ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಬಿ.ಸುರೇಶ್ಗೌಡ ಧನ ಸಹಾಯ


ತುಮಕೂರು :        ತಾಲ್ಲೂಕಿನ ಗೂಳೂರು ಹೋಬಳಿ, ಕೆ.ಪಾಲಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಮನೆಗಳಿಗೆ ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದ, ಮಾಜಿ ಶಾಸಕ ಹಾಗೂ ಬಿ.ಜೆ.ಪಿ. ಜಿಲ್ಲಾದ್ಯಕ್ಷ ಬಿ.ಸುರೇಶ್ ಗೌಡರು, ಕೋವಿಡ್‍ನಿಂದ ಆಕಾಲಿಕ ಮರಣ ಹೊಂದಿದ ಲೋಕೇಶ್(ಕೋಳಿ) ಕುಟುಂಬಕ್ಕೆ 25000 ರೂ ಮತ್ತು ಅವರ ತಮ್ಮನಾದ ಮೃತ ರಾಮಚಂದ್ರ ಕುಟುಂಬಕ್ಕೆ 25000 ರೂ, ದಲಿತ ಮುಖಂಡರಾದ ದಿ|| ನಾರಾಯಣ್ ಮತ್ತು ಸಾರಂಗಿರಾಜು ಕುಟುಂಬಕ್ಕೆ ತಲಾ 25000 ರೂ, ಕಿತ್ತಗಾನಹಳ್ಳಿ ಗ್ರಾಮದ ಮುನಿಸ್ವಾಮಯ್ಯ ರವರ ಕಾಲು ಶಸ್ತ್ರ ಚಿಕಿತ್ಸೆಗೆ ಹಾಗೂ ಪಾಶ್ರ್ವವಾಯು ಪೀಡಿತ ನರಸಿಂಹರಾಜು ರವರಿಗೆ ಧನ ಸಹಾಯ ಮಾಡಿ ಎಲ್ಲಾ ರಾಜಕರಣಿಗಳಿಗೂ ಅಗ್ರ ಮೇಲ್ಪಂಕ್ತಿ ಹಾಕಿ ಕೊಟ್ಟರು, ನಿಧನರಾದ ಕುಟುಂಬದ ಸದಸ್ಯನ ಸ್ಥಾನವನ್ನು ಯಾರು ತುಂಬಲಾರರು, ನೀವು ದೃತಿಗೆಡದೆ ದೈರ್ಯವಾಗಿರಿ ನಿಮ್ಮ ಕುಟುಂಬಗಳಿಗೆ ಹೆಗಲಾಗಿರುತ್ತೇನೆ…


ಮುಂದೆ ಓದಿ...

ದಲಿತ ಕವಿ, ಹಿರಿಯ ಸಾಹಿತಿ ಡಾ||ಸಿದ್ದಲಿಂಗಯ್ಯ ನಿಧನ


ಬೆಂಗಳೂರು :       ದಲಿತ ಕವಿ, ಹಿರಿಯ ಸಾಹಿತಿ ಡಾ|| ಸಿದ್ದಲಿಂಗಯ್ಯ ಅವರು ನಿಧನರಾಗಿದ್ದಾರೆ.       ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯ (67) ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.        ಕೊರೊನಾ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿದ್ದಲಿಂಗಯ್ಯ ಅವರು ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ 1954ರಲ್ಲಿ ಜನಿಸಿದರು.        ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.        ಇಂದು ಸಂಜೆ 4.45ರ ಸುಮಾರಿಗೆ ಸಿದ್ದಲಿಂಗಯ್ಯ ಅವರು ನಿಧನರಾಗಿದ್ದು, ಇಂದೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿದ್ದಲಿಂಗಯ್ಯ ಅವರು ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದರು. ಎರಡು ಬಾರಿ…


ಮುಂದೆ ಓದಿ...

ಇಂಧನ ಬೆಲೆ ಹೆಚ್ಚಳ ಖಂಡಿಸಿ ಕಾಂಗ್ರೆಸ್’ನಿಂದ ಪ್ರತಿಭಟನೆ


ತುಮಕೂರು :       ಕೇಂದ್ರ ಸರಕಾರ ಇಂಧನ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಕರೆ ನೀಡಿದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ವಿವಿಧ ಮಂಚೂಣಿ ಘಟಕಗಳ ಮುಖಂಡರುಗಳು ಪೆಟ್ರೊಲ್ ಬಂಕ್ ಎದುರು ಪ್ರತಿಭಟನೆ ನಡೆಸಿದರು.       ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನಾನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್, ಭಾರತದ ಜನರಿಗೆ ಅಚ್ಚೆ ದಿನದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಕಾರ್ಪೋರೇಟ್ ಪರ ನೀತಿಗಳಿಂದಾಗಿ ಜನಸಾಮಾನ್ಯರು ಬೆಲೆ ಹೆಚ್ಚಳದಿಂದ ಪರದಾಡುವಂತಾಗಿದೆ. 2014ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗಿದ್ದರೂ, ಜನಸಾಮಾನ್ಯರ ಮೇಲೆ ಅತಿ ಕಡಿಮೆ ತೆರಿಗೆ ವಿಧಿಸುವ ಮೂಲಕ ಜನಸಾಮಾರಿಗೆ ಕೈಗೆಟುವ ದರದಲ್ಲಿ…


ಮುಂದೆ ಓದಿ...