ಅಕ್ರಮ ಗ್ಯಾಸ್ ಅಡ್ಡೆಮೇಲೆ ಡಿಸಿಬಿ‌ ದಾಳಿ

 ಗುಬ್ಬಿ:       ಅಕ್ರಮವಾಗಿ ಗ್ಯಾಸ್ ರೀಫಿಲಿಂಗ್ ಮಾಡುತ್ತಿದ್ದ  ಅಡ್ಡೆ  ಮೇಲೆ ಜಿಲ್ಲಾ ಅಪರಾಧ ವಿಭಾಗ ದಾಳಿ ನಡೆಸಿದೆ.      ಗುಬ್ಬಿಯ ಸುಭಾಷ್ ನಗರದಲ್ಲಿ  ಮದ್ಯಾನ ಸುಮಾರು 1:30 ಗಂಟೆಯಲ್ಲಿ  ಆರೋಪಿ ಮನೆ ಪಕ್ಕದ ಶೆಡ್ ಮೇಲೆ ದಾಳಿ ನಡೆದಿದ್ದು, ಆರೋಪಿ ರವಿಕುಮಾರ ಬಿನ್ ರಂಗಸ್ವಾಮಯ್ಯ ಎಂಬುವರಿಂದ  17 ಸಿಲಿಂಡರ್  ಗಳು, ಮೂರು ವೇಯಿಂಗ್ ಮಿಷನ್ ಗಳು, ಎರಡು ರೆಗ್ಯುಲೇಟರ್ ಗಳು ಹಾಗು ರೀಫಿಲ್ಲಿಂಗ್ ಪೈಪುಗಳನ್ನು ವಶಪಡಿಸಿಕೊಳ್ಳಲಾಗಿದೆ .       ನಗರದಲ್ಲಿ ಸಾರ್ವಜನಿಕವಾಗಿ ವಿರೋಧಗಳ ನಡುವೆಯೂ ರಾಜಾರೋಷವಾಗಿ ಹಾಡು-ಹಗಲಲ್ಲೆ ಯಾವುದೇ ಭಯವಿಲ್ಲದೆ ಗ್ಯಾಸ್ ರೀಪಿಲ್ಲಿಂಗ್ ಮಾಡಲಾಗುತ್ತಿತ್ತು. ಗ್ಯಾಸ್ ರೀಫಿಲ್ಲ್ ಮಾಡುವಾಗ ಅನಾಹುತ ಸಂಭವಿಸಿದರೆ, ಸುತ್ತ-ಮುತ್ತ ವಾಸಿಸುತ್ತಿದ್ದ ಜನರಿಗೆ ಅನಾಹುತ ಸಂಭವಿಸುವ ಸಾದ್ಯತೆಗಳಿದ್ದು,  ಇದರ ಬಗ್ಗೆ ತಲೆಕೆಡಿಸಿಕೊಳ್ಳದ ರವಿಕುಮಾರ ಹಣದ ದುರಾಸೆಗಾಗಿ ಈbರೀತಿಯ ಅಕ್ರಮ ಚಟುವಟಿಕೆಯಲ್ಲಿ‌ ಭಾಗಿಯಾಗುತ್ತಿದ್ದ ಎನ್ನಲಾಗಿದೆ.       ಇದರ ಮಾಹಿತಿ‌ತಿಳಿದ ಜಿಲ್ಲಾ ಅಪರಾಧ…

ಮುಂದೆ ಓದಿ...

ಬಿಸಿಯೂಟ ಖಾಸಗೀಕರಣಕ್ಕೆ ಎಐಟಿಯುಸಿ ವಿರೋಧ

 ತುಮಕೂರು:       ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಂಡಿಸಿರುವ ಬಜೆಟ್‍ನಲ್ಲಿ ಬಿಸಿಯೂಟ ನೌಕರರನ್ನು ಕಡೆಗಣಿಸಿರುವುದನ್ನು ಹಾಗೂ ಬಿಸಿಯೂಟ ಯೋಜನೆಯನ್ನು ಗುತ್ತಿಗೆ ನೀಡುವುದನ್ನು ವಿರೋಧಿಸಿ ತುಮಕೂರು ನಗರದಲ್ಲಿ ಬಿಸಿಯೂಟ ತಯಾರಕರು ಟೌನ್‍ಹಾಲ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.       2002-03ರಲ್ಲಿ ಪ್ರಾರಂಭಗೊಂಡಿರುವ ಅಕ್ಷರ ದಾಸೋಹ ಯೋಜನೆಯಡಿ ರಾಜ್ಯಾದ್ಯಂತ 1,18,000 ಬಿಸಿಯೂಟ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿ ತಿಂಗಳು 2,700, 2,600 ರೂ ನೀಡುತ್ತಿದ್ದು, ಕನಿಷ್ಠ ವೇತನ, ಇಎಸ್‍ಐ, ಪಿಎಫ್, ಗ್ರಾಜುಯಿಟಿ, ಬೋನಸ್ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿಲ್ಲ, ರಾಷ್ಟ್ರದಾದ್ಯಂತ 25ಲಕ್ಷಕ್ಕೂ ಹೆಚ್ಚು ಮಹಿಳೆಯರು ಬಿಸಿಯೂಟ ಕಾರ್ಯಕರ್ತೆಯರಾಗಿ ದುಡಿಯುತ್ತಿದ್ದು, ಸರ್ಕಾರಗಳು ಅವರನ್ನು ಕಡೆಗಣಿಸಿವೆ ಎಂದು ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರೋಪಿಸಿದರು.       ಕಳೆದ 16 ವರ್ಷಗಳಿಂದ ಬಿಸಿಯೂಟ ಕಾರ್ಯಕರ್ತೆಯರಿಗೆ ಯಾವುದೇ ಸೌಲಭ್ಯವನ್ನು ಸರ್ಕಾರಗಳು ನೀಡುತ್ತಿಲ್ಲ, ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಅವರಿಗೆ…

