ರಾಜಕೀಯ ದೊಂಬರಾಟ ನಿಲ್ಲಿಸಿ : ಬರ ಪರಿಹಾರ ಕೈಗೊಳ್ಳಿ

 ತುಮಕೂರು:       ರಾಜ್ಯದ 156 ತಾಲ್ಲೂಕುಗಳು ಬರದಲ್ಲಿ ನರಳುತ್ತಿದ್ದರೆ, ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ದೊಂಬರಾಟವಾಡುತ್ತಿದ್ದು, ರೈತರ ಸ್ಥಿತಿ ಗಂಭೀರವಾಗಿದ್ದರು, ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಶಾಸಕರುಗಳನ್ನು ಜನರೇ ಕ್ಷೇತ್ರ ಬಿಟ್ಟು ಓಡಿಸುತ್ತಾರೆ ಎಂದು ರಾಜ್ಯ ರೈತಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ತಿಳಿಸಿದ್ದಾರೆ.       ನಗರದ ಕನ್ನಡಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರದಿಂದ ತತ್ತರಿಸಿರುವ ರೈತರಿಗೆ ಸೂಕ್ತ ಪರಿಹಾರ ದೊರೆಯುತ್ತಿಲ್ಲ, ಪರಿಹಾರವನ್ನು ದೊರಕಿಸಿಕೊಡಬೇಕಾದ ಶಾಸಕರುಗಳು ಜವಾಬ್ದಾರಿ ಇಲ್ಲದೆ ರೆಸಾರ್ಟ್‍ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ರೈತರ ಸಂಕಷ್ಟದ ಅರಿವಿಲ್ಲದ ಜನಪ್ರತಿನಿಧಿಗಳಿಗೆ ಜನರ ಬಗ್ಗೆ ಕಳಕಳಿ ಇಲ್ಲದಂತಾಗಿದೆ ಎಂದು ತಿಳಿಸಿದರು.       ರಾಜ್ಯದಲ್ಲಿ ಬರ ಅಧ್ಯಯನ ನಡೆಸಿದ ಬಿಜೆಪಿ ಮಾಡಿದ್ದು ಕೇವಲ ರಾಜಕೀಯ ಗಿಮಿಕ್ ಅಷ್ಟೇ, ಬರ ಅಧ್ಯಯನದ ನಾಟಕವಾಡಿದರೆ ಹೊರತು ಕೇಂದ್ರದಿಂದ ನಯಾಪೈಸೆ ಅನುದಾನವನ್ನು ಪರಿಹಾರಕ್ಕಾಗಿ ಬಿಡುಗಡೆ ಮಾಡಿಸಲಿಲ್ಲ, ಮತಗಳಿಕೆಗಾಗಿ…

ಮುಂದೆ ಓದಿ...

