ಶ್ರೀಗಳಿಗೆ ಗಣ್ಯರಿಂದ ಅಂತಿಮ ನಮನ

ತುಮಕೂರು:         ಸಿದ್ದಗಂಗಾ ಶ್ರೀಗಳ ಲಿಂಗಶರೀರ ಗದ್ದುಗೆ ಬಂದು ತಲುಪಿದೆ. ಬಳಿಕ ಶ್ರೀಗಳಿಗೆ ಸಕಲ ಸರ್ಕಾರಿ ಗೌರವ  ಸಲ್ಲಿಸಲಾಯಿತು.ಶ್ರೀಗಳ ಲಿಂಗಶರೀರಕ್ಕೆ ರಾಷ್ಟ್ರಧ್ವಜವನ್ನ ಹೊದಿಸಿ ಕುಶಾಲ ತೋಪುಗಳನ್ನ ಹಾರಿಸಲಾಯಿತು.         ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಲಕ್ಷಾಂತರ ಭಕ್ತರು ಅಂತಿಮ ದರ್ಶನ ಪಡೆದ ಬಳಿಕ ಶ್ರೀಗಳ ಲಿಂಗ ಶರೀರದ ಮೆರವಣಿಗೆ ನಡೆಯಿತು. ಲಿಂಗ ಶರೀರವನ್ನ ರುದ್ರಾಕ್ಷಿ ಮಂಟಪದಲ್ಲಿ ಕೂರಿಸಿಕೊಂಡು ಹಳೇ ಮಠದ ಕ್ರಿಯಾ ಸಮಾಧಿವರೆಗೆ ಮೆರವಣಿಗೆ ಮಾಡಲಾಯಿತು. ಸದ್ಯ ಲಿಂಗಶರೀರ ಕ್ರಿಯಾ ಸಮಾಧಿ ಬಳಿ ತಲುಪಿತು.        ಸಿಎಂ ಹೆಚ್​.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ಡಿಸಿಎಂ ಡಾ.ಜಿಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, ಸಚಿವರಾದ ಡಿಕೆ ಶಿವಕುಮಾರ್, ಸಾರಾ ಮಹೇಶ್, ಆರ್​ವಿ ದೇಶಪಾಂಡೆ, ವೆಂಕಟರಾವ್ ನಾಡಗೌಡ, ಎಂ.ಬಿ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ…

ಮುಂದೆ ಓದಿ...

ಶತಾಯು‍ಷಿಗೆ ಸಕಲ ಸರ್ಕಾರಿ ಗೌರವ

ತುಮಕೂರು:       ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಸೋಮವಾರ ಶಿವೈಕ್ಯರಾಗಿದ್ದು, ಇಂದು ಅವರ ಕ್ರಿಯಾ ಸಮಾಧಿಯ ವಿಧಿ ವಿಧಾನಗಳು ವೀರಶೈವ ಲಿಂಗಾಯಿತ ಆಗಮೋಕ್ತ ರೀತಿಯಲ್ಲಿ ನಡೆಯಲಿದೆ.        ಲಿಂಗ ಶರೀರವನ್ನ ರುದ್ರಾಕ್ಷಿ ಮಂಟಪದಲ್ಲಿ ಕೂರಿಸಿಕೊಂಡು ಹಳೇ ಮಠದ ಕ್ರಿಯಾ ಸಮಾಧಿವರೆಗೆ ಮೆರವಣಿಗೆ ಮಾಡಲಾಯಿತು. ಸದ್ಯ ಪಾರ್ಥೀವ ಶರೀರ ಕ್ರಿಯಾ ಸಮಾಧಿ ಬಳಿ ತಲುಪಿದ್ದು, ಸಕಲ ಸರ್ಕಾರಿ ಗೌರವಗಳು ನಡೆಯುತ್ತಿದೆ. ಇನ್ನೇನು ಕೆಲ ವೇ ಹೊತ್ತಿನಲ್ಲಿ ಅಂತಿಮ ವಿಧಾನ ಆರಂಭವಾಗಲಿದೆ.       ಮೊದಲಿಗೆ ಪಾರ್ಥಿವ ಶರೀರಕ್ಕೆ ಅಂತಿಮಪುಣ್ಯ ಸ್ನಾನ ಮಾಡಿಸಲಾಗುತ್ತದೆ. ನಾಡಿನ ಪುಣ್ಯ ನದಿಗಳಿಂದ ತರಿಸಿರುವ ಪವಿತ್ರ ತೀರ್ಥಗಳಿಂದ ಅಭಿಷೇಕ ನೆರವೇರಿಸಿ ಹೊಸ ಕಷಾಯ ವಸ್ತ್ರಗಳನ್ನು ಧಾರಣೆ ಮಾಡಿಸಲಾಗುತ್ತದೆ. ನಂತರ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿಯವರಿಗೆ ಪಟ್ಟಾಧಿಕಾರ ಹಸ್ತಾಂತರ ಮಾಡಲಾಗುತ್ತದೆ. ಬಳಿಕ ಪಾರ್ಥಿವ ಶರೀರವನ್ನು ಗದ್ದುಗೆಯ ಒಳಭಾಗದ ಗೂಡಿನಲ್ಲಿ ಪದ್ಮಾಸನ ಸ್ಥಿತಿಯಲ್ಲಿ…

