ಮನೆ ಜಾಗಕ್ಕೆ ಕಿತ್ತಾಟ : ನಿರ್ಮಾಣ ಮಾಡಿದ ಶೆಡ್ ಧ್ವಂಸ

ಚಿ.ನಾ.ಹಳ್ಳಿ:        ಮನೆಯ ಮುಂಭಾಗದ ಜಾಗವೊಂದರ ವಿಚಾರಕ್ಕೆ ನಿರ್ಮಾಣ ಮಾಡಿಕೊಂಡಿದ್ದ ತಗಡಿನ ಶೆಡ್ಡನ್ನು ರಾತ್ರೋರಾತ್ರಿ ಧ್ವಂಸ ಮಾಡಿರುವ ಘಟನೆ ತಾಲ್ಲೂಕಿನ ಲಕ್ಮೇನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ರತ್ನಮ್ಮ ಕೃಷ್ಣಯ್ಯ ಎಂಬುವವರಿಗೆ ಸೇರಿದ ಈ ಖಾಲಿ ಜಾಗದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಹಸುಗಳನ್ನು ಕಟ್ಟಿಕೊಂಡು ವಾಸಿಸಲಾಗಿತ್ತು, ಘಟನೆಗೆ ಸಂಬಂಧಿಸಿದಂತೆ ಕೃಷ್ಣಯ್ಯನ ಮನೆಯ ಮುಂದಿನ ಜಾಗವನ್ನು ರಸ್ತೆಗೆ ಬಿಡುವಂತೆ ಒತ್ತಾಯಿಸಲಾಗಿತ್ತು, ಗಂಗಾಧರ ಎಂಬುವವರ ಮಗ ಕುಮಾರಯ್ಯ ಹಾಗೂ ಹೆಂಡತಿ ಹೇಮಾವತಿ ಮಗ ಪುನೀತ್, ವಿಶ್ವನಾಥ್ ಎಂಬವರು ಕಳೆದ ರಾತ್ರಿ ಜಾಗದ ವಿಚಾರವಾಗಿ ಮನೆಯ ಮುಂಭಾಗ ಹಾಕಿದ್ದ ತಗಡಿನ ಶೆಡ್ಡನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.       ಈ ವೇಳೆ ಕೃಷ್ಣಯ್ಯನ ಮಗಳಾದ ಪುಷ್ಪವತಿ ಬಾಣಂತಿ ಸೇವೆಗಾಗಿ ಬಂದಿದ್ದಾರೆ, ಇವರನ್ನು ಕುಮಾರಯ್ಯ ಹಾಗೂ ಅವರ ಸಂಗಡಿಗರು ಸೇರಿ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಲ್ಲದೆ ಮನಬಂದಂತೆ ಬೈದು…

ಮುಂದೆ ಓದಿ...