ಪರಮೇಶ್ವರ ಕರೆದಾಗ ಹೋಗಬೇಕು : ಹೆಚ್.ಡಿ. ದೇವೇಗೌಡ

ತುಮಕೂರು:       ಈ ಪುಣ್ಯಕಾಲದಲ್ಲಿ ದರ್ಶನ ಮಾಡಲು ಬಂದೆ ದರ್ಶನ ಆಗಿದೆ. ಭಗವಂತ ಯಾವಾಗ ತೀರ್ಮಾನ ಮಾಡ್ತಾನೋ ನಮಗೆ ಗೊತ್ತಿಲ್ಲಾ. ಇನ್ನೂ ಉಸಿರಾಡುವ‌ಶಕ್ತಿ ಶ್ರಿ ಗಳಿಗೆ ಇದೆ. ಇಂಥ ದಿನವೇ ಅಂತಾ ನಾನು ಹೇಳಲು ಸಾಧ್ಯವಿಲ್ಲ. ಪರಮೇಶ್ವರ ಕರೆದಾಗ ಹೋಗಬೇಕು ಎಂದು ಮಾಜಿ ಪ್ರಧಾನಿ , ಜೆಡಿಎಸ್ ರಾಷ್ಟ್ರೀಯ ಅದ್ಯಕ್ಷ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ.       ಅವರು ಇಂದು ಶ್ವಾಸಕೋಶದ ತೊಂದರೆಯಿಂದಾಗಿ ಮಠದಲ್ಲಿ ಚಿಕಿತ್ಸೆ ಪಡೆಯುತ್ತಿರುವ   ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಡಾ||ಶ್ರೀ ಶಿವಕುಮಾರ ಸ್ವಾಮೀಜಿ ದರ್ಶನ ಮಾಡಿ ಶ್ರೀ ಗಳು ಶೀಘ್ರವಾಗಿ ಗುಣಮುಖ ರಾಗಲೆಂದು  ಆಶಿಸಿದರು. ಶ್ರೀ ಗಳಿಗೆ ನೀಡಲಾಗುವ ಚಿಕಿತ್ಸಾ ವಿಧಾನದ ಬಗ್ಗೆ ಕಿರಿಯ ಶ್ರೀ ಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ವೈದ್ಯರಿಂದ  ಅವರಿಂದ ಮಾಹಿತಿ ಪಡೆದರು.        ನಂತರ ಮಾದ್ಯಮ ದೂಂದಿಗೆ ಮಾತನಾಡಿ,ಗುರುಗಳಿಗೆ 111 ವರ್ಷವಾಗಿದೆ. ಹೀಗಾಗಿ ಸ್ವಾಭಾವಿಕವಾಗಿ ಅವರ ಆರೋಗ್ಯದಲ್ಲಿ ಏರು ಪೇರಾಗಿದೆ. ಸುಮಾರು…

ಮುಂದೆ ಓದಿ...

ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಯಥಾಸ್ಥಿತಿ

ತುಮಕೂರು :       ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದ ಸ್ಥಿತಿ ಯಥಾಪ್ರಕಾರವಾಗಿದ್ದು ನಿನ್ನೆಯಂತೆ ಮುಂದುವರೆದಿದೆ ಎಂದು ಸದ್ಧಗಂಗಾ ಆಸ್ಪತ್ರೆಯ ವೈದ್ಯ ಡಾ. ಪರಮೇಶ್ ತಿಳಿಸಿದ್ದಾರೆ.       ಸ್ವಾಮೀಜಿಯವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಠದಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ವೆಂಟಿಲೇಟರ್ ಇಲ್ಲದೆ ಒಂದು ಗಂಟೆ ಕಾಲ ಉಸಿರಾಟ ಮಾಡುತ್ತಿದ್ದಾರೆ. ಬಳಿಕ ವೆಂಟಿಲೇಟರ್ ಅಳವಡಿಕೆ ಮಾಡಲಾಗುತ್ತಿದೆ. ಶ್ರೀ ಗಳ ದೇಹದಲ್ಲಿ ಸೋಂಕು ಕಡಿಮೆಯಾಗಿದೆ. ದೇಹದಲ್ಲಿ ಶಕ್ತಿ ಇಲ್ಲದ ಕಾರಣ ಜೀರ್ಣಕ್ರಿಯೆ ಆಗುತ್ತಿಲ್ಲ. ಶಕ್ತಿಗಾಗಿ ಪ್ರೋಟಿನ್ ವಿಟಮಿನ್ ಅಲ್ಬುಮಿನ್ ಅಗತ್ಯವಿದೆ. ಇದೆಲ್ಲಾ ಕಡಿಮೆ ಇರುವುದರಿಂದ ಉಸಿರಾಟದ ತೊಂದರೆ ಆಗುತ್ತಿದೆ. ಸದ್ಯಕ್ಕೆ ದ್ರವಾಹಾರ ನೀಡಲಾಗುತ್ತಿಲ್ಲ. ಮೆಡಿಸಿನ್ ಮಾತ್ರ ಅವರಿಗೆ ನೀಡಲಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ರಕ್ತ ಪರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.      ಭಕ್ತಾದಿಗಳು ಪದೇ ಪದೇ ಮಠಕ್ಕೆ ಬರುವುದು…

ಮುಂದೆ ಓದಿ...

