ಶ್ರೀಗಳು ಬೇಗ ಹುಷಾರಾಗಲೆಂದು ಬಾಹುಬಲಿ ಪ್ರಾರ್ಥನೆ ಮಾಡಿದ್ದೇವೆ

ತುಮಕೂರು :      ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳು ಬೇಗ ಹುಷಾರಾಗಲಿ ಎಂದು ಬಾಹುಬಲಿ ಪ್ರಾರ್ಥನೆ ಮಾಡಿದ್ದೇವೆ  ಶ್ರವಣ ಬೆಳಗೊಳದ ಚಾರುಕೀರ್ತ ಭಟ್ಟಾರಕ ಸ್ವಾಮೀಜಿ ಹೇಳಿದ್ದಾರೆ.       ಇಂದು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.  ಶ್ರೀಗಳು ಬೇಗ ಹುಷಾರಾಗಲಿ ಎಂದು ಬಾಹುಬಲಿ ಪ್ರಾರ್ಥನೆ ಮಾಡಿ ಬಂದಿದ್ದೇವೆ, ನಾಡಿನ ಶ್ರೇಷ್ಟ ಹಿರಿಯಜ್ಜ ಸಿದ್ದಗಂಗಾ ಶ್ರೀಗಳಿಗೆ ಆರೋಗ್ಯ ಭಾಗ್ಯ ಸಿಗಲಿ ಎಂದು ತಿಳಿಸಿದ್ದಾರೆ.      ಇನ್ನೂ ಸ್ವಾಮೀಜಿಗಳ ಆರೋಗ್ಯ ನಿನ್ನೆಗಿಂತ ಇಂದು ಸುಧಾರಣೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಮ್ಮ ನಾಡಿನ ಶ್ರೇಷ್ಟ ಸ್ವಾಮೀಜಿಗಳಲ್ಲಿ ಸಿದ್ದಗಂಗಾ ಶ್ರೀಗಳಿಗೆ ಬಹಳ ಗೌರವ ಇದೆ. ಮಠದ ಕೊಡುಗೆ ಅರ್ಥಭರಿತ ಸಾಧನೆಯಾಗಿದೆ ಎಂದು ಹೇಳಿದ್ದಾರೆ.

ಮುಂದೆ ಓದಿ...

ಶಬರಿಮಲೆ ದೇಗುಲ ಪ್ರವೇಶಿಸಿದ ಇಬ್ಬರು ಮಹಿಳೆಯರು!

ಶಬರಿಮಲೆ:        ಭಾರೀ ಹೋರಾಟ, ಪರ- ವಿರೋಧಗಳ ಬಳಿಕ ಕೊನೆಗೂ ಶಬರಿಮಲೆಯಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಸುಪ್ರೀಂ ತೀರ್ಪಿನ ಬಳಿಕ ಇದೇ ಮೊದಲ ಬಾರಿ ಇಬ್ಬರು ಮಹಿಳಾ ಭಕ್ತರು ಅಯ್ಯಪ್ಪನ ದೇಗುಲ ಪ್ರವೇಶಿಸಿದ್ದಾರೆ.        ಶತಮಾನಗಳಿಂದ ನಡೆದು ಬಂದ ಸಂಪ್ರದಾಯಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು, ಹೊಸ ವರ್ಷದ ಆರಂಭದಲ್ಲಿ 40 ವರ್ಷದ ಇಬ್ಬರು ಮಹಿಳೆಯರು ಪೊಲೀಸ್ ಬಿಗಿ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ್ದಾರೆ. ಮಕರ ಸಂಕ್ರಾಂತಿ ವೇಳೆಗೆ ದೇಗುಲ ಪ್ರವೇಶಿಸಬೇಕೆಂಬ ನಿಟ್ಟಿನಲ್ಲಿ ಮಹಿಳಾ ಕ್ರಾಂತಿ ಆರಂಭವಾಗಿತ್ತು. ಆದರೀಗ ತೀವ್ರ ವಿರೋಧದ ನಡುವೆಯೂ ಬುಧವಾರ ಮುಂಜಾನೆ 3.45ಕ್ಕೆ ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ. ದೇಗುಲ ಪ್ರವೇಶಿಸಿದ ಮಹಿಳೆಯರನ್ನು ಕನಕದುರ್ಗಾ ಹಾಗೂ ಬಿಂದು ಎಂದು ಗುರುತಿಸಲಾಗಿದ್ದು, ತಾವು ದೇಗುಲ ಪ್ರವೆಶಿಸುತ್ತಿರುವ ವಿಡಿಯೋವನ್ನು ಖುದ್ದು ಮಹಿಳೆಯರೇ ಬಹಿರಂಗಪಡಿಸಿದ್ದಾರೆ ಹಾಗೂ ಸುಪ್ರೀಂ ತೀರ್ಪಿನ ಬಳಿಕವೂ ಅಸಾಧ್ಯವೆನ್ನಲಾಗುತ್ತಿದ್ದ ಕಾರ್ಯವನ್ನು ಮಾಡಿದ್ದಾರೆ.    …

