ಪ್ರತಿಯೊಬ್ಬರಿಗೂ ಸೂರು ಯೋಜನೆಯಡಿ 400 ಮನೆಗಳ ನಿರ್ಮಾಣ

ಚಿಕ್ಕನಾಯಕನಹಳ್ಳಿ :        ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರತಿಯೊಬ್ಬರಿಗೂ ಸೂರು ಎನ್ನುವ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಕಲ್ಲೇನಹಳ್ಳಿ ಬಳಿ ನೂತನವಾಗಿ ಎರಡು ಎಕರೆಯಲ್ಲಿ 400ಮನೆಗಳನ್ನು ನಿರ್ಮಿಸಿ ಬಡವರಿಗೆ ನೀಡಲಾಗುವುದು ಎಂದು ಸಾಯಿರಾಂ ಹೌಸಿಂಗ್ ಕಂಪನಿಯ ನಿರ್ದೇಶಕ ವಿವೇಕಾನಂದ ಶೆಟ್ಟಿ ತಿಳಿಸಿದರು.       ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ವಸತಿ ಸಮುಚ್ಚಯ ಆಸ್ಪತ್ರೆಗಳು ನಿರ್ಮಾಣ ಮಾಡಿದ್ದೇವೆ ವಸತಿ ಸಮುಚ್ಛಯ ನಿರ್ಮಿಸಲು ಒಟ್ಟು 7.25 ಸಾವಿರ ಬೆಲೆಯಲ್ಲಿ ಮನೆಗಳು ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾಋ 2.65 ಲಕ್ಷರೂ ಸಬ್ಸಿಡಿ ನೀಡುತ್ತಿದೆ ಉಳಿದ ಹಣವನ್ನು ಬ್ಯಾಂಕ್‍ಗಳ ಮೂಲಕ ಸಾಲದ ರೂಪದಲ್ಲಿ ಹಣ ನೀಡುತ್ತಿದ್ದು, ಇದಕ್ಕೆ ಬ್ಯಾಂಕ್ ಖಾತೆ ಹಾಗೂ ಆಧಾರ್‍ಕಾರ್ಡ್ ಇದ್ದರೆ ಸಾಕು ವಸತಿ ರಹಿತರಿಗೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು…

ಮುಂದೆ ಓದಿ...

ಸಮಾಜವನ್ನು ಮುನ್ನಡೆಸುವ ಪ್ರಯತ್ನ ಯುವಜನಾಂಗದ ಮೇಲಿದೆ : ಬಿ.ವೈ.ವಿಜಯೇಂದ್ರ

ಗುಬ್ಬಿ :        ಕೆಲ ದುಷ್ಟಶಕ್ತಿಗಳು ಈ ಸಮಾಜವನ್ನು ಒಡೆಯುವ ಹಂತದಲ್ಲಿದ್ದು ಈಗಲಾದರೂ ಸಮಾಜವನ್ನು ಮುನ್ನಡೆಸುವ ಪ್ರಯತ್ನ ಯುವಜನಾಂಗದ ಮೇಲಿದೆ ಎಂದು ರಾಜ್ಯ ಭಾರತೀಯ ಜನತಾ ಪಕ್ಷದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಸಮಾಜದ ಯುವಕರಿಗೆ ಎಚ್ಚರಿಕೆ ನೀಡಿದರು.       ನಿಟ್ಟೂರು ಹೋಬಳಿಯ ಬಾಗೂರು ಗೇಟ್‍ನ ಸಮೀಪವಿರುವ ಬೆಟ್ಟದಹಳ್ಳಿ ಗವೀಮಠದಿಂದ ಆಯೋಜಿಸಲಾದ 846ನೇ ಸಿದ್ದರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಧರ್ಮ ಜಾಗೃತಿಗಾಗಿ ಅನೇಕ ಸಂತರುಗಳು ತಮ್ಮ ಜೀವಿತಾವಧಿಯನ್ನು ಕಳೆದಿದ್ದು ಈ ನೆಲದಲ್ಲಿ ನಡೆದಾಡುವ ದೇವರಾದ ಶ್ರೀ ಶ್ರೀ ಸಿದ್ದಗಂಗಾ ಶ್ರೀಗಳ ಆರ್ಶೀವಾದವಿದ್ದು ಇಲ್ಲಿಯವರೆಗೂ ನಡೆದಂತಹ ಜಯಂತೋತ್ಸವಕ್ಕಿಂತ ಲಕ್ಷಾಂತರ ಭಕ್ತರನ್ನು ಜಯಂತೋತ್ಸವದ ಅಧ್ಯಕ್ಷರಾದ ಚಂದ್ರಶೇಖರ ಮಹಾಸ್ವಾಮಿಗಳ ಅಪಾರ ನಂಬಿಕೆ ಹಾಗೂ ರಾಜ್ಯದ ಮಠಾಧೀಶರುಗಳ ಆರ್ಶೀವಾದದಿಂದ ಇಂತಹ ಅಭೂತಪೂರ್ವ ಜಯಂತೋತ್ಸವವನ್ನು ಆಚರಿಸುತ್ತಿರುವುದು ಈ ಸಮಾಜದ ಒಳಿತಿಗಾಗಿ ಎಂದು ತಿಳಿಸಿದರು.      …

ಮುಂದೆ ಓದಿ...

ಗಣರಾಜ್ಯೋತ್ಸವ : ಜಿಲ್ಲಾಡಳಿತದಿಂದ ವಿಜೃಂಭಣೆಯ ಆಚರಣೆಗೆ ನಿರ್ಧಾರ

ತುಮಕೂರು:       ಈ ಬಾರಿಯ ಜನವರಿ 26ರಂದು ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ ಆಚರಣೆಯನ್ನು ವಿಜೃಂಭಣೆ ಹಾಗೂ ಆಕರ್ಷಕವಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.       ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಜನವರಿ 26ರಂದು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದ್ದು, ಧ್ವಜಾರೋಹಣ ಮಾಡುವ ಸ್ಥಳದ ಸುತ್ತಮುತ್ತ ಜನವರಿ 20ರೊಳಗಾಗಿ ಸುಣ್ಣ ಬಣ್ಣ ಬಳಿದು ಸ್ವಚ್ಛತೆ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರ ನಿಲಯ, ವಸತಿ ನಿಲಯ ಹಾಗೂ ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ಧ್ವಜಾರೋಹಣ ಮಾಡುವುದು ಮೂಲಭೂತ ಕರ್ತವ್ಯವಾಗಿದ್ದು, ಸಂಬಂಧಿಸಿದವರು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದರು.       ಗಣರಾಜ್ಯೋತ್ಸವವನ್ನು…

ಮುಂದೆ ಓದಿ...