ಮಗನ ವಿರುದ್ಧ ದೂರು:ಮಹಿಳೆ ಮೇಲೆ ಸಿದ್ದರಾಮಯ್ಯ ಕೆಂಡಾಮಂಡಲ

ಮೈಸೂರು:       ನಮ್ಮ ಕ್ಷೇತ್ರದ ಎಂಎಲ್‌ಎ ಆದ ಯತೀಂದ್ರ ಸಿದ್ದರಾಮಯ್ಯ ಅವರು ನಮ್ಮ ಕೈಗೆ ಸಿಗೋದಿಲ್ಲ. ನಮ್ಮ ಕೆಲಸ ಹೇಗೆ ಮಾಡಿಸೋದು? ಎಂದು ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಮಹಿಳೆಯೋರ್ವರು ಟೇಬಲ್ ಕುಟ್ಟಿ ಆವಾಜ್ ಹಾಕಿದ ಘಟನೆ ನಡೆದಿದೆ.       ಮೈಸೂರಿನ ಟಿ.ನರಸೀಪುರದ ಗರ್ಗೇಶ್ವರ ಗ್ರಾಮದಲ್ಲಿ ಕೆಪಿಟಿಸಿಎಲ್ ಪವರ್ ಎಕ್ಸಚೈಂಜ್ ಕಾಮಗಾರಿ ಶಂಕಸ್ಥಾಪನೆ ವೇಳೆ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ತಮ್ಮ ಊರಿನ ಸಮಸ್ಯೆ ಕುರಿತು ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಮಲಾರ್ ಹಾಗೂ ಮಹಿಳೆಯೋರ್ವರು ವಿವರಿಸುತ್ತಿದ್ದರು. ಇದೇ ವೇಳೆ ಮಹಿಳೆಯೋರ್ವರು ನಿಮ್ಮ ಮಗ ಹಾಗೂ ಎಂಎಲ್‌ಎ ಯತೀಂದ್ರ ಊರಿಗೆ ಬರುವುದಿಲ್ಲ. ಕೈಗೂ ಸಿಗುವುದಿಲ್ಲ, ನಮ್ಮ ಸಮಸ್ಯೆ ಕೇಳುವವರಿಲ್ಲ ಎಂದು ಎದುರಿನ ಟೇಬಲ್ ಕುಟ್ಟಿದರು.        ಮಹಿಳೆ ವರ್ತನೆ ಕಂಡು ಕೆಂಡಮಂಡಲರಾದ ಸಿದ್ದರಾಮಯ್ಯ ಸಮಸ್ಯೆ ಹೇಳುತ್ತಿದ್ದ ಆಕೆಯ ಬಳಿಯಿಂದ…

ಮುಂದೆ ಓದಿ...

ಸಂವಿಧಾನದ ಆಶಯ, ವೈಚಾರಿಕತೆಯ ವಿಸ್ತರಣೆಯಾಗಲಿ -ಪ್ರೊ. ಕೆ.ಎಸ್.ಜಗದೀಶ್

       ಸಂವಿಧಾನದ ಆಶಯಗಳು ಎಲ್ಲರಿಗೂ ತಿಳಿಯಬೇಕು ಮತ್ತು ವೈಚಾರಿಕತೆ ವಿಸ್ತರಣೆಯಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಎಸ್.ಜಗದೀಶ್ ಅಭಿಪ್ರಾಯಪಟ್ಟರು.       ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಿ ಜನಜಾಗೃತಿ ಆಂದೋಲನ ಮತ್ತು ಸಂವಿಧಾನ ಪ್ರೀತಿ ಕಲಾಬಳಗ ವತಿಯಿಂದ ತುಮಕೂರಿನ ರೈಲ್ವೆ ನಿಲ್ಧಾಣದ ಸಮೀಪ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಲಾಜಾಥಾದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.       ಸಂವಿಧಾನ ಪ್ರೀತಿ ಕಲಾಬಳಗದ ಕಲಾವಿದರು ಸಂವಿಧಾನದ ಆಶಯಗಳೇನೆಂಬುದನ್ನು ಬೀದಿನಾಟಕದ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟಿದ್ದಾರೆ. ಬೀದಿನಾಟಕ ಪರಿಣಾಮಕಾರಿ ಸಾಧನವಾಗಿದೆ. ಇದಕ್ಕಾಗಿ ಕಲಾತಂಡಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.       ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜ್ ಮಾತನಾಡಿ, ಸಂವಿಧಾನ ಅಳವಡಿಸಿಕೊಂಡು 70 ವರ್ಷಗಳ ನಂತರ ಸಂವಿಧಾನದ ಆಶಯಗಳನ್ನು ಜನರಿಗೆ ತಿಳಿಸಬೇಕಾದಂತಹ ಸನ್ನಿವೇಶ ಬಂದಿರುವುದು ವಿಷಾದನೀಯ.…

ಮುಂದೆ ಓದಿ...

ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಉದ್ಘಾಟನೆ

ಚಿಕ್ಕನಾಯಕನಹಳ್ಳಿ:       2 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯವನ್ನು ಶಾಸಕ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಿದರು.       ಪಟ್ಟಣದ ಪ್ರವಾಸಿ ಮಂದಿರದ ಹಿಂಭಾಗದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ಮಿಸಿರುವ ನೂತನವಾಗಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಉದ್ಘಾಟಿಸಿ ಮಾತನಾಡಿ 18 ಕೊಠಡಿಗಳಲ್ಲಿ 16 ಕೊಠಡಿಗಳಲ್ಲಿ 50 ಜನ ವಿದ್ಯಾರ್ಥಿನಿಯರು ವಾಸ ಮಾಡಬಹುದು 16 ಕೊಠಡಿಗಳು ಶೌಚಾಲಯ ಸಹಿತ ಕೊಠಡಿಗಳಾಗಿದ್ದು, ಈಗಿರುವ ವಸತಿ ನಿಲಯ ಚಿಕ್ಕದಾಗಿತ್ತು. ನೂತನವಾಗಿ ನಿರ್ಮಿಸಿರುವ ವಸತಿ ನಿಲಯ ಸುಸಜ್ಜಿತವಾಗಿದ್ದು, ಅಡುಗೆ ಮನೆ ಸೇರಿದಂತೆ ಮೂಲ ಸೌಕರ್ಯಗಳನ್ನು ಹೊಂದಿದೆ. ವಸತಿ ನಿಲಯವನ್ನು ಸ್ವಚ್ಛವಾಗಿಟ್ಟುಕೊಂಡು ಉತ್ತಮ ವಿದ್ಯಾಭ್ಯಾಸ ಮಾಡುವಂತೆ ಸಲಹೆ ನೀಡಿದರು.       ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳಮ್ಮ, ಆರ್.ರಾಮಚಂದ್ರಯ್ಯ, ತಾ.ಪಂ ಸದಸ್ಯ ಕೇಶವಮೂರ್ತಿ, ತಹಶಿಲ್ದಾರ್ ತೇಜಸ್ವಿನಿ ಸಮಾಜ ಕಲ್ಯಾಣಾಧಿಕಾರಿ…

ಮುಂದೆ ಓದಿ...

ಜನರ ಬೇಡಿಕೆಗನುಗುಣವಾಗಿ ಸಂಸದರ ನಿಧಿ ಸದ್ವಿನಿಯೋಗ

 ತುಮಕೂರು :       ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆಯ ಲೋಕಸಭಾ ಕ್ಷೇತ್ರದ ಜನರ ಬೇಡಿಕೆಗನುಗುಣವಾಗಿ ಸಂಸದರ ನಿಧಿಯನ್ನು ಸದ್ವಿನಿಯೋಗಿಸಲಾಗಿದೆ ಎಂದು ಎಂದು ಲೋಕಸಭಾ ಸದಸ್ಯ ಎಸ್.ಪಿ. ಮುದ್ದಹನುಮೇಗೌಡ ತಿಳಿಸಿದರು.       ನಗರದ ದೇವರಾಯ ಪಟ್ಟಣ ಬಡಾವಣೆಯಲ್ಲಿಂದು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈ ದಿನ ಪಾಲಿಕೆ ವ್ಯಾಪ್ತಿಯ 23 ಕಡೆ ಕುಡಿಯುವ ನೀರಿನ ಘಟಕ, ಹೈಮಾಸ್ಡ್ ಲೈಟ್ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.       ಕೇಂದ್ರದಿಂದ 5 ವರ್ಷಗಳ ಅವಧಿಗಾಗಿ ಸಂಸದರ ನಿಧಿಗೆ 25ಕೋಟಿ ರೂ. ಗಳ ಅನುದಾನ ಹಂಚಿಕೆಯಾಗಿದ್ದು, ಈ ಅನುದಾನದ ಪ್ರತಿಯೊಂದು ಪೈಸೆಯನ್ನು ಜನೋಪಯೋಗಿ ಕಾರ್ಯಗಳಿಗೆ ಮಾತ್ರ ಖರ್ಚು ಮಾಡಲಾಗಿದೆ. ಲೋಕಸಭಾ ಸದಸ್ಯರ ನಿಧಿಯಿಂದ ಕೈಗೊಂಡಿರುವ ಕಾಮಗಾರಿಗಳು ಹಾಗೂ ವೆಚ್ಚದ ವಿವರಗಳ ಮಾಹಿತಿ ಪಟ್ಟಿಯನ್ನು…

ಮುಂದೆ ಓದಿ...

