ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ : ಗೋಡೆ ಕುಸಿತ

ಹುಳಿಯಾರು:       ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಮಳೆಯ ನೀರು ಸರಾಗವಾಗಿ ಹರಿಯದೆ ವಾಸದ ಮನೆ ಹಾಗೂ ಗೋಡನ್‍ಗೆ ನುಗ್ಗಿದ ಪರಿಣಾಮ ಗೋಡನ್ ಗೋಡೆ ಕುಸಿದು ಸಾವಿರಾರು ರೂ. ಮೌಲ್ಯದ ಈರುಳ್ಳಿ, ಬೆಳ್ಳುಳ್ಳಿ, ಮಾವಿನ ಕಾಯಿ ನೆನೆದು ಹಾನಿಯಾದ ಘಟನೆ ಹುಳಿಯಾರು ಪಟ್ಟಣದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.       ಮಂಗಳೂರು ವಿಶಾಖಪಟ್ಟಣ ರಾಷ್ಟ್ರೀಯ ಹೆದ್ದಾರಿ 234 ರ ಹುಳಿಯಾರು ಭಾಗದ ವಿಸ್ತರಣೆಯ ಕಾಮಗಾರಿ 3 ವರ್ಷಗಳಿಂದ ನಡೆಯುತ್ತಿದೆ. ಒಣಕಾಲುವೆ, ರಾಮಗೋಪಾಲ್ ಸರ್ಕಲ್, ಎಸ್‍ಎಲ್‍ಆರ್ ಬಂಕ್ ಬಳಿ ಕಾಮಗಾರಿ ಸ್ಥಗಿತವಾಗಿ ಏಳೆಂಟು ತಿಂಗಳುಗಳೇ ಕಳೆದಿದೆ. ಅಲ್ಲದೆ ಎಂಜಿನಿಯರ್ ಹಾಗೂ ಗುತ್ತಿಗೆದಾರರು ಕಾಲಕಾಲಕ್ಕೆ ಕಾಮಗಾರಿ ವೀಕ್ಷಣೆ ಮಾಡದೆ ನಿರ್ಲಕ್ಷ್ಯಿಸಿದರ ಪರಿಣಾಮ ಚರಂಡಿ ಮತ್ತು ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಪರಿಣಾಮ ಪಟ್ಟಣದ ಚರಂಡಿ ನೀರು ಸರಾಗವಾಗಿ ಹರಿಯದೆ ಪಟ್ಟಣದ ಮನೆಗಳಿಗೆ ನುಗ್ಗುತ್ತದೆ. ರಸ್ತೆಯಲ್ಲಿ ಮೊಳಕಾಲುದ್ದ…

ಮುಂದೆ ಓದಿ...

ಹುಳಿಯಾರು : 100 ಮಿಮೀ ದಾಖಲೆಯ ಮಳೆ

ಹುಳಿಯಾರು :       ಹುಳಿಯಾರು ಪಟ್ಟಣದಲ್ಲಿ ಬುಧವಾರ ರಾತ್ರಿ 100 ಮಿಮೀ ದಾಖಲೆಯ ಮಳೆಯಾಗಿದ್ದು ಸ್ಥಳೀಯರ ಹರ್ಷಕ್ಕೆ ಕಾರಣವಾಗಿದೆ. ಕಳೆದ ಹತ್ತನ್ನೆರಡು ವರ್ಷದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದ ನಿದರ್ಶನವಿಲ್ಲ. ಮೇ.25 ರಂದು ರೋಹಿಣಿ ಮಳೆ ಹುಟ್ಟಿದ್ದರೂ ಇಲ್ಲಿಯವರೆವಿಗೆ ಒಂದು ದಿನವೂ ಬೀಳದೆ ನಿರಾಸೆ ಮೂಡಿಸಿತ್ತು. ಕಳೆದ 2 ದಿನಗಳಲ್ಲಿ ತಾಲೂಕಿನ ಅಲ್ಲಲ್ಲಿ ಮಳೆ ಬಿದ್ದಿದ್ದರೂ ಹುಳಿಯಾರಿಗೆ ಮಳೆ ಆಗಿರಲಿಲ್ಲ. ಆದರೆ ಬುಧವಾರ ಸಂಜೆ ಸಾಧಾರಣವಾಗಿ ಆರಂಭವಾದ ಮಳೆ ರಾತ್ರಿ 11 ಗಂಟೆಯ ನಂತರ ಅಬ್ಬರಿಸಿತು. ಸತತ 3 ಗಂಟೆಗಳ ಕಾಲ ಜೋರಾಗಿ ಸುರಿದು ನಂತರ ನಿಧಾನವಾಗಿ ಬೆಳಗಿನ ಜಾವ 6 ಗಂಟೆಯವರೆವಿಗೂ ಉತ್ತಮ ಮಳೆಯಾಯಿತು.       ಹುಳಿಯಾರು ಪಟ್ಟಣವಲ್ಲದೆ ತಾಲೂಕಿನಾಧ್ಯಂತ ರೋಹಿಣಿ ಮಳೆ ಸುರಿದಿದೆ. ಮಳೆಯಿಂದಾಗಿ ತಗ್ಗಿನ ಪ್ರದೇಶಗಳಿಗೆ ನೀರು ನುಗ್ಗಿದೆ. ಕೃಷಿಹೊಂಡ, ಕಟ್ಟೆ ಹಾಗೂ ಕೆರೆಗಳಿಗೆ ನೀರು…

ಮುಂದೆ ಓದಿ...

