ಸಿಪಿಐ ಪಾರ್ವತಮ್ಮನ ವರ್ತನೆಗೆ ಛೀಮಾರಿ

 ತುಮಕೂರು:       ನಗರದ ತಿಲಕ್‍ಪಾರ್ಕ್ ಪೊಲೀಸ್ ವೃತ್ತ ನಿರೀಕ್ಷಕಿ ಪಾರ್ವತಮ್ಮ ಈಚೆಗೆ ರೌಡಿ ಶೀಟರ್‍ಗಳಿಗೆ ಕೊಟ್ಟ ವಾರ್ನಿಂಗ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ವಿಡಿಯೋ ವೈರೆಲ್ ಆಗಿದೆ.       ಕರ್ತವ್ಯದಲ್ಲಿದ್ದ ಸಿಪಿಐ ಪಾರ್ವತಮ್ಮ ರೌಡಿ ಶೀಟರ್‍ಗಳಿಗೆ ಪರಿವರ್ತನಾ ಪಾಠ ಹೇಳಲು ಹೋಗಿ ತಾವೇ ಪಾಠ ಕಲಿಯುವಂತಹ ಸ್ಥಿ?ತಿಗೆ ತಾವೇ ತಂದುಕೊಂಡಿದ್ದಾರೆ ಎಂದು ಕೆಲ ಅಧಿಕಾರಿಗಳೇ ಹೇಳುತ್ತಿದ್ದಾರೆ.       ಅಸಂಬದ್ಧ ವಾರ್ನಿಂಗ್, ಒಣ ಪ್ರತಿಷ್ಠೆ ತೋರಿದ ಸಿಪಿಐಗೆ ಗರ್ವಭಂಗವಾಗಿದೆ. ನಾಗರೀಕ ಸಮಾಜದ ಶಾಂತಿ, ಸೌಹಾರ್ದತೆ ಕಾಪಾಡುವುದು ಪೆÇಲೀಸ್ ಇಲಾಖೆ ಕರ್ತವ್ಯ. ಆದರೆ, ತಾವು ಏನು, ಹೇಳ್ತಿದ್ದೇನೆ ಎಂಬ ಅರಿವೂ ಇಲ್ಲದೆ ಏಕಾಏಕಿ ಸಿಂಗಂ ಆಗಲು ಹೊರಟ ಲೇಡಿ ಟೈಗರ್‍ನ ದಬ್ಬಾಳಿಕೆಗೆ ಜನ ಮುಸಿ ಮುಸಿ ನಗುವಂತಾಗಿದೆ.       ಠಾಣೆ ಮುಂದೆ ನಿಂತ ಪಾರ್ವತಮ್ಮ ಗನ್…

ಮುಂದೆ ಓದಿ...

ಉಪನಾಲೆಗೆ ನೀರು ಹರಿಸಲು ರೈತರ ಆಗ್ರಹ!

ತುಮಕೂರು:       ಹೇಮಾವತಿ ಉಪನಾಲೆ 24ರಲ್ಲಿ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.       ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಜಿಲ್ಲೆಗೆ ಹೇಮಾವತಿ ನೀರನ್ನು ಹರಿಸುವ ಪ್ರಯತ್ನವನ್ನು ಮಾಡದ ರಾಜಕಾರಣಿಗಳು, ಹೇಮಾವತಿ ವಿಚಾರವನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.       ಉಪನಾಲೆ 24ರ ವ್ಯಾಪ್ತಿಯಲ್ಲಿ ಬರುವ ಗುಬ್ಬಿ ತಾಲ್ಲೂಕಿನ ಎಸ್.ಕೊಡಗೀಹಳ್ಳಿ, ಕುನ್ನಾಲ, ಚಂಗಾವಿ, ಹಿಂಡಿಸ್ಕರೆ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸದೆ, ಉಪನಾಲೆ 23, 25ಕ್ಕೆ ಮಾತ್ರ ಹೇಮಾವತಿ ನೀರನ್ನು ಹರಿಸಲಾಗುತ್ತಿದೆ. ಕುಣಿಗಲ್ ಮತ್ತು ಸಿಎಸ್‍ಪುರ ಕೆರೆಗಳಿಗೆ ನೀರು ಹರಿಸುವಾಗ ಮಾತ್ರ ಉಪನಾಲೆ 24ರಲ್ಲಿ ನೀರು ಹರಿಸಲು ಸಾಧ್ಯ, ಆದರೆ ಅಧಿಕಾರಿಗಳು ಉಪನಾಲೆ 24ಕ್ಕೆ…

ಮುಂದೆ ಓದಿ...

ಎಲ್ಲ ಆಟೋ ರಿಕ್ಷಾಗಳಿಗೆ ಟಿಟಿಪಿ ಸಂಖ್ಯೆ ಕಡ್ಡಾಯ!

ತುಮಕೂರು:       ಜಿಲ್ಲೆಯಲ್ಲಿರುವ ಎಲ್ಲ ಆಟೋ ರಿಕ್ಷಾಗಳಿಗೆ ಕಡ್ಡಾಯವಾಗಿ ಸಂಚಾರಿ ಪೊಲೀಸ್ ಠಾಣೆಯಿಂದ ನೀಡಲಾಗುವ ಟಿಟಿಪಿ(ತುಮಕೂರು ಟ್ರಾಫಿಕ್ ಪೊಲೀಸ್) ಸಂಖ್ಯೆಯನ್ನು ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಅವರು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.       ತಮ್ಮ ಕಚೇರಿಯಲ್ಲಿಂದು ಜರುಗಿದ ಇ-ಆಟೋ ರಿಕ್ಷಾ ವಿತರಣೆ ಕುರಿತ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಟಿಟಿಪಿ ಸಂಖ್ಯೆ ಅಳವಡಿಸದ ಆಟೋ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ ಅವರು ಟಿಟಿಪಿ ಸಂಖ್ಯೆಯನ್ನು ಅಳವಡಿಸುವುದರಿಂದ ಜಿಲ್ಲೆಯಲ್ಲಿ ಚಾಲನೆಯಲ್ಲಿರುವ ಆಟೋರಿಕ್ಷಾಗಳ ನಿಖರ ಅಂಕಿ-ಅಂಶ ದೊರೆಯಲಿದೆ ಎಂದು ತಿಳಿಸಿದರು.       ಜಿಲ್ಲೆಯ ಎಲ್ಲ ಆಟೋ ರಿಕ್ಷಾ ಚಾಲಕರ ಚಾಲನಾ ಪರವಾನಗಿಯನ್ನು ಕೂಡಲೇ ಆಧಾರ್‍ಲಿಂಕ್ ಮಾಡಬೇಕೆಂದು ಆರ್‍ಟಿಓಗೆ ಸೂಚಿಸಿದರು. ಪ್ರಾದೇಶಿಕ ಸಾರಿಗೆ ಇಲಾಖೆಗೆ ನಿಗಧಿತ ಶುಲ್ಕ ಪಾವತಿಸಿ ಆಟೋಗಳ ಹಿಂದೆ ವಿವಿಧ ಕಂಪನಿಗಳ…

ಮುಂದೆ ಓದಿ...