ತುಮಕೂರಿನಲ್ಲಿ ಕ್ರೀಡಾ ಹಬ್ ನಿರ್ಮಾಣಕ್ಕೆ ಚಿಂತನೆ

ತುಮಕೂರು:       ಜಿಲ್ಲೆಯನ್ನು ಭವಿಷ್ಯದಲ್ಲಿ ಕ್ರೀಡಾ ಹಬ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ಕರ್ನಾಟಕ ಸ್ಟೋಟ್ರ್ಸ್ ಕೋ ಆರ್ಡಿನೇಟ್ ಕಮಿಟಿ ವತಿಯಿಂದ ಕ್ರೀಡಾಸಕ್ತ ಯುವಜನರ ಸಭೆಯನ್ನು ನಗರದ ಉಡ್‍ಲ್ಯಾಂಡ್ ಹೊಟೇಲ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿತ್ತು.      ಶಿರಾ ಗ್ರೆನ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಲಕ್ಷ್ಮಣಗೌಡ ಅವರು ಸಭೆಯನ್ನು ಉದ್ದೇಶಿಸಿ ಮೊದಲಿಗೆ ಮಾತನಾಡಿ, ನಿವೃತ್ತ ಐಎಎಸ್ ಅಧಿಕಾರಿ ಜಮೀರ್ ಪಾಷ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸ್ಟೋಟ್ರ್ಸ್ ಕೋ ಅರ್ಡಿನೇಟ್ ಕಮಿಟಿ ಯುವಜನರನ್ನು ಕ್ರೀಡೆಯತ್ತ ಸೆಳೆಯುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ.ಯುವಜನತೆ ಕ್ರೀಡೆಯತ್ತ ತೊಡಗಿ ಕೊಳ್ಳುವುದರಿಂದ ಸಮಾಜದಲ್ಲಿ ಸಮಾಜ ವಿದ್ರೋಹಿ ಕೃತ್ಯಗಳು ಕಡಿಮೆಯಾಗುವುದರ ಜೊತೆಗೆ,ಉತ್ತಮ ಪ್ರಜೆಗಳನ್ನು ದೇಶಕ್ಕೆ ನೀಡಬಹುದು. ಈ ನಿಟ್ಟಿನಲ್ಲಿ ಯುವಜನರಿಗೆ ಇದೊಂದು ಒಳ್ಳೆಯ ವೇದಿಕೆ.ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.       ಸಭೆಯ ಅಧ್ಯಕ್ಷತೆ ವಹಿಸಿದ್ದ ಮುನೀರ್ ಅಹಮದ್(ಅಮೇರಿಕಾ)…

ಮುಂದೆ ಓದಿ...

