ತುರ್ತು ಪರಿಸ್ಥಿತಿ ನೆನಪಿನಲ್ಲಿ ಬಿಜೆಪಿಯಿಂದ ಕರಾಳ ದಿನ ಆಚರಣೆ

ತುಮಕೂರು :        ದೇಶದ ಜನರ ಮೇಲೆ 1975ರ ಜೂನ್ 25 ರಂದು ತುರ್ತು ಪರಿಸ್ಥಿತಿ ಹೇರಿದ ಶ್ರೀಮತಿ ಇಂದಿರಾಗಾಂಧಿ ಅವರ ಪ್ರಜಾಪ್ರಭುತ್ವ ನೀತಿಯನ್ನು ವಿರೋಧಿಸಿ 2021ರ ಜೂನ್ 25 ರಂದು ಬಿಜೆಪಿ ರಾಷ್ಟ್ರದಾದ್ಯಂತ ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶಗೌಡ ತಿಳಿಸಿದ್ದಾರೆ.       ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನ್ಯಾಯಾಲಯದಿಂದ ತಮ್ಮ ವಿರುದ್ದ ತೀರ್ಪು ಬಂತು ಎಂಬ ಕಾರಣವನ್ನು ಮುಂದಿಟ್ಟುಕೊಂಡು ಪ್ರಜಾಪ್ರಭುತ್ವದಲ್ಲಿ ಪ್ರಧಾನಮಂತ್ರಿಯೇ ಸುಪ್ರಿಂ ಎಂಬ ಆಹಂ ನಿಂದ 1975ರ ಜೂನ್ 25 ರಂದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ಅಭಿವ್ಯಕ್ತಿ ಸ್ವಾತಂತ್ರದ ಜೊತೆಗೆ, ಎಲ್ಲ ರೀತಿಯ ಸ್ವಾತಂತ್ರಕ್ಕೂ ಧಕ್ಕೆ ತರುವ ಕೆಲಸವನ್ನು ಅಂದು ಕಾಂಗ್ರೆಸ್ ಮಾಡಿತ್ತು.       ಇದರ ವಿರುದ್ದ ಜನಸಂಘ ಸೇರಿದಂತೆ ಅನೇಕ ದೇಶ ಪ್ರೇಮಿ ಸಂಘಟನೆಗಳ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿ,…

ಮುಂದೆ ಓದಿ...

ತುಮಕೂರು : ಯುಜಿಡಿ ಸಮಸ್ಯೆ ಬಗೆಹರಿಸಲು ಪಾಲಿಕೆ ಅಧಿಕಾರಿಗಳು ವಿಫಲ

ತುಮಕೂರು :       ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 22ರ ಅಕ್ಕ ತಂಗಿ ಪಾರ್ಕ್ ಬಳಿ ಇರುವ ಹೊಸಳ್ಳಯ ತೋಟ ಪ್ರದೇಶದಲ್ಲಿ ಹಲವು ದಿನಗಳಿಂದ ಯುಜಿಡಿ ಸಮಸ್ಯೆ ಉಂಟಾಗಿದ್ದು ಬಂಡೆಪಾಳ್ಯ ಸೇರಿದಂತೆ ಆಭಾಗದ ಯುಜಿಡಿ ನೀರು ಹರಿದು ಅಕ್ಕ ತಂಗಿ ಕೆರೆ ಪಕ್ಕದ ನಿವಾಸಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.       ಆದ್ದರಿಂದ ಕೂಡಲೇ ಈ ಸಮಸ್ಯೆ ಬಗೆಹರಿಸುವ ಹರಿಸುವಂತೆ ಸಮಾಜಸೇವಕ ನರಸಿಂಹಮೂರ್ತಿ ತಿಳಿಸಿದ್ದಾರೆ. ಹಲವು ತಿಂಗಳಿಂದ ಯುಜಿಡಿ ನೀರು ಈ ಭಾಗದಲ್ಲಿ ಶೇಖರಣೆಗೊಳ್ಳುವ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಸೇರಿದಂತೆ ಹಲವು ತೊಂದರೆ ಉಂಟಾಗುತ್ತಿದೆ.        ಇದೇ ಸಂದರ್ಭದಲ್ಲಿ ರಾತ್ರಿ ವೇಳೆ ಸೊಳ್ಳೆಗಳು ಹೆಚ್ಚಾಗಿದ್ದು ಹಲವು ರೋಗಗಳು ಹರಡುವ ಸಾಧ್ಯತೆ ಇದೆ ಆದ್ದರಿಂದ ಕೂಡಲೇ ಯುಜಿಡಿ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮುಂದೆ ಓದಿ...