ಮಧುಗಿರಿ : ದ್ವಿಚಕ್ರ ವಾಹನ ಸವಾರನೊಬ್ಬ ಆಕಸ್ಮಿಕವಾಗಿ ರಸ್ತೆಯಲ್ಲಿ ಬಿದ್ದಿದನ್ನು ಕಂಡು ತಹಶೀಲ್ದಾರ್ ಡಾ. ಜಿ. ವಿಶ್ವನಾಥ್ ರವರು ವಾಹನ ಸವಾರನಿಗೆ ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ. ತಾಲ್ಲೂಕಿನ ಪುರವರ ಹೋಬಳಿಯ ಬ್ಯಾಲ್ಯ ಗ್ರಾಮಕ್ಕೆ ಕಾರ್ಯದ ನಿಮಿತ್ತ ಭೇಟಿ ನೀಡುವಾಗ ಮರಬಹಳ್ಳಿ ಕೋಡಗದಾಲ ಗ್ರಾಮಗಳ ಮಧ್ಯೆ ಹಾದುಹೋಗಿರುವ ಗೌರಿಬಿದನೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಬಿದ್ದಂತಹ ದ್ವಿಚಕ್ರವಾಹನವನ್ನು ಮೇಲಕ್ಕೆತ್ತಿ ವಾಹನ ಸವಾರನ ಯೋಗಕ್ಷೇಮ ವಿಚಾರಿಸಿ ಸವಾರನ ಸಂಭಂಧಿಕರಿಗೆ ದೂರವಾಣಿ ಕರೆ ಮಾಡಿ ಸಣ್ಣ ಪುಟ್ಟ ಗಾಯಾಗಳಾಗಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಸರಳ ಸಜ್ಜನಿಕೆಯ ಸರ್ಕಾರಿ ಅಧಿಕಾರಿಯಾಗಿರುವ ತಹಶೀಲ್ದಾರ್ ರವರು ಬಡ ಕುಟುಂಬದಿಂದ ಬಂದವರಾಗಿದ್ದು, ಸರ್ಕಾರಿ ಸೇವೆಗೂ ಮೊದಲು ತಮ್ಮ ಪದವಿ ಪೂರ್ವ ವಿದ್ಯಾಭ್ಯಾಸದ ಸಮಯದಲ್ಲಿ ಪತ್ರಿಕೆಗಳನ್ನು ಹಂಚುವ ಕೆಲಸ…
ಮುಂದೆ ಓದಿ...Day: February 10, 2021
ಮಾ.23 ರಿಂದ ದೇವರಾಯನದುರ್ಗ ಜಾತ್ರೆ : ಕೋವಿಡ್ ಮಾರ್ಗಸೂಚಿ ಪಾಲಿಸಲು ಸೂಚನೆ
ತುಮಕೂರು : ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮಾರ್ಚ್ 23ರಿಂದ ಏಪ್ರಿಲ್ 4ರವರೆಗೆ ನಡೆಯಲಿರುವ ಜಿಲ್ಲೆಯ ಸುಪ್ರಸಿದ್ಧ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವವು ಶಾಸ್ತ್ರೋಕ್ತವಾಗಿ ಜರುಗಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪುಣ್ಯ ಪ್ರಸಿದ್ಧಿಯಾಗಿರುವ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವುದರಿಂದ ಬರುವ ಭಕ್ತಾಧಿಗಳ ಆರೋಗ್ಯದ ಹಿತದೃಷ್ಠಿಯಿಂದ ಕೋವಿಡ್-19 ನಿಯಾಮಾವಳಿಗಳು ಕಡ್ಡಾಯವಾಗಿ ಪಾಲನೆಯಾಗಬೇಕು ಎಂದರು. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳು/ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಕೋವಿಡ್-19 ನಿಯಮಗಳನ್ನು ಪಾಲಿಸಬೇಕು. ಜಾತ್ರಾ ಸಮಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯವರು ಅಗತ್ಯ ಔಷಧಿ, ಸಿಬ್ಬಂದಿ,…
ಮುಂದೆ ಓದಿ...ಸೂಕ್ತ ಅಂಡರ್ಪಾಸ್ಗಾಗಿ ಪ್ರತಿಭಟನೆ : ತಾತ್ಕಾಲಿಕ ವಾಪಸ್
