ಕೋವಿಡ್ ತಪಾಸಣೆಗೆ ಬಾರದ ಜನ

ಹುಳಿಯಾರು:       ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಜನರು ಮುಂದೆ ಬರುತ್ತಿಲ್ಲ.       ಗ್ರಾಪಂ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷ ಕೆ.ಸಿ.ವಿಕಾಸ್ ಹಾಗೂ ಪಿಡಿಓ ಬಲರಾಮಯ್ಯ ಆರೋಗ್ಯ ಇಲಾಖೆಯ ಮೇಲೆ ಒತ್ತಡ ತಂದು ಹಳ್ಳಿಹಳ್ಳಿಯಲ್ಲಿ ಕೊರೋನಾ ಪರೀಕ್ಷೆ ಮಾಡಿಸಲು ಮುಂದಾಗಿದ್ದಾರೆ.       ಪ್ರಾರಂಭದಲ್ಲಿ 2500 ಜನಸಂಖ್ಯೆಯುಳ್ಳ ಕೆಂಕೆರೆಯಲ್ಲಿ 2 ಸಲ ಕೊವಿಡ್ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ಮೊದಲ ದಿನ 41 ಎರಡನೇ ದಿನ 52 ಮಂದಿ ಮಾತ್ರ ತಪಾಸಣೆ ಮಾಡಿಸಿಕೊಂಡಿದ್ದಾರೆ. 616 ಜನಸಂಖ್ಯೆಯುಳ್ಳ ಕೆ.ಸಿ.ಪಾಳ್ಯದಲ್ಲಿ 28 ಮಂದಿ ಹಾಗೂ 389 ಜನಸಂಖ್ಯೆಯುಳ್ಳ ಗೊಲ್ಲರಹಟ್ಟಿಯಲ್ಲಿ 58 ಮಂದಿ ಮಾತ್ರ ತಪಾಸಣೆ ಮಾಡಿಸಿಕೊಂಡಿದ್ದಾರೆ. ಸಾಕಷ್ಟು ತಿಳಿ ಹೇಳಿದರೂ ಜನ ಬರುತ್ತಿಲ್ಲ. ಕೋವಿಡ್ ಪರೀಕ್ಷೆಯ ದಿನ ಮನೆಗೆ ಬೀಗ ಹಾಕಿ ಹೊಲತೋಟಕ್ಕೆ…

ಮುಂದೆ ಓದಿ...

ತುಮಕೂರು : ಬುಗುಡನಹಳ್ಳಿ ಕೆರೆಗೆ ಹರಿದ ಹೇಮಾವತಿ ನೀರು

ತುಮಕೂರು:      ನಗರದ ಕುಡಿಯುವ ನೀರಿನ ಜಲ ಸಂಗ್ರಹಾರ ಬುಗಡನಹಳ್ಳಿ ಕೆರೆಗೆ ತಡ ರಾತ್ರಿ ಸುಮಾರು 12 ಗಂಟೆಗೆ ಗೋರೂರು ಜಲಶಾಯದಿಂದ ಹೇಮಾವತಿ ನೀರು ತಲುಪಿದೆ. 2000 ಕ್ಯೂಸೆಕ್ಸ್ ಗೋರೂರು ಜಲಶಾಯದಿಂದ ನೀರು ಹರಿದು ಬಾಗೂರು ನವಿಲೆ ಗೇಟ್ ನಿಂದ 1100 ಕ್ಯೂಸೆಕ್ಸ್ ಹೊರ ಹರಿವು ಇದ್ದು ಬುಗುಡನಹಳ್ಳಿ ಕೆರೆಯ ಕಾಲುವೆಗೆ ಸರಾಸರಿ 400 ರಿಂದ 500 ಕ್ಯೂಸೆಕ್ಸ್ ನಷ್ಟು ನೀರಿನ ಹರಿವು ಪ್ರಮಾಣದಲ್ಲಿ ಬುಗುಡನಹಳ್ಳಿ ಕೆರೆಗೆ ನೀರು ತಲುಪಿದೆ.       ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಈ ನೀರನ್ನು ಬಳಸಿಕೊಳ್ಳಬಹುದಾಗಿದೆ. ಇನ್ನೇನು ಬುಗುಡನಹಳ್ಳಿಯ ಕೆರೆ ಬರಿದಾಗುವ ಕಾಲ ಸನ್ನಿಹಿತ ಸಮಯದಲ್ಲಿ ಹೇಮಾವತಿ ನೀರನ್ನು ಬಿಟ್ಟಿರುವುದು ತುಮಕೂರು ನಗರದ ನಾಗರೀಕರು ನಿಟ್ಟುಸಿರು ಬಿಡುವಂತಾಗಿದೆ. ಇಲ್ಲವಾದಲ್ಲಿ ಬೊರೆವೆಲ್ ಆಶ್ರಯಿಸಿ, ವಾಟರ್ ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ ನೀರು ನೀಡುವಂತಹ ಪರಿಸ್ಥಿತಿ ತುಮಕೂರು ಮಹಾನಗರ ಪಾಲಿಕೆಯದಾಗುತ್ತಿತ್ತು. ಶಾಸಕರ…

ಮುಂದೆ ಓದಿ...