ಗ್ರಾಮದಲ್ಲಿನ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳಾಗಲಿವೆ

ತುರುವೇಕೆರೆ:       ಅರಳೀಕೆರೆ ಗ್ರಾಮದಲ್ಲಿನ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದು ಶಾಸಕ ಮಸಾಲೆ ಜಯರಾಮ್ ತಿಳಿಸಿದರು.       ತಾಲೂಕಿನ ಅರಳೀಕೆರೆ ಗ್ರಾಮದಲ್ಲಿ 25ಲಕ್ಷರೂಪಾಯಿ ವೆಚ್ಚದಲ್ಲಿನ ಸಿಮೆಂಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಅರಳೀಕೆರೆ ಗ್ರಾಮದಲ್ಲಿ ಈಗಾಗಲೇ ಕೆಲ ರಸ್ತೆಗಳು ಕಾಂಕ್ರಿಟ್ ರಸ್ತೆಗಳಾಗಿವೆ ಉಳಿದಂತಿರುವ ಮಣ್ಣುರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾರ್ಪಡಿಸಿ ಪಟ್ಟಣಕ್ಕೆ ಹೊಂದಿರುವ ಅರಳೀಕೆರೆ ಗ್ರಾಮದ ಅಭಿವೃದ್ದಿಗೆ ಶ್ರಮಿಸುತ್ತೇನೆ, ಗ್ರಾಮಗಳ ಅಭಿವೃದ್ದಿಯಾದರೆ ಮಾತ್ರ ತಾಲೂಕಿನ ಸಮರ್ಗ ಅಭಿವೃದ್ದಿ ಸಾಧ್ಯ ಈ ನಿಟ್ಟಿನಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮವನ್ನು ಅಭಿವೃದ್ದಿಗೊಳಿಸಲಾಗುವುದು ಹಳ್ಳಿಗಳಿಗೆ ಅಗತ್ಯವಿರುವ ಮೂಲಬೂರ ಸೌಕರ್ಯಗಳಿಗೆ ಒತ್ತುಕೊಟ್ಟು ಹಂತ ಹಂತವಾಗಿ ಹಳ್ಳಿಗಳ ಅಭಿವೃದ್ದಿಯೊಂದಿಗೆ ತಾಲೂಕಿನ ಅಭಿವೃದ್ದಿ ಮಾಡುತ್ತೇನೆಂದು ಭರವಸೆ ನೀಡಿದರು.       ಈ ಸಂಧರ್ಭದಲ್ಲಿ ಜಿಲ್ಲಾಪಂಚಾಯಿತಿ ಸದಸ್ಯೆ ರೇಣುಕಾಕೃಷ್ಣಮೂರ್ತಿ, ಮಾದಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ…

ಮುಂದೆ ಓದಿ...

ಅಂಗನವಾಡಿ ಕಾರ್ಯಕರ್ತೆಯರು ಜನರೊಂದಿಗಿನ ಕೊಂಡಿಯಂತೆ ವರ್ತಿಸಬೇಕು

ತುರುವೇಕೆರೆ:       ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತರು ಪೋಸ್ಟ್‍ಮ್ಯಾನ್ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಎಂದು ಶಾಸಕ ಮಸಾಲೆ ಜಯರಮ್ ತಿಳಿಸಿದರು.       ತಾಲೂಕಿನ ಅರಿಶಿನದಹಳ್ಳಿ ಗ್ರಾಮದಲ್ಲಿನ ನೂತನ ಅಂಗನವಾಡಿ ಕಟ್ಟಡವನ್ನು ಉಧ್ಘಾಟನೆಗೊಳಿಸಿ ಮಾತನಡಿದ ಅವರು ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರ ಹಾಗೂ ಸಾಮಾನ್ಯ ಜನರೊಂದಿಗಿನ ಕೊಂಡಿಯಂತೆ ವರ್ತಿಸಬೇಕು ಸರ್ಕಾರ ಮಕ್ಕಳಿಗೆ ನೀಡುವ ಗುಣಮಟ್ಟದ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಮಕ್ಕಳಿಗೆ ನೀಡಬೇಕು ಅರಿಶಿನದಹಳ್ಳಿಯಲ್ಲಿ ನಿರ್ಮಾಣವಾಗಿರುವ ಅಂಗನವಾಡಿ ಕಟ್ಟಡ ಬಹಳ ಸುಸರ್ಜಿತ ರೀತಿಯಲ್ಲಿದ್ದು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು, ನಾನು ಶಾಸಕನಾದ ನಂತರ ಮೊದಲ ಬಾರಿಗೆ ಈ ಗ್ರಾಮಕ್ಕೆ ಬೇಟಿ ನೀಡುತ್ತಿದ್ದೇನೆ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು, ಹಾಗೂ ಅರಳೀಕೆರೆಯಿಂದ ಅರಿಶಿನದಹಳ್ಳಿವರೆಗೆ ಸಂಪರ್ಕ ಕಲ್ಪಿಸಲು ಡಾಂಬರು ರಸ್ತೆಯನ್ನು ಇನ್ನೆರಡು ತಿಂಗಳೊಳಗಾಗಿ ನಿರ್ಮಾಣಮಾಡುತ್ತೇನೆ ತಾಲೂಕಿನ ಸಮರ್ಗ ಅಭಿವೃದ್ದಿ…

ಮುಂದೆ ಓದಿ...