ಮುಂದೆ ಓದಿ...

ಶ್ರೀಕೃಷ್ಣ ಜನ್ಮಾಷ್ಟಮಿಗೆ ಸರಕಾರಿ ರಜೆ ಘೋಷಿಸುವಂತೆ ಒತ್ತಾಯ

ಕೊರಟಗೆರೆ:       ಶ್ರೀಕೃಷ್ಣ ಜಯಂತಿಯನ್ನು ಸರಕಾರಿ ರಜೆಯನ್ನಾಗಿ ರಾಜ್ಯ ಸರಕಾರ ಘೋಷಣೆ ಮಾಡಬೇಕು ಮತ್ತು ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪಿಸಿಬೇಕು ಎಂದು ಚಿತ್ರದುರ್ಗದ ಯಾದವ ಪೀಠದ ಪೀಠಾಧ್ಯಕ್ಷಯಾದವನಂದ ಸ್ವಾಮೀಜಿ ಸರಕಾರಕ್ಕೆಒತ್ತಾಯ ಮಾಡಿದರು.       ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೊರಟಗೆರೆ ಯಾದವ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.       ಯಾದವ ಸಮುದಾಯದ ಸಮುದಾಯ ಭವನ, ವಿದ್ಯಾರ್ಥಿ ನಿಲಯ, ದೇವಾಲಯಗಳಿಗೆ ಅನುಧಾನ ನೀಡದ ಹಿನ್ನಲೆಯಲ್ಲಿ ಕಾಮಗಾರಿಗಳು ಹಲವಾರು ವರ್ಷಗಳಿಂದ ಸ್ಥಗೀತವಾಗಿವೆ. ರಾಜ್ಯ ಸರಕಾರಕೂಡಲೇಯಾದವ ಸಮುದಾಯದ ಅಭಿವೃದ್ದಿಗೆ ಸರಕಾರದಿಂದ ವಿಶೇಷ ಅನುಧಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.      ಯಾದವ ಸಂಘದರಾಜ್ಯಧ್ಯಕ್ಷ ಶ್ರೀನಿವಾಸ್ ಮಾತನಾಡಿ ಯಾದವ ಸಮುದಾಯಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ.ಯಾದವ ಸಮಾಜದ ಅಭಿವೃದ್ದಿಗೆ ರಾಜಕೀಯ ಮತ್ತು ಆರ್ಥಿಕವಾಗಿ ರಾಜ್ಯ ಮತ್ತುಕೇಂದ್ರ ಸರಕಾರದ…

ಮುಂದೆ ಓದಿ...

  ಫೆ.16, 17ರಂದು ಉದ್ಯೋಗ ಮೇಳ: ಪ್ಲೇಸ್‍ಮೆಂಟ್ ಏಜೆನ್ಸಿಗಳಿಗೆ ಅವಕಾಶವಿಲ್ಲ

 ತುಮಕೂರು :        ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಫೆಬ್ರುವರಿ 16 ಮತ್ತು 17ರಂದು ನಡೆಯಲಿರುವ ತುಮಕೂರು-ಚಿತ್ರದುರ್ಗ ಜಿಲ್ಲೆಗಳ ಬೃಹತ್ ಉದ್ಯೋಗ ಮೇಳದಲ್ಲಿ ಪ್ಲೇಸ್‍ಮೆಂಟ್ ಯೋಜನೆಗಳಿಗೆ ಭಾಗವಹಿಸಲು ಅವಕಾಶವಿಲ್ಲ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಆಯುಕ್ತೆ ಜಿ.ಸತ್ಯವತಿ ತಿಳಿಸಿದರು.       ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಮೇಳದ ಸಿದ್ಧತೆ ಬಗ್ಗೆ ಪರಿಶೀಲನಾ ಸಭೆ ನಡೆಸಿದ ಅವರು, ಈಗಾಗಲೇ ಆನ್‍ಲೈನ್ ಮೂಲಕ 17,500 ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದು, ನೋಂದಣಿ ಸಂಖ್ಯೆ 20,000ಕ್ಕೆ ತಲುಪುವ ಸಾಧ್ಯತೆ ಇದೆ. ಮೇಳದಲ್ಲಿ ಹೆಚ್ಚಿನ ಜನಸಂದಣಿ ಉಂಟಾಗದಂತೆ ಮಳಿಗೆಗಳ ನಡುವೆ ಅಂತರವಿರುವಂತೆ ನಿರ್ಮಿಸಬೇಕು. ಉದ್ಯೋಗಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ಕುಡಿಯುವ ನೀರು, ಶೌಚಾಲಯ, ಮಧ್ಯಾಹ್ನದ ಭೋಜನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಮಳಿಗೆಗಳ ಬಳಿ ಮಧ್ಯಾಹ್ನದ ಹೊತ್ತಿನಲ್ಲಿ ಬಿಸಿಲು ಬೀಳದಂತೆ ನೆರಳಿನ ವ್ಯವಸ್ಥೆ ಮಾಡಬೇಕು.…

