ವಿದ್ಯಾರ್ಥಿನಿಯೇ…

ಮುಂದೆ ಓದಿ...

ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತನ ಸಾವು

 ತುಮಕೂರು :        ನಗರ ಪೊಲೀಸ್ ಠಾಣಾ ವ್ಯಾಪ್ತಿ ಬಿ.ಎಸ್.ಎನ್.ಎಲ್. ಕಛೇರಿ ಮುಂಭಾಗ ಅಸ್ವಸ್ಥನಾಗಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಜನವರಿ 13ರಂದು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜನವರಿ 24ರಂದು ವ್ಯಕ್ತಿಯು ಮೃತಪಟ್ಟಿದ್ದು, ಈತನ ವಾರಸುದಾರರ ಬಗ್ಗೆ ಮಾಹಿತಿಯಿರುವುದಿಲ್ಲ. ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.       ಮೃತ ವ್ಯಕ್ತಿಯು ಚಿಕಿತ್ಸೆ ಪಡೆಯುವಾಗ ತನ್ನ ಹೆಸರು ಗುಂಡಪ್ಪ ಬಿನ್ ಬಸವರಾಜು, 70 ವರ್ಷ ವಯಸ್ಸು, ಕಡೂರು ತಾಲೂಕು, ಪಂಚನಹಳ್ಳಿ ಗ್ರಾಮದ ವಾಸಿ ಎಂದು ತಿಳಿಸಿದ್ದಾನೆ.      ಸುಮಾರು 150 ಸೆ.ಮೀ ಎತ್ತರ, ಬಡಜಕಲು ಶರೀರ, ಎಣ್ಣೆಗೆಂಪು ಮೈಬಣ್ಣ ಹೊಂದಿರುವ ಮೃತನ ಮೈ ಮೇಲೆ ನೀಲಿ ಬಣ್ಣದ ತುಂಬು ತೋಳಿನ ಜೀನ್ಸ್ ಷರ್ಟ್ ಇರುತ್ತದೆ. ಈತನ ವಾರಸುದಾರರು ಯಾರಾದರೂ ಇದ್ದಲ್ಲಿ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮನವಿ…

ಮುಂದೆ ಓದಿ...

ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ಶಿಕ್ಷಾರ್ಹ ಅಪರಾಧ

ಗುಬ್ಬಿ :        ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ಶಿಕ್ಷಾರ್ಹ ಅಪರಾಧ. ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಧ್ವಜ ವಿರೂಪಗೊಳಿಸಿದ ಪ್ರಕರಣ ವರ್ಷವಾದರೂ ವಿಳಂಭ ಅನುಸರಿಸಿರುವುದು ಸರಿಯಲ್ಲ. ತಾಲ್ಲೂಕು ಆಡಳಿತ ಮತ್ತು ಶಿಕ್ಷಣ ಇಲಾಖಾಧಿಕಾರಿಗಳು ತನಿಖೆ ತೀವ್ರಗೊಳಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಪ್ರಕರಣ ಅಂತ್ಯ ಕಾಣಿಸಿ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.        ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯೋಧರನ್ನು ಸನ್ಮಾನಿಸಿ ಮಾತನಾಡಿದ ಅವರು ಧ್ವಜ ಪ್ರಕರಣ ವಿಳಂಬವೇ ಪ್ರಶ್ನಾತೀತವಾಗಿದೆ. ಮೂರು ಇಲಾಖೆಗಳು ಈ ಪ್ರಕರಣಕ್ಕೆ ತ್ವರಿತ ಅಂತ್ಯ ಕಾಣಿಸಲು ಮೀನಾಮೇಷ ಎಣಿಸಿವೆ. ಜವಾಬ್ದಾರಿಯಿಂದ ನುಣಚಿಕೊಳ್ಳದೇ ಶೀಘ್ರದಲ್ಲಿ ತನಿಖೆ ಪೂರ್ಣಗೊಳಿಸಲು ತಹಸೀಲ್ದಾರ್ ಅವರಿಗೆ ಸೂಚಿಸಿದರು.        ಶೋಷಿತವರ್ಗವನ್ನು ಮೇಲೆತ್ತುವ ಮಹತ್ತರ ಆಶಯ ಸಂವಿಧಾನದ್ದಾಗಿದೆ. 70 ವರ್ಷ ಕಳೆದರೂ ಇನ್ನೂ ಸಮಾಜದಲ್ಲಿ ಸಮಾನತೆ ಸಾಧಿಸಲಾಗಿಲ್ಲ. ಮೇಲುಕೀಳು,…

ಮುಂದೆ ಓದಿ...

