ಒಕ್ಕಲಿಗ ಸಮುದಾಯವನ್ನು ಮುಗಿಸುವ ಯತ್ನ-ಮಾಜಿ ಸಚಿವ ಶ್ರೀನಿವಾಸ್

ತುಮಕೂರು:       ಒಕ್ಕಲಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಬೇರೆ ಸಮುದಾಯದವರಿಗೆ ಆಗಿದ್ದರೆ, ಸಂಘಟಿತರಾಗಿ ಹೋರಾಡುತ್ತಿದ್ದರು, ಆದರೆ ಒಕ್ಕಲಿಗ ಸಮುದಾಯವನ್ನು ತುಳಿಯುವ ಯತ್ನ ಮಾಡುತ್ತಿದ್ದರು, ಒಕ್ಕಲಿಗ ಸಮುದಾಯವು ಮಲಗಿದೆ, ಇದೇ ಮನೋಸ್ಥಿತಿ ಮುಂದುವರೆದರೆ ಸಮಾಜ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಶ್ರೀನಿವಾಸ್ ಎಚ್ಚರಿಕೆ ನೀಡಿದರು.       ನಗರದ ಕುಂಚಿಟಿಗರ ಸಮುದಾಯಭವನದಲ್ಲಿ ನಡೆದ ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಏರ್ಪಡಿಸಿದ್ದ 11ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.        ಕುಮಾರಸ್ವಾಮಿ ಮುಖ್ಯಮಂತ್ರಿ ಪದವಿಯಿಂದ ಕೆಳಗೆ ಇಳಿದ ಕ್ಷಣದಿಂದ ವಿಧಾನಸೌಧದಲ್ಲಿ ಒಕ್ಕಲಿಗ ಸಮುದಾಯದ ನೌಕರರಿಗೆ ಆಗಿರುವ ತೊಂದರೆಯನ್ನು ಅರಿತುಕೊಳ್ಳಬೇಕಿದೆ, ದೇಶದಲ್ಲಿ ಯಾರು ಮಾಡದೇ ಇರುವುದನ್ನು ಡಿ.ಕೆ.ಶಿವಕುಮಾರ್ ಅವರು ಮಾಡಿದ್ದಾರೆಯೇ? ವೀರಶೈವ-ಲಿಂಗಾಯತ ಸಮುದಾಯದ ಯಡಿಯೂರಪ್ಪ ಅವರಿಗೆ ಸಿಎಂ ಪದವಿ ತಪ್ಪಿದ ತಕ್ಷಣವೇ…

ಮುಂದೆ ಓದಿ...