ಕೊರಟಗೆರೆ ಕ್ಷೇತ್ರಕ್ಕೆ ಕೇರಳ ಭೂ ಮಾಫಿಯಾ ಲಗ್ಗೆ

 ಕೊರಟಗೆರೆ:       ತೋಟಗಾರಿಕೆ ಕ್ಷೇತ್ರ, ಅರಣ್ಯ ಪ್ರದೇಶ, ಸರಕಾರಿ ಗೋಮಾಳ ಮತ್ತು ಸರಕಾರಿ ಕೆರೆಕಟ್ಟೆ ರಾತ್ರೋರಾತ್ರಿ ನೆಲಸಮ. ಕೊರಟಗೆರೆ ಕ್ಷೇತ್ರದ ಗಡಿಭಾಗದ ಸರಕಾರಿ ಜಮೀನುಗಳಿಗೆ ಸರಕಾರದ ಭದ್ರತೆಯೇ ಮರೀಚಿಕೆ. ದಾಖಲೆಯೇ ಇಲ್ಲದ ರೈತರ ಜಮೀನು ಖರೀದಿಸಿ ಅಕ್ಕಪಕ್ಕದ ಸರಕಾರಿ ಜಮೀನು ಸಕ್ರಮ ಮಾಡಿಕೊಳ್ಳಲು ಮುಂದಾಗಿರುವ ಕೇರಳ ಭೂಗಳ್ಳರಿಗೆ ರಾಜ್ಯ ಸರಕಾರ ಮತ್ತು ಜಿಲ್ಲಾಧಿಕಾರಿ ಕಡಿವಾಣ ಹಾಕಿಬೇಕಿದೆ.       ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗಡಿಭಾಗವಾದ ಗಂಗೇನಹಳ್ಳಿ ಅರಣ್ಯ ಪ್ರದೇಶ ಮತ್ತು ದೊಡ್ಡಸಾಗ್ಗೆರೆ ತೋಟಗಾರಿಕೆ ಕ್ಷೇತ್ರದ ಅರ್ಧಭಾಗ ಈಗಾಗಲೇ ಭೂಗಳ್ಳರ ಪಾಲಾಗಿದೆ. ಕಂದಾಯ, ಸಾಮಾಜಿಕ ಅಥವಾ ವಲಯ ಅರಣ್ಯ ಅಧಿಕಾರಿಗಳ ತಂಡ ತೆರವಿಗೆ ಮುಂದಾದರೇ ರಾಜ್ಯಸರಕಾರ, ಸಚಿವ ಮತ್ತು ಸಂಸದರಿಂದ ದೂರವಾಣಿ ಕರೆ ಮಾಡಿಸಿ ವರ್ಗಾವಣೆ ಮಾಡಿಸುವ ಬೆದರಿಕೆಯ ಕೆಲಸ ಸರ್ವೆ ಸಾಮಾನ್ಯವಾಗಿದೆ.       ಕೊರಟಗೆರೆ ಕ್ಷೇತ್ರದ ದೊಡ್ಡಸಾಗ್ಗೆರೆ, ಗಂಗೇನಹಳ್ಳಿ,…

ಮುಂದೆ ಓದಿ...

ತುಮಕೂರು: ಸೋಂಕು ನಿಯಂತ್ರಣಕ್ಕೆ ಬಂದರೆ ಲಾಕ್‍ಡೌನ್ ತೆರವಿಗೆ ಚಿಂತನೆ

ತುಮಕೂರು:       ಮುಂದಿನ ಒಂದು ವಾರದಲ್ಲಿ ನಿರೀಕ್ಷೆಯಂತೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದರೆ ಲಾಕ್‍ಡೌನ್ ತೆರವುಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.       ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯ ಇನ್ನೂ ಕೆಲವು ಪ್ರದೇಶಗಳಲ್ಲಿ ಜಿಲ್ಲಾಡಳಿತದ ನಿರೀಕ್ಷೆಯಂತೆ ಕೊರೋನಾ ನಿಯಂತ್ರಣಕ್ಕೆ ಬಂದಿಲ್ಲ. ಈಗಲೂ ಇರುವ ಕೆಂಪು ವಲಯ ಮತ್ತು ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ತೆರವಿಗೆ ಕ್ರಮವಹಿಸಲಾಗುವುದು ಎಂದು ಹೇಳಿದರು.       ಕೊರೋನಾ ಸೋಂಕಿತರ ಸಂಖ್ಯೆಯ ಹೆಚ್ಚಳದಿಂದಾಗಿ ಶಿರಾ ತಾಲೂಕು ಸೇರಿದಂತೆ ಉಳಿದ ತಾಲೂಕುಗಳ ಭಾಗಗಳು ಕೆಂಪುವಲಯ ಹಾಗೂ ಹಾಟ್‍ಸ್ಪಾಟ್ ಪ್ರದೇಶಗಳನ್ನಾಗಿ ಗುರತಿಸಲಾಗಿದೆ. ಈ ಪ್ರದೇಶಗಳಲ್ಲಿ ಸೋಂಕನ್ನು ನಿಯಂತ್ರಣಕ್ಕೆ…

ಮುಂದೆ ಓದಿ...