ಮುಂದೆ ಓದಿ...

ಸಿರಿಧಾನ್ಯ ಮೇಳ: ಕಾಲ್ನಡಿಗೆ ಜಾಥಾಕ್ಕೆ ಚಾಲನೆ

 ತುಮಕೂರು:       ಇದೇ ಜನವರಿ 5 ಮತ್ತು 6 ರಂದು ಏರ್ಪಡಿಸಿರುವ “ಸಾವಯವ ಸಿರಿಧಾನ್ಯ ಮೇಳ”ದಲ್ಲಿ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳದ ಪ್ರಯೋಜನ ಪಡೆಯಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದರು.        ಸಾವಯವ ಸಿರಿಧಾನ್ಯ ಮೇಳದ ಅಂಗವಾಗಿ ಇಂದು ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಿಂದ ಸಿರಿಧಾನ್ಯ ಮೇಳದ ಪ್ರಚಾರದ ಬಗ್ಗೆ ಏರ್ಪಡಿಸಿದ್ದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.       ಜಾಥಾವು ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಿಂದ ಎಸ್.ಎಸ್.ಪುರಂ ಮುಖ್ಯ ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿತು. ಜಾಥಾದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಉಪಕೃಷಿ ನಿರ್ದೇಶಕರು, ಎಲ್ಲಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಲೀಡ್ ಬ್ಯಾಂಕ್ ಮ್ಯಾನೇಜರ್, ನಿರ್ಮಿತಿ ಕೇಂದ್ರದ ಅಭಿಯಂತರರು, ಇತರೆ…

ಮುಂದೆ ಓದಿ...

