ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಕೈಗೊಳ್ಳಿ; ಡಿಸಿ

  ತುಮಕೂರು :      ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿರುವುದರಿಂದ ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ, ಮೆದುಳುಜ್ವರ, ಆನೆಕಾಲು ರೋಗಗಳು ಹರಡದಂತೆ ನಿಯಂತ್ರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಲೇರಿಯಾ, ಡೆಂಗ್ಯು, ಚಿಕುನ್ ಗುನ್ಯಾ ರೋಗಗಳ ನಿಯಂತ್ರಣ ಕ್ರಮ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜೂಮ್ ಆ್ಯಪ್ ಮೂಲಕ ಏರ್ಪಡಿಸಲಾಗಿದ್ದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಕುರಿತು ಸಮುದಾಯಕ್ಕೆ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇತರೆ ಇಲಾಖೆಗಳು ಹೆಚ್ಚಿನ ಅರಿವು ಮೂಡಿಸಬೇಕು. ನಗರದಲ್ಲಿರುವ ಗುಂಡಿ ಮತ್ತು ಕೆಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿರುವ ಟೈರ್ ಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಯಿದ್ದು, ನೈರ್ಮಲ್ಯತೆ ಕಾಪಾಡುವಲ್ಲಿ ಹೆಚ್ಚು ಜಾಗೃತರಾಗಬೇಕು. ಪಾಲಿಕೆ…

ಮುಂದೆ ಓದಿ...

ಬೊರನಕಣವೆಗೆ ಜಲಾಶಯಕ್ಕೆ ನೀರು ತುಂಬಿಸಲು ಸ್ಥಳ ಪರಿಶೀಲನೆ

ಚಿಕ್ಕನಾಯಕನಹಳ್ಳಿ:      ತಾಲ್ಲೂಕಿನ ಬೊರನಕಣವೆಗೆ ಜಲಾಶಯಕ್ಕೆ ನೀರು ತುಂಬಿಸುವ ಸಾಧ್ಯತೆಗಾಗಿ ಸಚಿವ ಜೆ.ಸಿ. ಮಾಧುಸ್ವಾಮಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸರ್ವೆಗಾಗಿ ಗಂಟೇನಹಳ್ಳಿ ಬಳಿ ಸ್ಥಳ ಪರಿಶೀಲನೆ ನಡೆಸಿದರು.       ತಾಲ್ಲೂಕಿನ ಹೆಗ್ಗಳಿಕೆಯೊಂದಾದ ಬೋರನಕಣಿವೆ ಜಲಾಶಯ ಹೆಸರಿಗಷ್ಟೆ ಜಲಾಶಯವಾದರೂ ನೀರಿನ ಹರಿವಿನ ಕೊರತೆಯಿಂದಾಗಿ ಇದುವರೆಗೂ ಬೆರಳೆಣಿಕೆಯಷ್ಟು ಸಲ ತುಂಬಿದೆ. ಈ ಕೊರತೆ ನೀಗಿಸುವ ಉದ್ದೇಶದಿಂದ ಈ ಜಲಾಶಯಕ್ಕೆ 2.3 ಟಿಎಂಸಿ ನೀರಿನ ಅಗತ್ಯವಿದ್ದು, ಭದ್ರಾ ಮೇಲ್ದಂಡೆ ಹಾಗೂ ಹೇಮಾವತಿ ನಾಲೆಯಿಂದ 1.33 ಟಿಎಂಸಿ ಯಷ್ಟು ನೀರನ್ನು ನಿಗಧಿ ಮಾಡಿದ್ದು, ಉಳಿದ 1 ಟಿಂಎಂಸಿ ನೀರಿನ ಲಭ್ಯತೆಗಾಗಿ ಎತ್ತಿನಹೊಳೆ ಹಾಗೂ ಇನ್ನಿತರ ಜಲಮೂಲದಿಂದ ನೀರನ್ನು ಪಡೆಯುವ ಕುರಿತಾಗಿ ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿಯವರು ತಾಲ್ಲೂಕಿನ ಗಂಟೇನಹಳ್ಳಿ ಭಾಗದಲ್ಲಿ ಅಧಿಕಾರಿಗಳೊಂದಿಗೆ ಸ್ಥಳಪರಶೀಲನೆ ನಡೆಸಿದರು. ಗಂಟೇನಹಳ್ಳಿಯಿಂದ ಬೋರನಕಣಿವೆಯವರೆಗೆ 250 ಕ್ಯೂಸೆಕ್ಸ್ ನೀರು ಹರಿಯುವ 9 ಕಿಮೀಗಳ…

ಮುಂದೆ ಓದಿ...