ಮಹಿಳಾದಿನದ ಅಂಗವಾಗಿ ನಡೆದ ರಾಗಿಬೀಸುವ ಸ್ಪರ್ಧೆ

ಚಿಕ್ಕನಾಯಕನಹಳ್ಳಿ:       ಗ್ರಾಮೀಣ ಭಾಗದಿಂದಲೂ ಮರೆಯಾಗುತ್ತಿರುವ ಶ್ರಮಸಂಸ್ಕೃತಿಯನ್ನು, ಈಗಿನ ಸಮಾಜಕ್ಕೆ ಪರಿಚಯುಸುವಲ್ಲಿ ತಾಲ್ಲೂಕಿನ ಶೆಟ್ಟಿಕೆರೆಯ ಜನತಾಯುವ ಕ್ರೀಡಾಸಂಘ ಪ್ರಯತ್ನ ಶ್ಲಾಘನೀಯ ಕಾರ್ಯ ಎಂದು ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸಮೂರ್ತಿ ತಿಳಿಸಿದರು.       ತಾಲ್ಲೂಕಿನ ಶೆಟ್ಟಿಕೆರೆಯ ಜನತಾ ಪ್ರೌಢಶಾಲಾ ಆವರಣದಲ್ಲಿ ಅಂತರ್‍ರಾಷ್ಟ್ರೀಯ ಮಹಿಳಾದಿನದ ಅಂಗವಾಗಿ ನಡೆದ ರಾಗಿಬೀಸುವ ಸ್ಪರ್ಧೆ ಹಾಗೂ ಮೂರು ಬಿಂದಿಗೆ ನೀರು ಹೊರವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಹಿಂದೆ ಜಾನಪದಗಳ ಹುಟ್ಟಿಗೆ ಕಾರಣವಾಗಿದ್ದ ಧಾನ್ಯಗಳನ್ನು ಬೀಸುವ ಹಾಗೂ ಕುಟ್ಟುವ ಸಂಸ್ಕೃತಿ ಇಂದು ಮರೆಯಾಗಿದೆ. ಅಂದು ರೈತರು ಕೊಟ್ಟಿಗೆ ಗೊಬ್ಬರವನ್ನು ತಮ್ಮ ಹೊಲಕ್ಕೆ ಬಳಸಿ ಯಾವುದೇ ರಾಸಾಯನಿಕ ಆಂಶದಿಂದ ಹೊರತಾದ ಧಾನ್ಯವನ್ನು ಬೆಳೆಯುತ್ತಿದ್ದರು. ನಂತರ ಕಣದಲ್ಲಿ ಸಂಸ್ಕರಿಸಿದ ಧಾನ್ಯವನ್ನು ಮನೆಗೆ ತಂದು ಕೆಡದಂತೆ ತಮ್ಮದೆ ವ್ಯವಸ್ಥೆಯಲ್ಲಿ ಇಡುತ್ತಿದ್ದರು. ಇಂತಹ ಧಾನ್ಯವನ್ನು ಪುಡಿಮಾಡಿ ಬಳಸುವಲ್ಲಿ ಬೀಸುವ ಕಲ್ಲುಗಳು , ಒರಳಕಲ್ಲು ಮತ್ತು ಒನಕೆಗಳ…

ಮುಂದೆ ಓದಿ...

‘ನನಗೆ ಸಿದ್ದರಾಮಯ್ಯ ಸಿಎಂ’ : ಪುಟ್ಟರಂಗಶೆಟ್ಟಿ

ಚಾಮರಾಜನಗರ :       ನನಗೆ ಈಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ, ನನಗೆ ಮಾಡಿದ ಉಪಕಾರಕ್ಕೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ನೋಡುತ್ತೀನಿ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.       ಇಂದು ಸುದ್ದಿಗೋಷ್ಟಿಯಲಲ್ಲಿ ಮಾತನಾಡಿದ ಅವರು ನನಗೆ ಈಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ, ಕರ್ನಾಟಕಕ್ಕೆ ಕುಮಾರಸ್ವಾಮಿ ಸಿಎಂ ಆದ್ರೆ, ನನಗೆ ಮಾತ್ರ ಸಿದ್ದರಾಮಯ್ಯ ಅವರೇ ಲೀಡರ್ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.       ಎಲ್ಲರೂ ಕೂಟ ಒಗ್ಗಟ್ಟಾಗಿದ್ದೇವೆ, ಯಾರೇ ನಿಂತರೂ ಕೂಡ ಈ ಬಾರಿ ನಮ್ಮ ಅಭ್ಯರ್ಥಿಯೇ ಗೆಲುವು ದಾಖಲಿಸಿದ್ದಾರೆ. ನಮ್ಮ ಅಭ್ಯರ್ಥಿ ಧ್ರುವ ನಾರಾಯಣ್ ಗೆಲುವು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.

ಮುಂದೆ ಓದಿ...

ಹುಳಿಯಾರು: ಬೈಪಾಸ್ ರಸ್ತೆ ರದ್ದುಗೊಳಿಸಲು ಡಿಸಿಗೆ ಮನವಿ

 ತುಮಕೂರು:       ಹುಳಿಯಾರು ಹೋಬಳಿ ಪೋಚಕಟ್ಟೆ ಗ್ರಾಮದ ಪೋಚಕಟ್ಟೆ ಗೇಟ್‍ನಿಂದ ಉತ್ತರಕ್ಕೆ ಪೋಚಕಟ್ಟೆ ಗ್ರಾಮ, ಹುಳಿಯಾರು ಅಮಾನಿಕೆರೆ ಮತ್ತು ಕಸಬಾ ಗ್ರಾಮಗಳ ಆಯ್ದ ಸರ್ವೆ ನಂಬರ್‍ನ ಜಮೀನುಗಳಲ್ಲಿ ಹಾದು ಹೋಗುವ ನಿಯೋಜಿತ 150ಎ ಬೈಪಾಸ್ ರಸ್ತೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತ ಮುಖಂಡರಾದ ಸತೀಶ್ ಕೆಂಕೆರೆ ನೇತೃತ್ವದಲ್ಲಿ ಈ ಭಾಗದ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.       ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹುಳಿಯಾರಿನ ನಿವಾಸಿಗಳ ಪೈಕಿ ನಾಲ್ಕು ಮಂದಿ ಮಾತ್ರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಈ ಸಂಬಂಧ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‍ಕುಮಾರ್ ಅವರಿಗೆ ಮನವಿ ಅರ್ಪಿಸಿದರು.       ಬೈಪಾಸ್ ಆರಂಭಗೊಂಡಿರುವ ಪೋಚಕಟ್ಟೆ ಗ್ರಾಮ ಹುಳಿಯಾರು ಕಸಬಾ ಗಡಿಯಲ್ಲಿದ್ದು, ಈ ಎರಡು ಗ್ರಾಮಗಳ ಮಧ್ಯೆ ಪೂರ್ವಕ್ಕೆ ಹರಿಯುವ ವೇದಾವತಿ ಹಾಗೂ ಸುವರ್ಣಮುಖಿ ನದಿಗಳ ಉಪನದಿಯಿದ್ದು, ಪೋಚಕಟ್ಟೆ ಹಾಗೂ ಹುಳಿಯಾರು…

ಮುಂದೆ ಓದಿ...