ಶಿವಕುಮಾರ ಸ್ವಾಮೀಜಿ ಆರೋಗ್ಯ ವಿಚಾರಿಸಿದ ಯದುವೀರ್​ ಒಡೆಯರ್

ತುಮಕೂರು:        ಮೈಸೂರಿನ ಮಹರಾಜ ಯದುವೀರ್ ಒಡೆಯರ್ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.       ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್ ಒಡೆಯರ್, ನಾನು ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದೆ. ಹಾಗೇ ಶ್ರೀಗಳನ್ನು ನೋಡಲು ಬಂದಿದ್ದೇನೆ. ಶ್ರೀಗಳು ಆರೋಗ್ಯವಾಗಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲಿ ಅಂತ ಚಾಮುಂಡೇಶ್ವರಿ ತಾಯಿಯಲ್ಲಿ ಪ್ರಾರ್ಥನೆ ಮಾಡ್ತೇನೆ.      ಶ್ರೀಗಳು ವಿಶ್ರಾಂತಿಯಲ್ಲಿದ್ದರಿಂದ ಅವರನ್ನು ಎಚ್ಚರಿಸಲು ಹೋಗಲಿಲ್ಲ. ಅವರ ಜೊತೆ ಮಾತನಾಡುವ ಅವಕಾಶ ಸಿಗಲಿಲ್ಲ. ಹಾಗಾಗಿ ನಾನು ಅವರ ಆಶೀರ್ವಾದ ಪಡೆದುಕೊಂಡು, ಅವರನ್ನು ನೋಡಿಕೊಂಡು ಬಂದೆ” ಎಂದು ಹೇಳಿದರು.  

ಮುಂದೆ ಓದಿ...

ರಸ್ತೆಯ ಇಕ್ಕೆಲಗಳಲ್ಲಿ 50 ಅಡಿ ತೆರವುಗೊಳಿಸಲು ಸಿದ್ದಲಿಂಗೇಗೌಡ ಆಗ್ರಹ

  ತುರುವೇಕೆರೆ:       ರಸ್ತೆಯ ಅಗಲೀಕರಣಕ್ಕೆ ಕ್ಷಣಗಣನೆ ಎಣಿಸುತ್ತಿರುವ ದಬ್ಬೇಘಟ್ಟ ರಸ್ತೆಯನ್ನು ರಸ್ತೆ ಮಧ್ಯಭಾಗದಿಂದ ಎರಡೂ ಬದಿ ತಲಾ 50 ಅಡಿ ತೆರವುಗೊಳಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆಂದು ವಿಶ್ವಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.       ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮುಂದಿನ 50 ವರ್ಷಗಳ ಗುರಿಯನ್ನು ಹೊಂದಿ ರಸ್ತೆ ಅಗಲೀಕರಣಕ್ಕೆ ಜಿಲ್ಲಾ ಸಂಪರ್ಕ ರಸ್ತೆ ನಿರ್ಮಾಣ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಕೆಲವು ಪಟ್ಟಭದ್ರಾಹಿತಾಸಕ್ತಿಗಳು ರಸ್ತೆ ಅಗಲೀಕರಣಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ. ರಸ್ತೆ ಅಗಲೀಕರಣಕ್ಕಾಗಿ ರಸ್ತೆಗಳ ಅಕ್ಕಪಕ್ಕದ ಮರಗಳ ತೆರವು ಕಾರ್ಯಾಚರಣೆ ಮಾಡುವ ಸಂಧರ್ಭದಲ್ಲಿ ಸುಮ್ಮನಿದ್ದವರು ತಮ್ಮ ಕಟ್ಟಡಗಳನ್ನು ಉಳಿಸಿಕೊಳ್ಳಲು ಮುಂದಾಗಿರುವುದು ವಿಪರ್ಯಾಸ.       ವಾಸ್ತವವಾಗಿ ಜಿಲ್ಲಾ ಸಂಪರ್ಕ ರಸ್ತೆಯನ್ನು ನಿರ್ಮಿಸಲು ಕನಿಷ್ಠ 25 ಮೀಟರ್ ರಸ್ತೆ ಅಗಲೀಕರಣವಾಗಬೇಕು ಎಂಬ ನಿಯಮವಿದೆ. ಆದರೆ…

ಮುಂದೆ ಓದಿ...