4 ವರ್ಷದವರೆಗೂ ಭಾಷಾ ಬೋಧನೆಗೆ ಅವಕಾಶ ನೀಡಲು ಆಗ್ರಹ

ತುಮಕೂರು:      ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನುಸಾರ ಪದವಿ ಕೋರ್ಸ್‍ಗಳನ್ನು ನಾಲ್ಕು ವರ್ಷದ ಅವಧಿಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಭಾಷಾ ಬೋಧನೆಯನ್ನು ಕೂಡ ನಾಲ್ಕು ವರ್ಷಗಳವರೆಗೆ ಬೋಧಿಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ತುಮಕೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಒಕ್ಕೂಟ ಕುಲಪತಿ ಸಿದ್ದೇಗೌಡರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಿದೆ.       ನೂತನ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆಯೂ ಸೇರಿದಂತೆ ಇತರೆ ಎಲ್ಲಾ ಭಾಷಾ ಬೋಧನೆಯನ್ನು ಮೊದಲನೇ ವರ್ಷದ ಪದವಿಗೆ ಮಾತ್ರ ಅಳವಡಿಸಿದೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಕನ್ನಡ ಅಧ್ಯಯನ ಮಂಡಳಿ ಅಧ್ಯಕ್ಷ ಬಿ.ನಿತ್ಯಾನಂದ ಶೆಟ್ಟಿ, ಕೆಜಿಸಿಟಿಎ ತುಮಕೂರು ವಲಯ ಅಧ್ಯಕ್ಷ ಡಾ.ಒ.ನಾಗರಾಜು, ಒಕ್ಕೂಟದ ಅಧ್ಯಕ್ಷ ಡಾ.ಡಿ.ಶಿವನಂಜಯ್ಯ, ಕಾರ್ಯದರ್ಶಿ ಡಾ.ಎಂ.ಶಂಕರಲಿಂಗಯ್ಯ ಮತ್ತು ಖಜಾಂಚಿ ಡಾ. ಶಿವಲಿಂಗಮೂರ್ತಿ ಹೇಳಿದ್ದಾರೆ. ಜೊತೆಗೆ ಅನ್ಯಶಿಸ್ತುಗಳ ಅಧ್ಯಯನಕ್ಕೂ ಅವಕಾಶವಿತ್ತು. ಈಗ ಭಾಷಾ ವಿಷಯದ ಬೋಧನೆಯ ಅವಧಿಯನ್ನು…

ಮುಂದೆ ಓದಿ...

ಬೆಳೆ ನಷ್ಟ ಅಂದಾಜು ಮಾಡಲು ಸಮಿತಿ ರಚಿಸುವಂತೆ ಆಗ್ರಹ

ತುಮಕೂರು:       ಕೋರೋನ ಸಂಕಷ್ಟದಿಂದ ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲಾಗದೆ ಆಗಿರುವ ನಷ್ಟವನ್ನು ಅಂದಾಜು ಮಾಡಲು ಸರಕಾರ ಕೂಡಲೇ ಒಂದು ಸಮಿತಿ ರಚಿಸಬೇಕು, ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂಗಳ ಪರಿಹಾರ ವಿತರಿಸಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಕರ್ನಾಟಕ ರೈತ ಸಂಘದ ಮತ್ತು ಹಸಿರು ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.      ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಜಿಲ್ಲೆಯ ವಿವಿಧ ತಾಲೂಕುಗಳ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡರು, ಸರಕಾರ ರೈತ ವಿರೋಧಿ ನಡೆವಳಿಕೆಗಳ ವಿರುದ್ದ ಘೋಷಣೆ ಕೂಗಿದರು. ಈ ವೇಳೆ ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಎ.ಗೋವಿಂದರಾಜು, ಕೋರೋನ ಲಾಕ್‍ಡೌನ್ ರೈತರು ಸಾವಿರಾರು ಎಕರೆಯಲ್ಲಿ ಬೆಳೆದ ಹಣ್ಣು, ತರಕಾರಿ ಹಾಗೂ…

ಮುಂದೆ ಓದಿ...