ಕೊರೋನಾ : ಸಂಘ-ಸಂಸ್ಥೆಗಳ ಕೊಡುಗೆ ಶ್ಲಾಘನೀಯ -ಸಿದ್ದಲಿಂಗ ಶ್ರೀ

ತುಮಕೂರು:       ಮಾನವನಿಗೆ ಆತ್ಮವಿಶ್ವಾಸ ಅತ್ಯಮೂಲ್ಯವಾದದ್ದು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದೆ ಆದಲ್ಲಿ ಸೋಂಕಿತರು ಗುಣಮುಖರಾಗಲು ಸಹಕಾರಿಯಾಗುತ್ತದೆ. ಆದ್ದರಿಂದ ಸೋಂಕಿತರಿಗೆ ಅವಶ್ಯಕವಾದದ್ದು ಆತ್ಮಸ್ಥೈರ್ಯ ಹಾಗೂ ವಿಶ್ವಾಸ ಅತ್ಯಮೂಲ್ಯವಾದದ್ದು ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ತಿಳಿಸಿದರು.ತುಮಕೂರಿನ ರೇಣುಕಾ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಶ್ರೀಗಳು ರೋಗಿಗಳಿಗೆ ಕೋವಿಡ್ ಕೇರ್ ಸೆಂಟರ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದರು. ಇನ್ನು ಇಂತಹ ತುರ್ತು ಸಂದರ್ಭಗಳಲ್ಲಿ ಸಂಘ-ಸಂಸ್ಥೆಗಳು ಹಲವು ಆಯಾಮಗಳಲ್ಲಿ ಸಾರ್ವಜನಿಕರಿಗೆ ನೆರವು ನೀಡುತ್ತಿದ್ದು ಇದರಿಂದ ಸೋಂಕಿತರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದರು.ತುಮಕೂರಿನ ರೇಣುಕಾ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಕೋವಿಡ್ ಕೇರ್ ಸೆಂಟರ್ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು ಉತ್ತಮ ಆಹಾರ, ವಸತಿ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ನೀಡುವ ಮೂಲಕ ಕೋವಿಡ್ ಕೇರ್ ಸೆಂಟರ್ ಬಹಳಷ್ಟು ಸೊಂಕಿತರಿಗೆ ಸಹಕಾರಿಯಾಗಿದೆ.        ಇನ್ನು ಕೋರೋಣ ಸೋಂಕಿನ…

ಮುಂದೆ ಓದಿ...

ಚಲನಚಿತ್ರಗಳು ಪೈಪೋಟಿ ನೀಡಲು ಡಬ್ಬಿಂಗ್ ಅಗತ್ಯ

ತುಮಕೂರು:        ಪ್ರಾದೇಶಿಕ ಭಾಷೆಯ ಚಲನಚಿತ್ರಗಳು ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡಲು ಡಬ್ಬಿಂಗ್ ಅಗತ್ಯ. ಈ ತಂತ್ರಜ್ಞಾನ ಅಳವಡಿಕೆಯಿಂದ ಚಿತ್ರನಿರ್ಮಾಣ ವೆಚ್ಚ ಮತ್ತು ಕಲಾವಿದರ ಬಳಕೆ ಕಡಿಮೆಯಾದರೂ ಪ್ರಾದೇಶಿಕ ಭಾಷೆಗಳ ಗುಣಮಟ್ಟವನ್ನು ಅಂತರಾಷ್ಟ್ರೀ ಮಟ್ಟಕ್ಕೆ ಕೊಂಡೋಯ್ಯವ ಅವಕಾಶಗಳು ಹೆಚ್ಚಾಗುತ್ತವೆ ಎಂದು ಕನ್ನಡ ಮತ್ತು ಮರಾಠಿ ಚಲನಚಿತ್ರ ನಿರ್ದೇಶಕ ಸುಧೀರ್ ಅತ್ತಾವರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವತಿಯಿಂದ ಏರ್ಪಡಿಸಲಾಗಿರುವ ಒಂದು ವಾರದ ವಿಶೇಷ ಉಪನ್ಯಾಸ ಸರಣಿ ಮಾಲಿಕೆ ಇಂದಿನ ವೆಬಿನಾರ್‍ನಲ್ಲಿ “ಚಿತ್ರರಂಗದ ಇತಿಹಾಸ ಮತ್ತು ಅಭಿವೃದ್ಧಿ” ಕುರಿತು ಮುಂಬೈನಿಂದ ವಿಶೇಷ ಉಪನ್ಯಾಸ ನೀಡಿ, ಈ ಅಭಿಪ್ರಾಯ ವ್ಯಕ್ತಪಡಿಸಿದರು.         ಅದೇ ರೀತಿ ಕನ್ನಡ ಚಿತ್ರರಂಗಕ್ಕೆ ಗುಬ್ಬಿ ವೀರಣ್ಣನವರ ಕೊಡುಗೆಯೂ ಅಪಾರವಾದುದು ಎಂದು ಅವರು ಸಿನಿಮಾ ಇತಿಹಾಸದಲ್ಲಿ ತುಮಕೂರು ಜಿಲ್ಲೆಯ ಪಾತ್ರವನ್ನು ಮೆಲುಕು ಹಾಕಿದರು.…

ಮುಂದೆ ಓದಿ...

