ಹೊಟ್ಟೆನೋವು ತಾಳಲಾರದೇ ಗೃಹಿಣಿ ಆತ್ಮಹತ್ಯೆಗೆ ಶರಣು!

 ಕೊರಟಗೆರೆ:       ಗರ್ಭಕೋಶದ ಸಮಸ್ಯೆಯ ಹೊಟ್ಟೆ ನೋವಿನಿಂದ ಬಳಲುತ್ತೀದ್ದ ಮಹಿಳೆ ತನ್ನ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನೆಯ ತೀರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ       ತಾಲೂಕಿನ ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಪಂ ವ್ಯಾಪ್ತಿಯ ಸೂರೇನಹಳ್ಳಿ ಗ್ರಾಮದ ವಾಸಿಯಾದ ಗೋವಿಂದರಾಜು ಎಂಬುವನ ಮಡದಿ ರಾಧಮ್ಮ(35) ತನ್ನ ತಂದೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಆಗಿದ್ದಾಳೆ.       ಮೃತ ಮಹಿಳೆ ಮೂಲತಃ ತುಮಕೂರು ತಾಲೂಕಿನ ಸಿಬಿ ಗ್ರಾಮದವರಾಗಿದ್ದು ತನ್ನ ತಂದೆಯ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ಪಿಎಸೈ ಮಂಜುನಾಥ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದೆ ಓದಿ...

ಬೈಕ್‌ ಡಿಕ್ಕಿ : ಪಾದಾಚಾರಿ ಸಾವು

 ಕೊರಟಗೆರೆ:       ರಸ್ತೆ ಬದಿಯಲ್ಲಿ ಪಾದಚಾರಿ ಚಲಿಸುವ ವೇಳೆ ಅಪರಿಚಿತ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಮೃತ ಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.       ತಾಲೂಕಿನ ಚನ್ನರಾಯನದುರ್ಗ ಹೋಬಳಿ ಸಿದ್ದರಬೇಟ್ಟಕ್ಕೆ ಹೋಗುವ ತುಂಬಾಡಿ ಬಳಿಯ ತಿರುವಿನಲ್ಲಿ ಫೆ.27ರಂದು ಅಪರಿಚಿತ  ದ್ವಿಚಕ್ರ ವಾಹನ ಫೆ.27ರಂದು ಡಿಕ್ಕಿ ಹೊಡೆದ ಪರಿಣಾಮ ಸುಬ್ಬರಾಯಪ್ಪ(65) ಆಸ್ಪತ್ರೆಯಲ್ಲಿ ಮೃತಪಟ್ಟ ದುದೈವಿ.       ಮೃತ ಸುಬ್ಬರಾಯಪ್ಪ ಮೂಲತಃ ಕೊರಟಗೆರೆ ಪಟ್ಟಣದ ವಾಸಿಯಾಗಿದ್ದಾನೆ. ಪೊಲೀಸ್ ಆರಕ್ಷಕ ವೃತ್ತ ಉಪನಿರೀಕ್ಷಕ ಮಂಜುನಾಥ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾರೆ.  

ಮುಂದೆ ಓದಿ...

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ದ ಮೊಕ್ಕದ್ದಮೆ ದಾಖಲು

       ಸಾಗರ ಕ್ಷೇತ್ರದ ಮಾಜಿ ಶಾಸಕರು ಹಾಗು ಹಾಲಿ ಕಾಂಗ್ರೇಸ್ ಮುಖಂಡರಾಗಿರುವ ಬೇಳೂರು ಗೋಪಾಲಕೃಷ್ಣ ಅವರು ನರೇಂದ್ರ ಮೋದಿ ಅವರಿಗೆ ಗನಗನು ಇಟ್ಟು ಶೂಟ್ ಮಾಡಿ ಬನ್ನಿ ಎಂದು ಹೇಳಿರುವ ಬೇಳೂರು ವಿರುದ್ದ ಇಂದು ತುಮಕೂರಿನ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ಈ ಕೂಡಲೆ ಬಂಧಿಸಿ ಜೈಲಿಗೆ ಬಿಡುವಂತೆ ಒತ್ತಾಯ ಮಾಡಿ ಪತ್ರ ನೀಡಲಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಹಾಗು ರಾಜ್ಯ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ದಿ ನಿಗಮದ ಮಾಜಿ ನಿರ್ದೇಶಕ ಪ್ರಭಾಕರ ತಿಳಿಸಿದರು.       ಇಂದು ತುಮಕೂರಿನ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಪರವಾಗಿ ಅಡಿಷನಲ್ ಎಸ್,ಪಿ ಅವರು ದೂರು ಸ್ವೀಕರಿಸಿ ಕ್ರಮ ಜರುಗಿಸುವುದಾಗಿ ತಿಳಿಸಿದರು ಎಂಚು ಪ್ರಭಾಕರ ತಿಳಿಸಿದರು,       ಕಳೆದ ಫೆಬ್ರವರಿ 4 ರಂದು ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ…

ಮುಂದೆ ಓದಿ...

ಬೇಡಿಕೆ ಈಡೇರಿಕೆಗೆ ಕಟ್ಟಡ ಕಾರ್ಮಿಕರ ಒತ್ತಾಯ

 ತುಮಕೂರು:       ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಟೌನ್‍ಹಾಲ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.       ನಗರದ ಟೌನ್‍ಹಾಲ್‍ನಲ್ಲಿ ಸಮಾವೇಶಗೊಂಡ ಕಟ್ಟಡ ಮತ್ತು ಕ್ವಾರಿ ಕಾರ್ಮಿಕರ ಸಂಘದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಿಪಿಐ ಜಿಲ್ಲಾ ಸಂಚಾಲಕ ಗಿರೀಶ್ ಅವರು, ಕಾರ್ಮಿಕರ ಮಂಡಳಿಯಲ್ಲಿ ನೊಂದಣಿಯನ್ನು ಮಾಡುವ ವಿಧಾನವನ್ನು ಬದಲಾಯಿಸಬಾರದು, ಸಾರ್ವಜನಿಕರು ಅಥವಾ ಕಾರ್ಮಿಕರಿಗೆ ನೇರವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದರೆ, ಕಾರ್ಮಿಕರಲ್ಲದವರು ನೋಂದಣಿಯಾಗುವ ಸಾಧ್ಯತೆ ಇದ್ದು, ನೈಜ ಕಾರ್ಮಿಕರಿಗೆ ಅನ್ಯಾಯವಾಗಲಿದ್ದು, ಸರ್ಕಾರ ಯಾವುದೇ ಕಾರಣಕ್ಕೂ ಈ ವಿಧಾನವನ್ನು ಬದಲಿಸಲು ಮುಂದಾಗಬಾರದು ಎಂದು ಒತ್ತಾಯಿಸಿದರು.       ರಾಜ್ಯ ಸಮಿತಿ ಮಾರ್ಚ್ 06ರನ್ನು ಬೇಡಿಕೆ ದಿನವನ್ನಾಗಿ ಆಚರಿಸಲು ಕರೆ ನೀಡಿದ್ದು, ರಾಜ್ಯದೆಲ್ಲೆಡೆ ಕಟ್ಟಡ…

ಮುಂದೆ ಓದಿ...