ಮುಂದೆ ಓದಿ...

ಶ್ರೀಗಳಿಗೆ ವಿಶ್ವರತ್ನ ಪ್ರಶಸ್ತಿ ಕೊಟ್ಟರೂ ಕಡಿಮೆಯೇ – ಬಾ.ಹ.ರಮಾಕುಮಾರಿ

ತುಮಕೂರು:        ನಡೆದಾಡುವ ದೇವರು ಡಾ.ಶಿವಕುಮಾರ ಶ್ರೀಗಳಿಗೆ ಭಾರತರತ್ನ ಮಾತ್ರವಲ್ಲ ವಿಶ್ವರತ್ನ ಪ್ರಶಸ್ತಿ ಕೊಟ್ಟರೂ ಕಡಿಮೆಯಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು. ತುಮಕೂರು ನಗರದ ಅಮಾನಿಕೆರೆ ಬಳಿ ಇರುವ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಮಠದ ಭಕ್ತರು ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಹೀಗೆ ಭಾರತರತ್ನ ಪ್ರಶಸ್ತಿಯನ್ನು ನೀಡಿ ಸ್ವಾಮೀಜಿಯವರನ್ನು ಕುಬ್ಜರನ್ನಾಗಿ ಮಾಡುತ್ತಿದ್ದಾರೆ ಎನಿಸುತ್ತದೆ. ಹಾಗಾಗಿ ಶ್ರೀಗಳಿಗೆ ಯಾವ ಪ್ರಶಸ್ತಿ ನೀಡಿದರೂ ಅದು ಕಡಿಮೆಯೇ ಆಗುತ್ತದೆ ಎಂದು ಹೇಳಿದರು.       ಶ್ರೀಗಳು ಯಾವುದೇ ವಿದೇಶಕ್ಕೆ ಹೋಗಲಿಲ್ಲ. ಪ್ರಶಸ್ತಿಯ ಹಿಂದೆ ಬೀಳಲಿಲ್ಲ. ಆದರೂ ಅವರನ್ನು ಅರಸಿಕೊಂಡು ಹಲವು ಪದವಿಗಳು ಬಂದಿವೆ. ವಿಶ್ವದ ಯಾವುದೇ ನಾಯಕರು ನಿರ್ಗಮಿಸಿದ ಸಂದರ್ಭದಲ್ಲಿಯೂ…

ಮುಂದೆ ಓದಿ...