ಹೊಸ ವರ್ಷದ ಆರಂಭಕ್ಕೆ ರೋಗಿಗಳಿಗೆ ಹಣ್ಣು ಹಂಪಲು ನೀಡಿದ ವಿದ್ಯಾರ್ಥಿಗಳು

 ತುರುವೇಕೆರೆ:       ಹೊಸ ವರ್ಷದ ಆಚರಣೆ ಸಲುವಾಗಿ ಇಡೀ ದಿನ ಕುಣಿದು ಕುಪ್ಪಳಿಸುವುದು. ಪಾನ ಗೋಷ್ಠಿ ನಡೆಸುವುದು. ಕೇಕ್ ಕಟ್ ಮಾಡುವುದು ಸೇರಿದಂತೆ ಇನ್ನಿತರ ವಿಧಾನಗಳಲ್ಲಿ ಆಚರಿಸುವುದು ಸಾಮಾನ್ಯ.       ಆದರೆ ಇಲ್ಲಿಯ ಗ್ಲೋಬಲ್ ಎಂಬಸ್ಸಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಭೋಧಕ ವರ್ಗ ಇಲ್ಲಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಹಣ್ಣು, ಹಾಲು ವಿತರಣೆ ಮಾಡುವ ಮೂಲಕ ಹೊಸ ವರ್ಷದ ಆಚರಣೆಯನ್ನು ಬಹಳ ವಿಶೇಷವಾಗಿ ಆಚರಿಸಿ ಇತರರಿಗೆ ಮಾದರಿಯಾದರು.       ಪ್ರಾಂಶುಪಾಲ ಗಂಗಾಧರ ದೇವರ ಮನೆ ನೇತೃತ್ವದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಆಸ್ಪತ್ರೆಯ ವಾರ್ಡ್‍ಗಳಲ್ಲಿದ್ದ ಹಲವಾರು ರೋಗಿಗಳಿಗೆ ಹೊಸ ವರ್ಷದ ಶುಭಾಶಯವನ್ನು ಕೋರಿ ಬೇಗನೇ ಗುಣಮುಖರಾಗಿ ಎಂದು ಹಾರೈಸಿ ಹಣ್ಣು ಮತ್ತು ಹಾಲನ್ನು ವಿತರಿಸಿದರು. ಪುಟ್ಟಕಂದಮ್ಮಗಳು :       ಹೊಸ ವರ್ಷದ…

ಮುಂದೆ ಓದಿ...

ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ವೈಜ್ಞಾನಿಕ ಚಿಂತಕ ಹುಲಿಕಲ್ ನಟರಾಜು ಆಯ್ಕೆ

 ತುರುವೇಕೆರೆ :     ಜನವರಿ 30 ಮತ್ತು 31 ರಂದು ನಡೆಯಲಿರುವ ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೆ ಕಾರ್ಯಕಾರಿ ಸಮಿತಿ ಸದಸ್ಯರು ಸರ್ವಾನುಮತದಿಂದ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕøತ ಸಾಹಿತಿ, ವೈಜ್ಞಾನಿಕ ಚಿಂತಕ ಹುಲಿಕಲ್ ನಟರಾಜು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.       ತಾಲ್ಲೂಕು ಕಸಾಪ ಭವನದಲ್ಲಿ ಮಂಗಳವಾರ ನಂ.ರಾಜು ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಅಧ್ಯಕ್ಷರ ಆಯ್ಕೆ, ಸಮಿತಿ ಉಪಸಮಿತಿಗಳ ಆಯ್ಕೆ, ಬಗೆಗೆ ಹಲವು ಸುತ್ತಿನ ಚರ್ಚೆ ನಂತರ ಅಂತಿಮವಾಗಿ ಆಯ್ಕೆ ಪ್ರಕ್ರಿಯೆಗಳನ್ನು ಅಧ್ಯಕ್ಷ ನಂ.ರಾಜು ಪ್ರಕಟಿಸಿದರು.       ತಾಲ್ಲೂಕಿನ ಹುಲಿಕಲ್‍ನ ಕಲ್ಲೇಶಪ್ಪ – ಸೌಭ್ಯಮ್ಮ ದಂಪತಿಗಳ ಸುಪುತ್ರರಾದ ನಟರಾಜ್ ಧರ್ಮ, ದೇವರ ಹೆಸರಿನ ಹಿನ್ನೆಲೆಯಲ್ಲಿ ನಡೆಯುವ ಮೌಡ್ಯತೆ, ಬೂಟಾಟಿಕೆಯೊಂದಿಗೆ ಅಮಾಯಕರನ್ನು ವಂಚಿಸುವ ಮಾಟ, ಮಂತ್ರ, ಪವಾಡಗಳೆಂದು ನಂಬಿಸುವ ವಂಚಕರ ರಹಸ್ಯಗಳನ್ನು ವೈಜ್ಞಾನಿಕವಾಗಿ ಭೇದಿಸುವುದರೊಂದಿಗೆ ಇಡೀ ಸಮಾಜಕ್ಕೆ ಚಿಕಿತ್ಸಕ…

ಮುಂದೆ ಓದಿ...