ತುಮಕೂರು : ಜಿಲ್ಲೆಯಲ್ಲಿ ರೆಡ್‍ಜೋನ್ ಸಂಖ್ಯೆ ಇಳಿಕೆ!!

ತುಮಕೂರು:      ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆಯಾಗಿದ್ದು, ಕಳೆದ ಒಂದು ವಾರದಲ್ಲಿ 50 ರೆಡ್ ಜೋನ್ ಸಂಖ್ಯೆ ಕಡಿಮೆಯಾಗಿದೆ. ಮೇ.25ರಂದು 76 ಇದ್ದ ರೆಡ್ ಜೋನ್‍ಗಳ ಸಂಖ್ಯೆ ಜೂನ್ 2ರಂದು 27ಕ್ಕೆ ಇಳಿದಿದೆ. ಅದರಂತೆಯೇ ಹಾಟ್ ಸ್ಪಾಟ್‍ಗಳ ಸಂಖ್ಯೆಯೂ ಸಹ 240 ರಿಂದ 123ಕ್ಕೆ ಇಳಿದಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಿಳಿಸಿದ್ದಾರೆ. ಅದೇ ರೀತಿ ಶೇ.48ರಷ್ಟಿದ್ದ ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಶೇ. 17ಕ್ಕೆ ಇಳಿದಿದ್ದು, 2500 ರಿಂದ 3000ದವರೆಗೆ ದೃಢವಾಗುತ್ತಿದ್ದ ಸೋಂಕಿನ ಪ್ರಕರಣಗಳ ಸಂಖ್ಯೆಯೂ 750-850ಕ್ಕೆ ಇಳಿದಿದೆ. ಪಾಸಿಟಿವಿಟಿ ಪ್ರಮಾಣ ಮತ್ತಷ್ಟು ಇಳಿಕೆಯಾಗಲಿದೆ.       ಗ್ರಾಮೀಣ ಭಾಗದಲ್ಲಿಯೂ ಸೋಂಕಿನ ಪ್ರಮಾಣ ತಗ್ಗಿದ್ದು, ಮೇ.25ರಂದು ಒಂದೂ ಪ್ರಕರಣವಿಲ್ಲದ 810 ಹಳ್ಳಿಗಳಿದ್ದವು. ಆದರೆ ಜೂ.2ಕ್ಕೆ 1242 ಹಳ್ಳಿಗಳಲ್ಲಿ ಸೋಂಕಿನ ಪ್ರಕರಣಗಳೇ ಇಲ್ಲ. ಒಂದೇ ಒಂದು ಸೋಂಕಿನ ಪ್ರಕರಣವಿರುವ 503 ಗ್ರಾಮಗಳಿವೆ. ಕೋವಿಡ್ ಪರೀಕ್ಷೆ…

ಮುಂದೆ ಓದಿ...

ವಿಶ್ವ ಪರಿಸರ ದಿನ: ರೈತರ ಜಮೀನಿನಲ್ಲಿ ಗಿಡ ನೆಡಲು ಸಿಇಓ ಸೂಚನೆ

ತುಮಕೂರು:       ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರೈತರ ಜಮೀನಿನಲ್ಲಿ ಸಸಿ ನೆಟ್ಟು ಗಿಡಕ್ಕೆ ನೀರು ಹಾಕುವ ಮೂಲಕ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೂಚನೆ ನೀಡಿದ್ದಾರೆ.        ಕೃಷಿ, ಅರಣ್ಯ ಮತ್ತು ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಸಸಿಗಳನ್ನು ನೆಡುವುದಕ್ಕೆ ಗುಂಡಿಗಳನ್ನು ಅಗೆದು ಸಿದ್ದಪಡಿಸಿಕೊಳ್ಳಲಾಗಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಕಾರಣ ಯಾವುದೇ ಸಭೆ, ಸಮಾರಂಭಗಳನ್ನು ಆಯೋಜಿಸದೆ, ಸಾರ್ವಜನಿಕರನ್ನು ಒಗ್ಗೂಡಿಸದೆ ಸರಳ ರೀತಿಯಲ್ಲಿ ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವ ಮೂಲಕ ವ್ಯವಸ್ಥಿತವಾಗಿ ವಿಶ್ವ ಪರಿಸರ ದಿನವನ್ನು ಆಚರಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ…

ಮುಂದೆ ಓದಿ...