ತಿಪಟೂರು : ಕಳೆದ 11 ದಿನಗಳಿಂದ ಸೂಕ್ತ ಅಂಡರ್ಪಾಸ್ಗಾಗಿ ನಗರದ ಕೆಂಚರಾಯ ನಗರ, ಬಿಳಿಕಲ್ಲ ನಗರ, ಹಳೆಪಾಳ್ಯದ ಸಾರ್ವಜನಿಕರು ಅನಿರ್ಧಿಷ್ಟಾವದಿ ಪ್ರತಿಭಟನೆ ನಡೆಸುತ್ತಿದ್ದು, ಬಿ.ಜೆ.ಪಿ ಮುಖಂಡ ಲೋಕೇಶ್ವರ್ ಹಾಗೂ ರಾಷ್ಟ್ರೀಯ ಹೆದ್ದಾರಿ 206ರ ಯೋಜನಾಧಿಕಾರಿ ಶಿರೀಷ್ ಗಂಗಾಧರ್ ಸ್ಥಳಕ್ಕೆ ಭೇಟಿ ನೀಡಿ ಇನ್ನು 30 ದಿನಗಳಲ್ಲಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಶಿವಮೊಗ್ಗ ಹಾಗೂ ತುಮಕೂರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಚತುಷ್ಪತ ಕಾಮಾಗಾರಿಯು ನಡೆಯುತ್ತಿದ್ದು ಈ ಕಾಮಗಾರಿಯಲ್ಲಿ ನಿರ್ಮಾಣವಾಗಿರುವ ರಸ್ತೆಯಿಂದ ನಗರದ ಹಳೆಪಾಳ್ಯ ಹಾಗೂ ಕೆಂಚರಾಯನಗರ, ಬಿಳಿಕಲ್ಲುನಗರ ಹಾಗೂ ಗೆದ್ಲೇಹಳ್ಳಿಯ ಜನರು ರಸ್ತೆಯನ್ನು ದಾಟಲು ಸುಮಾರು 1.5 ಕಿಮೀ ಸುತ್ತಿಬಳಸಿ ಬರಬೇಕು ಹಾಗೂ ಶಾಲೆಗಾಗಿ ಮಕ್ಕಳನ್ನು ಕರೆದುಕೊಂಡು ಹೋಗಲು ಸಾಧ್ಯವಾಗುವುದರ ಜೊತೆಗೆ ಕೂಲಿಕೆಲಸಕ್ಕೆ ಹೋಗುವ ಸಾಮಾನ್ಯ ಕೂಲಿಕಾರರು ಕಾಲ್ನಡಿಗೆಯಲ್ಲಿ ತಮ್ಮ ಕಾರ್ಯಸ್ಥಳವನ್ನು ತಲುಪುವ ವೇಳೆಗೆ ಸುಸ್ತಾಗುತ್ತಾರೆ.…
ಮುಂದೆ ಓದಿ...ಮಧುಗಿರಿ ಜಿಲ್ಲೆಯಾಗಲು ಎಲ್ಲಾ ಅರ್ಹತೆ ಇದೆ : ಕೆಎನ್ಆರ್
ಮಧುಗಿರಿ: ಮಧುಗಿರಿ ಜಿಲ್ಲೆಯಾಗಲು ಎಲ್ಲಾ ಅರ್ಹತೆ ಇದ್ದು ಸರ್ಕಾರವನ್ನು ಕೇಳೋರು ಇಲ್ಲದ ಕಾರಣ ನೆನೆಗುದಿಗೆ ಬಿದ್ದಂತಾಗಿದೆ ಎಂದು ಮಾಜಿ ಶಾಸಕ ಕೆ .ಎನ್. ರಾಜಣ್ಣ ತಿಳಿಸಿದರು. ಪಟ್ಟಣದಲ್ಲಿರುವ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾತಂತ್ರ ಪೂರ್ವದಲ್ಲೇ ಉಪವಿಭಾಗಾಧಿಕಾರಿ ಕಚೇರಿ ಇದ್ದು.ಡಾ. ನಂಜುಂಡಪ್ಪ ವರದಿ ಆಧಾರಿತ ಅತಿ ಹಿಂದುಳಿದ ತಾಲ್ಲೂಕುಗಳಾದ ಮಧುಗಿರಿ- ಪಾವಗಡ- ಶಿರಾ- ಕೊರಟಗೆರೆ ತಾಲ್ಲೂಕುಗಳು ಸೇರಿ ಉಪವಿಭಾಗ ಕೇಂದ್ರವಾಗಿದ್ದು, ಈಗಾಗಲೇ ಶೈಕ್ಷಣಿಕ ಜಿಲ್ಲೆ ಆಗಿರುವುದರಿಂದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಖಜಾನೆ ಕಚೇರಿ ಹೊರತುಪಡಿಸಿ ಎಲ್ಲಾ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಮೂವತ್ತೊಂದನೇ ಜಿಲ್ಲೆಯಾಗಿ ವಿಜಯನಗರ ಘೋಷಣೆಯಾಗಿದ್ದು ತುಂಕೂರು ಜಿಲ್ಲೆ ಅತಿ ದೊಡ್ಡ ಜಿಲ್ಲೆ ಯಾಗಿದೆ. ಇದನ್ನು ವಿಭಜಿಸಿ ಮಧುಗಿರಿ ಜಿಲ್ಲೆಯನ್ನಾಗಿಸಿ ಎಂದು ಸರ್ಕಾರವನ್ನು ಕೇಳಬೇಕಾದ ಇಲ್ಲಿನ ಶಾಸಕರು ಸಿಲ್ಲಿ ವಿಚಾರವಾಗಿ ಚಂದ್ರಗಿರಿ ಗ್ರಾಮಪಂಚಾಯಿತಿ ಬಗ್ಗೆ ಪ್ರಸ್ತಾಪ…
ಮುಂದೆ ಓದಿ...