ತುಮುಲ್ ವತಿಯಿಂದ ಸಬ್ಸಿಡಿ ದರದಲ್ಲಿ 70 ಟನ್ ಮೇವಿನ ಬೀಜ ವಿತರಣೆ

  ಮಧುಗಿರಿ :       ತುಮುಲ್ ವತಿಯಿಂದ ತಾಲೂಕಿನ ರೈತರಿಗೆ ಸಬ್ಸಿಡಿ ದರದಲ್ಲಿ ಮೇವಿನ ಬೀಜ ವಿತರಿಸಲಾಗುತ್ತಿದ್ದು, ಹಾಲು ಉತ್ಪಾದಕ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.        ಪಟ್ಟಣದ ತುಮುಲ್ ಉಪಕೇಂದ್ರದಲ್ಲಿ ಮಂಗಳವಾರ ಮೇವಿನ ಬೀಜ ವಿತರಿಸಿ ಮಾತನಾಡಿದ ಅವರು ಹಾಲು ಉತ್ಪಾದಕರಿಗೆ ಹಸಿರು ಮೇವು ಬೆಳೆದುಕೊಳ್ಳಲು ಉತ್ತೇಜನ ನೀಡಲು ಮತ್ತು ಗುಣಮಟ್ಟದ ಹಾಲು ಶೇಖರಣೆ ಮಾಡುವ ಉದ್ದೇಶದಿಂದ 153 ಸಂಘಗಳ 8900 ಹಾಲು ಉತ್ಪಾದಕ ಸದಸ್ಯರಿಗೆ 70 ಟನ್ ಮೇವಿನ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ತಾಲೂಕಿನ ಹಾಲು ಉತ್ಪಾದಕ ರೈತರಿಗೆ 56 ಸಾವಿರ ಕೆ.ಜಿ ಸೌಥ್ ಆಫ್ರಿಕಾ ಬಿತ್ತನೆ ಮೇವಿನ ವಿತರಿಸಲಾಗುತ್ತಿದ್ದು, ಇದಕ್ಕೆ ಕೆ.ಜಿ ಗೆ 35 ರೂಗಳು ಮೂಲ ಧರವಿದ್ದು, ಒಕ್ಕೂಟದ ವತಿಯಿಂದ…

ಮುಂದೆ ಓದಿ...

ಬದು ನಿರ್ಮಿಸಿಕೊಳ್ಳುವ ಮೂಲಕ ಮಳೆ ನೀರಿನ ಸಂರಕ್ಷಣೆಗೆ ಕರೆ

ತುಮಕೂರು :        ಜಿಲ್ಲೆಯ ರೈತರು ತಮ್ಮ ಜಮೀನುಗಳಲ್ಲಿ ಬದುಗಳನ್ನು ನಿರ್ಮಿಸಿಕೊಳ್ಳುವ ಮೂಲಕ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವಜೆ.ಸಿ. ಮಾಧುಸ್ವಾಮಿ ರೈತರಿಗೆ ಕರೆ ನೀಡಿದರು.       ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ದುಗಡೀ ಗ್ರಾಮ ಪಂಚಾಯಿತಿ ವ್ಯಾಪ್ತಿ ದುಗಡೀಹಳ್ಳಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕ್ಷೇತ್ರ ಬದು ಮಾಸಾಚರಣೆ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ದುಗಡೀಹಳ್ಳಿಯಲ್ಲಿ 50 ಹೆಕ್ಟೇರ್(125 ಎಕರೆ) ಭೂ ಪ್ರದೇಶದಲ್ಲಿ ಕ್ಷೇತ್ರ ಬದು ನಿರ್ಮಾಣ ಕಾರ್ಯ ಹಮ್ಮಿಕೊಳ್ಳಲಾಗಿದೆ. ಪ್ರತಿ ಎಕರೆಗೆ ಸುಮಾರು 18 ಬದುವಿನಂತೆ ಒಟ್ಟು 125 ಎಕರೆ ಭೂ ಪ್ರದೇಶದಲ್ಲಿ 2250 ಬದುಗಳನ್ನು ನಿರ್ಮಾಣ ಮಾಡಬಹುದು. ಇದರಿಂದ ಒಮ್ಮೆ ಉತ್ತಮ ಮಳೆಯಾದರೆ ಸುಮಾರು 1.35 ಲಕ್ಷ ಲೀಟರ್ ನೀರು ಸಂಗ್ರಹಣೆಯಾಗಲಿದ್ದು ರೈತರ…

ಮುಂದೆ ಓದಿ...

ಸಂಚಾರಿ ವಿಜಯ್ ದರ್ಶನಕ್ಕೆ ಕಿಕ್ಕಿರಿದ ಜನ

ಹುಳಿಯಾರು:      ರಸ್ತೆ ಅಪಘಾತದಲ್ಲಿ ಮೃತರಾದ ರಾಷ್ಟ್ರಪ್ರಶಸ್ತಿ ಪುರಸ್ಕøತ ಸಿನಿಮಾ ನಟ ಸಂಚಾರಿ ವಿಜಯ್ ಅವರ ಪಾರ್ಥಿವ ಶರೀರವು ಹುಟ್ಟೂರಿಗೆ ಹುಳಿಯಾರು ಮಾರ್ಗವಾಗಿ ತೆರಳಿತು. ಹುಳಿಯಾರಿನಲ್ಲಿ ವಿಜಯ್ ಅವರ ಪಾರ್ಥಿವ ಶರೀರ ವೀಕ್ಷಣೆಗೆ ಕಿಕ್ಕಿರಿದು ಜನ ಸೇರಿದ್ದರು.      ವಿಜಯ್ ಅವರು ಹುಟ್ಟೂರಾದ ಪಂಚನಹಳ್ಳಿಗೆ ಅಂತ್ಯಸಂಸ್ಕಾರಕ್ಕೆ ಪಾರ್ಥಿವ ಶರೀರವನ್ನು ಹುಳಿಯಾರು ಮಾರ್ಗದಲ್ಲಿ ತೆರಳುತ್ತದೆಂದು ತಿಳಿದ ಅಭಿಮಾನಿಗಳು ಇಲ್ಲಿನ ಪೊಲೀಸ್ ಸ್ಟೇಷನ್ ಸರ್ಕಲ್ ಬಳಿ ಮಧ್ಯಾಹ್ನ ಹನ್ನೆರಡು ಗಂಟೆಯಿಂದಲೇ ಅಂತಿಮ ದರ್ಶನ ಪಡೆಯಲು ಕಾದು ನಿಂತಿದ್ದರು.       ಶಿರಾ ಮಾರ್ಗವಾಗಿ ಬರುವಾಗ ಬೆಳ್ಳಾರ, ಹೊಯ್ಸಲಕಟ್ಟೆಯಲ್ಲೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದರಿಂದ ಹುಳಿಯಾರಿ ನಿಗಧಿ ಸಮಯಕ್ಕಿಂತ 1 ಗಂಟೆ ತಡವಾಗಿ ಆಗಮಿಸಿತ್ತು. ಹಾಗಾಗಿ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಸೇರಿದ್ದರು.      ಪೊಲೀಸರಿಗೆ ಜನಸಂದಣಿ ಕಂಟ್ರೋಲ್ ಮಾಡುವುದು ಸವಾಲಿನ ಕೆಲಸವಾಗಿತ್ತು. ಪದೇ ಪದೇ ದೂರದೂರ…

ಮುಂದೆ ಓದಿ...