ಓದಿನ ಕಡೆ ಗಮನಕೊಡು : ದೊಡ್ಡವನಾದ ಮೇಲೆ ಸ್ಟೈಲ್ ಮಾಡು – ವಿದ್ಯಾರ್ಥಿಗೆ ಶಿಕ್ಷಣ ಸಚಿವರ ಸಲಹೆ

ತುಮಕೂರು:       ಸರ್ಕಾರಿ ಹಿರಿಯ ಪ್ರಾಥಮಿಕ ಆರ್ಯಬಾಲಿಕಾ ಪಾಠಶಾಲೆಗೆ ದಿಢೀರ್ ಭೇಟಿ ನೀಡಿದ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಶಾಲೆಯಲ್ಲಿರುವ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.       ಗುಬ್ಬಿಯಲ್ಲಿ ನಿಗದಿಯಾಗಿದ್ದ ಕಾರ್ಯವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಚಿವರು, ಎಂ.ಜಿ.ರಸ್ತೆಯಲ್ಲಿರುವ ಆರ್ಯಬಾಲಿಕಾ ಪಾಠಶಾಲೆಗೆ ಭೇಟಿ ನೀಡಿ, ಮೊದಲಿಗೆ ಅಡುಗೆ ಮನೆಯನ್ನು ವೀಕ್ಷಿಸಿ, ಅಡುಗೆ ಸಿಬ್ಬಂದಿಯಿಂದ ಮಾಹಿತಿ ಪಡೆದ ನಂತರ ಶಾಲಾ ಕೊಠಡಿಗಳಿಗೆ ತೆರಳಿದ ತಕ್ಷಣ ಮಕ್ಕಳು ನಲಿ-ಕಲಿ ಎಂಬ ಹಾಡನ್ನು ಸಚಿವರ ಮುಂದೆ ಹಾಡಿದರು. ನಂತರ ಶಿಕ್ಷಕಿಯಿಂದ ಮಾಹಿತಿ ಪಡೆದರು.       ಮತ್ತೊಂದು ಕೊಠಡಿಗೆ ತೆರಳಿ ವಿದ್ಯಾರ್ಥಿಗೆ ಮಗ್ಗಿ ಹೇಳಲು ಹೇಳಿದರು, ನಂತರ ಕೆಲ ಮಗ್ಗಿಯನ್ನು ಮಧ್ಯೆ ಮಧ್ಯೆ ಕೇಳಿದ ಸಚಿವರು, ಮಧ್ಯಾಹ್ನದ ಊಟ ನೀಡುತ್ತಾರೆ, ಗುಣಮಟ್ಟದಿಂದ ಕೂಡಿರುತ್ತದೆಯೇ? ಶಿಕ್ಷಕರು ಚೆನ್ನಾಗಿ ಪಾಠ ಮಾಡುತ್ತಾರೆಯೇ ಎಂದೆಲ್ಲ ಕೇಳಿ ತಿಳಿದುಕೊಂಡ ಅವರು, ಸಹ…

ಮುಂದೆ ಓದಿ...

ಇಂದಿನಿಂದ ಅ.1 ರವರೆಗೆ ಪ್ಲಾಸ್ಟಿಕ್ ನಿಷೇಧ : ಜನಾಂದೋಲನ!

 ತುಮಕೂರು :      ಮಹಾತ್ಮಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಪ್ಲಾಸ್ಟಿಕ್ ಸಾಮಗ್ರಿಗಳ ನಿಷೇಧದ ಬಗ್ಗೆ ಅರಿವು ಮೂಡಿಸಲು ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 1ರವರೆಗೆ ಜಿಲ್ಲಾದ್ಯಂತ ಜನಾಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಸೆ.24ರ ಸಂಜೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲೆಯ ಎಲ್ಲಾ ತಹಶೀಲ್ದಾರ್, ತಾಲ್ಲೂಕು ಪಂಚಾಯತಿ ಇಓ ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.       ಜಿಲ್ಲಾಧಿಕಾರಿಗಳ ಕಛೇರಿ ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿ ಹಾಗೂ ನಗರ ಸ್ಥಳೀಯ ಸಂಸ್ಥೆ ಕಛೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿರ್ಬಂಧಿಸಲಾಗುವುದು. ಯಾವುದೇ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಕಡ್ಡಾಯವಾಗಿ ಉಪಯೋಗಿಸಬಾರದು ಎಂದು ತಿಳಿಸಿದರು.       ಈ ಜನಾಂದೋಲನ ಕಾರ್ಯಕ್ರಮದಡಿ ಪ್ಲಾಸ್ಟಿಕ್ ಬಳಕೆ ನಿಷೇಧದ…

ಮುಂದೆ ಓದಿ...