ಸಿದ್ಧಗಂಗಾ ಮಠಕ್ಕೆ ರಾಷ್ಟ್ರೀಯ ಉಪಾಧ್ಯಕ್ಷ, ಸಂಸದ ಬೈಜಯಂತ್ ಪಾಂಡ ಭೇಟಿ

ತುಮಕೂರು:       ನಗರದ ಸಿದ್ಧಗಂಗಾ ಮಠಕ್ಕೆ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡ ಭೇಟಿ ನೀಡಿ, ಶ್ರೀಗಳ ಆರ್ಶೀವಾದ ಪಡೆದುಕೊಂಡರು.       ಸಂಸದರಾಗಿರುವ ಬೈಜಯಂತ್ ಪಾಂಡ ಅವರು ಒಂದು ದೇಶ ಒಂದು ಸಂವಿಧಾನ ವಿಚಾರಗೋಷ್ಠಿ ಅಂಗವಾಗಿ ತುಮಕೂರಿನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೂ ಮುನ್ನ ಸಿದ್ಧಗಂಗಾ ಮಠಕ್ಕೆ ತೆರಳಿ, ಶ್ರೀ ಶಿವಕುಮಾರಸ್ವಾಮೀಜಿ ಗದ್ದುಗೆಗೆ ನಮಿಸಿದರು.       ಸುದ್ದಿಗಾರರೊಂದಿಗೆ ಶ್ರೀ ಮಠದ ಕಾರ್ಯವೈಖರಿಯ ಬಗ್ಗೆ ತಿಳಿದುಕೊಂಡು ತುಂಬಾ ಸಂತೋಷವಾಗಿದ್ದು, ವಾಜಪೇಯಿ ಅವರು ಹಾಗೂ ನೂಯಾರ್ಕ್‍ನಲ್ಲಿ ನಡೆದ ಕಾರ್ಯದಲ್ಲಿ ಸಿದ್ಧಗಂಗಾ ಮಠದ ಬಗ್ಗೆ ತಿಳಿದುಕೊಂಡಿದ್ದೇನೆ, ಈಗ ನೋಡಿದ್ದು ತುಂಬಾ ಸಂತೋಷವಾಗಿದ್ದು, ಇಡೀ ದೇಶಕ್ಕೆ ಒಂದೇ ಸಂವಿಧಾನವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ 370 ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಇದರಲ್ಲಿ ಯಾರ ಮೇಲೆಯೂ ಒತ್ತಡ ಹಾಕಿಲ್ಲ ಎಂದು ಶ್ರೀಗಳಿಗೆ ತಿಳಿಸಿಕೊಟ್ಟರು.       ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್,…

ಮುಂದೆ ಓದಿ...

ಮಧುಗಿರಿ : ಕರಡಿ ಪ್ರತ್ಯಕ್ಷ – ಜನತೆಯಲ್ಲಿ ಆತಂಕ

ಮಧುಗಿರಿ :       ತಾಲ್ಲೂಕಿನ ಬೇಡತ್ತೂರು ಗ್ರಾಮಕ್ಕೆ ಹೊಂದಿಕೊಂಡಿರುವ ಬೆಟ್ಟದಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು ಕರಡಿಯನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ.       ಮನೆಗಳ ಪಕ್ಕದಲ್ಲೇ ಇರುವ ಬೆಟ್ಟದಲ್ಲಿ ಕರಡಿ ಓಡಾಟ ನಡೆಸುತ್ತಿದ್ದು ಈ ಪ್ರದೇಶದ ಸುತ್ತಮುತ್ತ ಈಗಾಗಲೇ ಜನರ ಮೇಲೆ ಕರಡಿ ದಾಳಿ ನಡೆಸಿ ಗಾಯ ಗೊಳಿಸಿರುವ ಘಟನೆ ಆಗಾಗ್ಗೆ ನಡೆಯುತ್ತಿರುತ್ತದೆ.       ಈ ಘಟನೆ ಮಾಸುವ ಮುನ್ನವೇ ಕರಡಿ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಇನ್ನಷ್ಟು ಆತಂಕ ಮೂಡಿಸಿದ್ದು ಮಹಿಳೆಯರು, ಮಕ್ಕಳು ಹೊರಗಡೆ ಹೋಗಲು ಹೆದರುತ್ತಿದ್ದಾರೆ.      ಅರಣ್ಯ ಇಲಾಖೆಯವರಿಗೆ ತಿಳಿಸಿದರೂ ಇತ್ತ ಗಮನ ಹಾರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಂಜೆಯಾದರೆ ಸಾಕು ಮನೆಯಿಂದ ಆಚೆ ಹೋಗಲು ಅಂಜುತ್ತಿರುವ ಗ್ರಾಮಸ್ಥರು ಜನರ ಗಲಾಟೆ ಕಂಡು ಬೆಟ್ಟ ಹತ್ತಿಹೋಗುತ್ತಿರುವ ಕರಡಿಗಳು ರಾತ್ರಿ ಹೊತ್ತಿನಲ್ಲಿ ಬೆಟ್ಟದ ಬುಡದಲ್ಲೇ ಇರುವ ಬೇಡತ್ತೂರು ಗ್ರಾಮಕ್ಕೆ ಆಹಾರ…

ಮುಂದೆ ಓದಿ...