  ಅಂತಾರಾಷ್ಟ್ರೀಯ ಮಾನವಹಕ್ಕು ಕಾರ್ಯ ಸಮಿತಿ ಉದ್ಘಾಟನೆ

 ತುಮಕೂರು:      ನಗರದ ಟಿಪ್ಪುನಗರ ಮುಖ್ಯರಸ್ತೆಯ ಮಾರಿಮುತ್ತು ದೇವಸ್ಥಾನದ ಹಿಂಭಾಗ ತುಮಕೂರು ಜಿಲ್ಲಾ ಅಂತಾರಾಷ್ಟ್ರೀಯ ಮಾನವ ಹಕ್ಕು ಕಾರ್ಯ ಸಮಿತಿಯನ್ನು ಉದ್ಘಾಟಿಸಲಾಯಿತು.      ಐ.ಹೆಚ್.ಆರ್.ಎ.ಸಿ. (International Human Rights Action Committee) ಅಂತಾರಾಷ್ಟ್ರೀಯ ಮಾನವಹಕ್ಕು ಕಾರ್ಯ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸ್ಥಾಪಕ ಎಂ. ರಾಜಾ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ವಿಧಿಸಲಾಗಿರುವ ಕಾನೂನುಗಳು ಯಾವು ಮೇಲು ಕೀಳುಗಳಿಲ್ಲದೆ ಎಲ್ಲರಿಗೂ ಅನ್ವಯವಾಗುತ್ತವೆ. ಕಾನೂನಿನ ಮುಂದೆ ಯಾರೂ ದೊಡ್ಡವರೂ ಅಲ್ಲ ಚಿಕ್ಕವರೂ ಅಲ್ಲ. ಮಾನವ ಸ್ವತಂತ್ರವಾಗಿ ಬದುಕಲು ಕಾನೂನು ಹಾಗೂ ನಿಯಮ ನಿಬಂಧನೆಗಳನ್ನು ರಚಿಸಲಾಗಿದೆ. ಆದರೆ, ಕೆಲವೊಮ್ಮೆ ಸಮಾಜಘಾತುಕರಿಂದ ಹಾಗೂ ಮೋಸಗಾರರ ದಬ್ಬಾಳಿಕೆದಾರರ ಕುತಂತ್ರ ಹಾಗೂ ಕಾನೂನು ತಿರುಚುವಿಕೆಯಿಂದ ಅಮಾಯಕರು ನರಳಾಡುವಂತಾಗಿದೆ. ಆದ್ಧರಿಂದ ಸರ್ವರೂ ಸಂವಿಧಾನದಲ್ಲಿ ಮಾನವನಿಗಾಗಿ ನೀಡಲಾಗಿರುವ ಮೂಲಭೂತ ಹಕ್ಕುಗಳ ಬಗ್ಗೆ ಅರಿಯುವುದು ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ…

ಮುಂದೆ ಓದಿ...

ಹೇಗಿರಲಿದೆ ಸಿದ್ಧಗಂಗಾ ಶ್ರೀಗಳ ಕ್ರಿಯಾ ಸಮಾಧಿ ವಿಧಿ ವಿಧಾನ!!

ತುಮಕೂರು:        ಇಹಲೋಕದ ಹಂಗು ತೊರೆದು ಸಾಗಿರುವ ಸಿದ್ದಗಂಗಾ ಶ್ರೀಗಳ ಕ್ರಿಯಾದಿಗಳು ಕಾರ್ಯ ಮಂಗಳವಾರ (ಜನವರಿ 22) ಸಂಜೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಗುರುವಿನಂತೆ ಶಿಷ್ಯರ ಅಂತಿಮ ವಿಧಿ ವಿಧಾನ:       ತಮ್ಮ ಗುರು ಶ್ರೀ ಶ್ರೀ ಶ್ರೀ ಉದ್ದಾನ‌ ಶಿವಯೋಗಿಗಳಿಗೆ ಯಾವ ರೀತಿಯಲ್ಲಿ ಅಂತಿಮ ವಿಧಿ ವಿಧಾನ ಪೂರೈಸಲಾಗಿರುತ್ತದೋ ಅದೇ ರೀತಿಯಲ್ಲಿ ತಮ್ಮ ಕ್ರಿಯಾ ವಿಧಾನ ಮಾಡಬೇಕೆಂದು ಶ್ರೀಗಳು ಬರೆದಿಟ್ಟಿದ್ದು ಅದೇ ರೀತಿಯಲ್ಲಿ, ಅವರು ಇಚ್ಛೆಪಟ್ಟ ಜಾಗದಲ್ಲಿಯೇ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಕ್ರಿಯಾ ಸಮಾಧಿ ಕಾರ್ಯಗಳಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. 15-20 ಶ್ರೀಗಳ ಸಮ್ಮುಖದಲ್ಲಿ ಕ್ರಿಯಾ ಸಮಾಧಿ ಕಾರ್ಯ ನೆರವೇರಲಿದೆ.          ತಮ್ಮ ಗುರು ಶ್ರೀ ಶ್ರೀ ಶ್ರೀ ಉದ್ದಾನ‌ ಶಿವಯೋಗಿಗಳ  ರೀತಿಯಲ್ಲಿ ಅಂತಿಮ ವಿಧಿ ವಿಧಾನ ಪೂರೈಸಲಾಗಿರುತ್ತೋ ಅದೇ ರೀತಿಯಲ್ಲಿ ತಮ್ಮ…

ಮುಂದೆ ಓದಿ...