ದೇವೆಗೌಡರ ವಿರುದ್ಧ ಗೊಲ್ಲರ ಮುನಿಸು-ಕುರುಬರ ಕನಸು!

ತುಮಕೂರು:      ತುಮಕೂರು ಲೋಕಸಭಾ ಕ್ಷೇತ್ರ ರಾಷ್ಟ್ರ ರಾಜಕಾರಣದಲ್ಲಿ ಗಮನಸೆಳೆಯುತ್ತಿದೆ. ಕಾರಣ ಜೆಡಿಎಸ್ ನ ವರಿಷ್ಠ ಹೆಚ್.ಡಿ.ದೇವೆಗೌಡರು ತುಮಕೂರಿನಿಂದ ಆಯ್ಕೆ ಬಯಸಿ ಸ್ಪರ್ಧೆ ಗಿಳಿದಿರುವುದು ಒಕ್ಕಲಿಗರ ಪರಮೋಚ್ಛ ನಾಯಕನೆಂದು ಬಿಂಬಿತವಾಗಿರುವ ದೇವೆಗೌಡರು ತನ್ನ ಕುಟುಂಬ ರಾಜಕಾರಣದಿಂದಲೇ ಹೆಸರುವಾಸಿಯಾದವರು.       ತನ್ನ ಮೊಮ್ಮಕ್ಕಳಿಗಾಗಿ ಕ್ಷೇತ್ರ ಬಿಟ್ಟು ತುಮಕೂರಿನಲ್ಲಿ ಸ್ಪರ್ಧೆಗಿಳಿದಿರುವ ದೊಡ್ಡ ಗೌಡರು ಸ್ಥಳೀಯ ಜೆಡಿಎಸ್ ನಾಯಕರ ಹಾಗೂ ಮುಖಂಡರ ಆಂತರಿಕ ಕ್ರೋದಾಗ್ನಿಗೆ ತುತ್ತಾಗಿಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾರಣ ಗೌಡರು ಇಲ್ಲಿ ಆಯ್ಕೆಯಾಗಿಬಿಟ್ಟರೆ ಹಾಸನದ ರಾಜಕಾರಣದ ರೀತಿಯಲ್ಲಿ ಹಿಡಿತ ಸಾಧಿಸುತ್ತಾರೆ, ಸ್ಥಳೀಯ ನಾಯಕರಿಗೆ ಕವಡೆಕಾಸಿನ ಕಿಮ್ಮತ್ತಿರುವುದಿಲ್ಲ ಎನ್ನುವುದು ಕೆಲವರ ಅಭಿಪ್ರಾಯ ದೇವೆಗೌಡರ ಸ್ಪರ್ಧೆಯಿಂದ ಬೇಸತ್ತಿರುವ ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಉಳಿವಿಗಾಗಿ ಹಾಗೂ ತಮ್ಮ ಮುಂದಿನ ರಾಜಕೀಯ ಅಸ್ತಿತ್ವಕ್ಕಾಗಿ ಚಿಂತಸುವ ಅನಿವಾರ್ಯತೆ ಎದುರಾಗಿದೆ.       ರಾಜ್ಯ ಕಾಂಗ್ರೆಸ್ ನಾಯಕರ ಮೈತ್ರಿ…

ಮುಂದೆ ಓದಿ...

ದೇವೆಗೌಡರ ನಾಮಪತ್ರ ಸಲ್ಲಿಕೆಗೂ ಮುನ್ನ ಅಪಸ್ವರ..?

  ತುಮಕೂರು:         ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯ ನಾಮಪತ್ರ ಸಲ್ಲಿಕೆ ಕಾರ್ಯ ಭರದಿಂದ ಸಾಗಿ ಇಡೀ ದೇಶದ ಜನತೆ ತಿರುಗಿ ನೊಡುವ ರೀತಿಯಲ್ಲಿ ಗಮನ ಸೆಳೆದಿರುವುದು ಹೆಚ್.ಡಿ.ದೇವೆಗೌಡರು ಕಣಕ್ಕಿಳಿದಿರುವುದು ವಿಶೇಷ. ಆದರೆ, ವಿಶೇಷವೆಂದರೆ ದೊಡ್ಡ ಗೌಡರ ನಾಮಪತ್ರ ಸಲ್ಲಿಕೆಗೂ ಮುನ್ನ ಖಾಲಿ ಕೊಡಗಳ ಸ್ವಾಗತ ‘ಗೋ ಬ್ಯಾಕ್ ದೇವೇಗೌಡ’ ಎಂಬ ಪದಗಳು ಗೌಡರನ್ನ ಪೇಚಿಗೆ ಸಿಲುಕಿಸಿತ್ತು.       ಹೆಚ್.ದೇವೇಗೌಡ ಅವರು ಇಂದು ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜ್ಯೋತಿಷಿಗಳ ಸಲಹೆಯಂತೆ 2.11ಕ್ಕೆ ಸರಿಯಾಗಿ ದೇವೇಗೌಡರು, ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.       ಹೆಚ್.ಡಿ.ದೇವೇಗೌಡರಿಗೆ ಡಿಸಿಎಂ ಡಾ.ಜಿ ಪರಮೇಶ್ವರ್ ಹಾಗೂ ಮಾಜಿ ಶಾಸಕ ಕೆಕೆ ಷಡಕ್ಷರಿ, ಡಾ||ರಫೀಕ್ ಅಹಮದ್, ರಮೇಶ್ ಬಾಬು ಸಾಥ್ ನೀಡಿದರು.       ನಾಮಪತ್ರ…

ಮುಂದೆ ಓದಿ...