50 ವರ್ಷ ವೈದ್ಯಕೀಯ ಸೇವೆ ಸಲ್ಲಿಸಿರುವ ಡಾ||ಹನುಮಕ್ಕನವರ ಸೇವೆ ಅನನ್ಯ

ತುಮಕೂರು :        ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ದೊಡ್ಡಮನೆ ನರ್ಸಿಂಗ್ ಹೋಂ ಮುಂದಾಗಿದ್ದು, 50 ವರ್ಷ ವೈದ್ಯಕೀಯ ಸೇವೆ ಸಲ್ಲಿಸಿರುವ ಡಾ.ಹನುಮಕ್ಕ ಅವರ ಸೇವೆ ಅನನ್ಯವಾದದ್ದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು.       ನಗರದ ದೊಡ್ಡಮನೆ ನರ್ಸಿಂಗ್ ಹೋಂನಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಕೀಲುಮೂಳೆ ಮತ್ತು ಬೆನ್ನುಮೂಳೆ ಚಿಕಿತ್ಸಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೊಡ್ಡಮನೆ ನರ್ಸಿಂಗ್ ಹೋಂನ ಮುಖ್ಯಸ್ಥರಾಗಿರುವ ಡಾ.ಹನುಮಕ್ಕ ಅವರ ಸೇವೆಯಲ್ಲಿ 50 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿದ್ದಾರೆ, ಅವರೇ ದೊಡ್ಡ ಸಂಸ್ಥೆಯಾಗಿದ್ದಾರೆ ಎಂದರು.       ಸುತ್ತಮುತ್ತಲ ಜಿಲ್ಲೆಯ ಜನರಿಗೆ ಉತ್ತಮ ಚಿಕಿತ್ಸೆಯನ್ನು ನೀಡುತ್ತಿರುವ ದೊಡ್ಡಮನೆ ನರ್ಸಿಂಗ್ ಹೋಂನಲ್ಲಿ ಪ್ರಾರಂಭಗೊಂಡಿರುವ ಅತ್ಯಾಧುನಿಕ ಐಸಿಯು, ಎಕ್ಸರೇ ಘಟಕದಿಂದ ಗುಣಮಟ್ಟದ ಚಿಕಿತ್ಸೆ ದೊರೆಯುವಂತಾಗಿದ್ದು, ಡಾ.ಹನುಮಕ್ಕ ಅವರ ತಂಡಕ್ಕೆ ಶುಭ ಹಾರೈಸಿದರು.  …

ಮುಂದೆ ಓದಿ...

ಬಿಜೆಪಿ ಸೇರಿದ ವಾರದೊಳಗೆ ಮಂಜುನಾಥ್ ಯೂಟರ್ನ್

ಹುಳಿಯಾರು:       ಕಳೆದ ವಾರ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಸಮ್ಮುಖದಲ್ಲಿ ಕುಟುಂಬ ಸಮೇತ ಬಿಜೆಪಿ ಸೇರಿದ್ದ ಹಂದನಕೆರೆ ಹೋಬಳಿಯ ಬೊಮ್ಮೇನಹಳ್ಳಿಯ ಉದ್ಯಮಿ ಮಂಜುನಾಥ್ ಅವರು ಈಗ ಯೂ ಟರ್ನ್ ಹೊಡೆದಿದ್ದಾರೆ. ಹಂದನಕೆರೆ ಹೋಬಳಿಯ ಬೊಮ್ಮೇನಹಳ್ಳಿಯ ಉದ್ಯಮಿ ಮಂಜುನಾಥ್ ಅವರು ತಮ್ಮ ತಾಯಿ ವಿಎಸ್‍ಎಸ್‍ಎನ್ ಸದಸ್ಯರಾದ ಶಿವಮ್ಮ ಹಾಗೂ ಪತ್ನಿ ಗ್ರಾಪಂ ಸದಸ್ಯೆ ರಮ್ಯಾ ಅವರೊಂದಿಗೆ ಇತ್ತೀಚೆಗಷ್ಟೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.       ದೊಡ್ಡಎಣ್ಣೇಗೆರೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಕೈ ಜೋಡಿಸುವುದಾಗಿ ಹೇಳಿ ಮಾಧುಸ್ವಾಮಿ ಬೆಂಬಲಿಗರೊಂದಿಗೆ ವಾರದಿಂದ ಇದ್ದ ಮಂಜುನಾಥ್ ಮೀಸಲಾತಿ ಪ್ರಕಟಗೊಂಡ ನಂತರ ತಮ್ಮ ನಿಲುವು ಬದಲಾಯಿಸಿ ಜೆಡಿಎಸ್ ತೆಕ್ಕೆಗೆ ಸೇರಿಕೊಂಡಿದ್ದಾರೆ.       ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ಅವರೊಂದಿಗೆ ತಮ್ಮ ಪತ್ನಿ ರಮ್ಯಾ ಜೊತೆ ಮಂಜುನಾಥ್ ಕಾಣಿಸಿಕೊಂಡಿದ್ದಾರೆ. ಮೊದಲ ಅವಧಿಯ ದೊಡ್ಡಎಣ್ಣೇಗೆರೆಯ ಅಧ್ಯಕ್ಷರ ಮೀಸಲಾತಿ ಬಿಸಿಎಂ…

ಮುಂದೆ ಓದಿ...

ಹುಳಿಯಾರು : ಸಚಿವರಿಂದ ಕಾಲೇಜು ಶಿಕ್ಷಣ ಆಯುಕ್ತರಿಗೆ ತರಾಟೆ

ಹುಳಿಯಾರು :       ಪ್ರಥಮ ದರ್ಜೆ ಕಾಲೇಜು ಸಿಬ್ಬಂದಿ ಕೊರತೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಿಂದಲೇ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾದ ಪ್ರದೀಪ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದೆ.       ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಸಚಿವರೂ ಆದ ಜೆ.ಸಿ.ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ದೀರ್ಘ ಕಾಲದ ಕೋವಿಡ್ ರಜೆಯ ನಂತರ ಆರಂಭವಾದ ಕಾಲೇಜಿನ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಸೋಮವಾರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಅವರು ಡೆಪ್ಯೂಟೆಷನ್ ಮೇರೆಗೆ ಡಿ ಗ್ರೂಪ್ ನೌಕರರು ಬೇರೆಬೇರೆ ಕಾಲೇಜುಗಳಿಗೆ ತೆರಳಿರುವುದಿಂದ ಕಾಲೇಜಿನ ಸುಗಮ ಕೆಲಸ ಕಾರ್ಯಗಳಿಗೆ ತೊಡಕಾಗಿದೆ. ಹಾಗಾಗಿ ಕಾಲೇಜು…

ಮುಂದೆ ಓದಿ...