ತುಮಕೂರು : ಜಿಲ್ಲೆಯ ಕೆರೆಗಳ ಗಡಿ ಗುರುತಿಸಿ ಸಂರಕ್ಷಿಸಲು ಡಿಸಿ ಸೂಚನೆ

ತುಮಕೂರು: ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳ ಗಡಿ ಗುರುತಿಸಿ ಒತ್ತುವರಿ ಕಂಡುಬಂದಲ್ಲಿ ತೆರವುಗೊಳಿಸಿ ಕೆರೆಗಳ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜರುಗಿದ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಮಟ್ಟದ ಕಾರ್ಯನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 2061 ಕೆರೆಗಳನ್ನು ಗುರುತಿಸಲಾಗಿದ್ದು, ಇದುವರೆಗೂ 404 ಕೆರೆಗಳ ಸರ್ವೆ ಕಾರ್ಯ ನಡೆದಿದೆ. ಅಳತೆಯಾಗಿರುವ 404 ಕೆರೆಗಳ ಪೈಕಿ 293 ಕೆರೆಗಳು ಒತ್ತುವರಿಯಾಗಿರುವುದು ಕಂಡುಬಂದಿದ್ದು, ಇವುಗಳಲ್ಲಿ 103 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಉಳಿದ 136 ಕೆರೆಗಳ ಒತ್ತುವರಿ ತೆರವುಗೊಳಿಸುವುದರ ಜೊತೆಗೆ ಬಾಕಿ ಉಳಿದಿರುವ 1657 ಕೆರೆಗಳ ಅಳತೆ ಕಾರ್ಯ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು. ಜಿಲ್ಲೆಯಲ್ಲಿ ಆರ್.ಡಿ.ಪಿ.ಆರ್ ಅಡಿ1522, ಸಣ್ಣ ನೀರಾವರಿ ಇಲಾಖೆಯಡಿ 366, ಕಾವೇರಿ ನಿಗಮದಡಿ 151, ಮಹಾನಗರ ಪಾಲಿಕೆಯಡಿ…

ಮುಂದೆ ಓದಿ...

ತುಮಕೂರು : ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ

ತುಮಕೂರು :       ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ತುಮಕೂರಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಐಟಿ ಮಿಲನ್, ಪರ್ಯಾವರಣ ಸಂರಕ್ಷಣ ಗತಿವಿಧಿ, ಹಾಗೂ ಬ್ಯೂಗಲ್ ಟ್ರಸ್ಟ್,  ಇವರ ಸಂಯುಕ್ತ ಆಶ್ರಯದಲ್ಲಿ  ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನ ಹಿಂಬಾಗ, ಶಿರಾ ಗೇಟ್ ನಲ್ಲಿ  ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   

ಮುಂದೆ ಓದಿ...

ತುಮಕೂರು : ಶೇ. 100ರಷ್ಟು ಕೋವಿಡ್ ಲಸಿಕೆ ಯಶಸ್ಸಿಗೆ ಡಿಸಿ ಸೂಚನೆ

 ತುಮಕೂರು  :       ರಾಜ್ಯಾದ್ಯಂತ ಕೈಗೊಂಡಿರುವ ಕೋವಿಡ್ ಲಸಿಕಾಭಿಯಾನದಡಿ ಜಿಲ್ಲೆಯಲ್ಲಿಯೂ ಶೇ.100ರಷ್ಟು ಯಶಸ್ವಿಯಾಗಲು ಎಲ್ಲರೂ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.       ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಅಧಿಕಾರಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಈ ಲಸಿಕಾಭಿಯಾನದಲ್ಲಿ ನಿಗಧಿತ ಗುರಿಗಿಂತ ಕಡಿಮೆ ಲಸಿಕಾಕರಣವಾಗಬಾರದು ಎಂದು ನಿರ್ದೇಶಿಸಿದರು.      ಲಭ್ಯವಿರುವ ಲಸಿಕೆಯನ್ನು ಬಳಸಿಕೊಂಡು ಸರ್ಕಾರದ ಮಾರ್ಗಸೂಚಿಯಂತೆ ಲಸಿಕಾಭಿಯಾನದಲ್ಲಿ ಶೇ.100ರಷ್ಟು ಸಾಧನೆ ಮಾಡಲು ಪಣ ತೊಡಬೇಕು. ಈಗಾಗಲೇ ಲಸಿಕಾಕರಣ ಕಾರ್ಯಕ್ಕೆ ನಿಯೋಜಿತಗೊಂಡ ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಅಭಿಯಾನ ಯಶಸ್ವಿಗೊಳಿಸಬೇಕು. ಸಮನ್ವಯ ಸಾಧಿಸಿಕೊಂಡು ಲಸಿಕಾಕರಣ ಕಾರ್ಯ ಮಾಡಬೇಕು ಎಂದು ತಿಳಿಸಿದರು.  

ಮುಂದೆ ಓದಿ...

ಅಂಗನವಾಡಿ ಫಲಾನುಭವಿ ತಾಯಂದಿರಿಗೆ ಕೋವಿಡ್ ಲಸಿಕೆ

ತುಮಕೂರು : ಕೊರಟಗೆರೆ ತಾಲೂಕಿನ ದಂಡಿನ ಶಿವರ ಹಾಗೂ ತಿಪಟೂರು ತಾಲೂಕಿನ ತಡಸೂರು ಗ್ರಾಮದ ಲಸಿಕಾ ಕೇಂದ್ರದಲ್ಲಿ ಅಂಗವಾಡಿ ಫಲಾನುಭವಿ ತಾಯಂದಿರಿಗೆ ಲಸಿಕೆ ನೀಡುತ್ತಿರುವುದು.       ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೋವಿಡ್- 19 ಲಸಿಕಾ ಅಭಿಯಾನದಡಿ ಸೋಮವಾರ(ಇಂದು) ಅಂಗನವಾಡಿ ಕೇಂದ್ರಗಳ ಫಲಾನುಭವಿ 0-6 ವರ್ಷದೊಳಗಿನ 162451 ಮಕ್ಕಳ ತಾಯಂದಿರಿಗೆ ಕೋವಿಡ್ ಲಸಿಕೆ ವ್ಯಾಕ್ಸಿನ್ ನೀಡಲಾಯಿತು. ಜಿಲ್ಲಾಧಿಕಾರಿಗಳ ಸೂಚನೆಯಂತೆ ಇಂದು ಜಿಲ್ಲೆಯ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಅಂಗನವಾಡಿ ಫಲಾನುಭವಿಗಳ ತಾಯಂದಿರಿಗೆ ಲಸಿಕೆ ನೀಡಲಾಯಿತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್ ನಟರಾಜ್ ತಿಳಿಸಿದ್ದಾರೆ.  

ಮುಂದೆ ಓದಿ...