ಮುಂದೆ ಓದಿ...

 ಶಿಕ್ಷಣ ಅಭಿವೃದ್ಧಿಗೆ ಕೈಜೋಡಿಸುವವರನ್ನು ಪ್ರೋತ್ಸಾಹಿಸಿ

 ತುಮಕೂರು :       ಕಲಿತ ಶಾಲೆ ಋಣವ ತೀರಿಸೋಣ ಎಂಬ ಮಾತಿನಂತೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರದ ಜೊತೆಗೆ ಕೈಜೋಡಿಸುವ ಹಳೆಯ ವಿದ್ಯಾರ್ಥಿಗಳ ಸಂಘಗಳನ್ನು ಪ್ರೋತ್ಸಾಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಮಂಜುನಾಥ್ ಅಭಿಪ್ರಾಯಪಟ್ಟರು.       ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ “ನಾ ಕಲಿತ ಶಾಲೆಯ ತೀರಿಸುವೆ ಋಣವ-ಇದು ನನ್ನ ಜವಾಬ್ದಾರಿ” ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ಹಳೆಯ ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳ ಕಾರ್ಯಾಗಾರ ಹಾಗೂ ವಿಶೇಷ ಸೇವೆ ಸಲ್ಲಿಸಿದ ಸಂಘದ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರದಿಂದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಿಲ್ಲ. ಇರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಕರು…

ಮುಂದೆ ಓದಿ...

ಪ್ಲಾಸ್ಟಿಕ್​ ಬಳಕೆ ಮಾಡುತ್ತಿದ್ದ ಬಾರ್​ಗಳ ಮೇಲೆ ದಾಳಿ

ತುಮಕೂರು:       ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಬಾರ್​ಗಳ ಮೇಲೆ ಮಹಾನಗರ ಪಾಲಿಕೆ ಕಮೀಷನರ್ ಭೂ ಬಾಲನ್.ಟಿರವರು ದಾಳಿ ನಡೆಸಿದ್ದಾರೆ.       ಈ ವೇಳೆ ಬಾರ್ ಮಾಲೀಕರು ಮತ್ತು ಪಾಲಿಕೆ ಕಮಿಷನರ್​ ನಡುವೆ ಮಾತಿನ ಚಕಮಕಿ ನಡೆದಿದೆ. ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದಾರೆಂಬುದರ ಕುರಿತು ಖಚಿತ ಮಾಹಿತಿ ಪಡೆದ ಪಾಲಿಕೆ ಅಧಿಕಾರಿಗಳು ರಾತ್ರೋ ರಾತ್ರಿ ಕಾರ್ಯಾಚರಣೆಗಿಳಿದಿದ್ದು, ಕಮೀಷನರ್​ ನೇತೃತ್ವದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಸಿಬ್ಬಂದಿ ದಾಳಿ ನಡೆಸಿದ್ದರು. ದಾಳಿ ವೇಳೆ ಎಸ್.ಆರ್ ಬಾರ್ ಮಾಲೀಕ ಹಾಗೂ ಕಮೀಷನರ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಾರ್ ಬಾಗಿಲು ಹಾಕುವಂತೆ ಕಮೀಷನರ್ ಸೂಚಿಸಿದ್ದಾರೆ. ಇದಕ್ಕೆ ಕೋಪಗೊಂಡ ಮಾಲೀಕ ಪ್ರತಿರೋಧ ವ್ಯಕ್ತಪಡಿಸಿದ್ದಾನೆ.        ಬಾರ್ ಮಾಲೀಕನಿಂದ 10 ಸಾವಿರ ದಂಡ ವಸೂಲಿ ಮಾಡಲಾಗಿದ್ದು, ನಗರದ ಇತರೆ ಬಾರ್​ಗಳಿಂದ 30 ಸಾವಿರ ರೂ. ದಂಡ ವಸೂಲಿ…

ಮುಂದೆ ಓದಿ...