ಬ್ಯಾಂಕ್ ಖಾಸಗೀಕರಣದಿಂದ ಅಪಾಯ: ಎನ್.ಶಿವಣ್ಣ

 ತುಮಕೂರು:       ರಾಷ್ಟ್ರೀಕರಣಗೊಂಡಿದ್ದ ಬ್ಯಾಂಕ್‍ಗಳನ್ನು ಖಾಸಗೀಕರಣ ಮಾಡಲು ಮುಂದಾಗಿರುವುದರಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದ್ದು, ರೈತರ ಸ್ಥಿತಿ ಡೋಲಾಯಮಾನವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಎನ್.ಶಿವಣ್ಣ ಆರೋಪಿಸಿದರು.       ನಗರದಲ್ಲಿ ಪಕ್ಷದ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಪೋರೇಟ್ ಕಂಪನಿಗಳು ರೈತರ ಫಲವತ್ತಾದ ಕೃಷಿ ಜಮೀನಿನ ಮೇಲೆ ಕಣ್ಣಿಟ್ಟಿದ್ದು, ಕಾರ್ಮಿಕರ ಹೋರಾಟದ ಪ್ರತಿಫಲವಾಗಿ ರೂಪುಗೊಂಡಿದ್ದ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಶಿಕ್ಷಣ ವ್ಯವಸ್ಥೆ ಖಾಸಗಿ ವ್ಯಕ್ತಿಗಳ ಕೈಗೆ ಸಿಲುಕಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ದಕ್ಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.       ಭವ್ಯಭಾರತ ಪ್ರಪಂಚದೆಲ್ಲೆಡೆ ಪ್ರಕಾಶಿಸುತ್ತಿದ್ದರು ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಇನ್ನು ಬದುಕುವ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾದ ಸ್ಥಿತಿಯಿದೆ. ಒಂದು ಕಡೆ ರಾಷ್ಟ್ರದ ಸಂಪತ್ತು ಕೆಲವೇ ಮಂದಿ…

ಮುಂದೆ ಓದಿ...

5ನೇ ವಾರ್ಡಿನ ಅಭಿವೃದ್ಧಿಗೆ ಅನುದಾನ: ಸಂಸದ ಮುದ್ದಹನುಮೇಗೌಡ

ತುಮಕೂರು:      ಜನಪ್ರತಿನಿಧಿಗಳು ಜನರ ಸಮಸ್ಯೆಗಳ ಬಗ್ಗೆ ಆಲೋಚಿಸಿದಾಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ. ಅಂತಹ ಜನಪ್ರತಿನಿಧಿಗಳಲ್ಲಿ 5ನೇ ವಾರ್ಡ್‍ನ ಕಾಪೋರೇಟರ್ ಎನ್.ಮಹೇಶ್ ಸಹ ಒಬ್ಬರಾಗಿದ್ದು, ತಮ್ಮ ವಾರ್ಡ್‍ನ ಜನರಿಗಾಗಿ ಶುದ್ಧಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲು ಮುಂದಾಗಿದ್ದಾರೆ ಎಂದು ಸಂಸದ ಮುದ್ದ ಹನುಮೇಗೌಡ ತಿಳಿಸಿದ್ದಾರೆ.       ನಗರದ 5ನೇ ವಾರ್ಡ್‍ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಸಂಸದ ಮುದ್ದ ಹನುಮೇಗೌಡ ಮಾತನಾಡಿದ ಅವರು, ಜನರಿಗೆ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಜನರ ಬಳಕೆ ಮುಕ್ತಮಾಡಬೇಕಿದ್ದು, ಅಧಿಕಾರಿಗಳು ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣ ಗೊಳಿಸುವಂತೆ ಸೂಚನೆ ನೀಡಿದರು.       ಮುಂಜಾನೆ ಗೆಳೆಯರ ಬಳಗದ ಗೌರವಾಧ್ಯಕ್ಷ ಕರಾಟೆ ಕೃಷ್ಣಮೂರ್ತಿ ಅವರು, ಅಮಾನಿಕೆರೆಗೆ ಶೀಘ್ರವಾಗಿ ಹೇಮಾವತಿ ನೀರನ್ನು ಹರಿಸುವ ಮೂಲಕ ಸುತ್ತಮುತ್ತಲಿನ ಕೊಳವೆಬಾವಿಗಳ…

ಮುಂದೆ ಓದಿ...