ಯಾವುದೇ ರೈತನೂ ಬೆಳೆ ವಿಮೆಯಿಂದ ವಂಚಿತವಾಗಬಾರದು: ಸಿಇಒ

ತುಮಕೂರು  :       ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ)ಯೋಜನೆ ಬಗ್ಗೆ ರೈತರಿಗೆ ವಿಮಾ ಕಂಪನಿಗಳು ಹಾಗೂ ಇಲಾಖೆಗಳು ಜಾಗೃತಿ ಮೂಡಿಸಬೇಕಲ್ಲದೆ ಅರ್ಹನಿರುವ ಯಾವುದೇ ರೈತನೂ ವಿಮಾ ಯೋಜನೆಯಿಂದ ವಂಚಿತವಾಗದಂತೆ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಸೂಚಿಸಿದರು.       ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ)ಯೋಜನೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ರೈತರಿಗಾಗುವ ಅನುಕೂಲದ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು. ರೈತರಿಗೆ ಸಮಸ್ಯೆ ಉಂಟಾಗದಂತೆ ವಿಮಾ ಮೊತ್ತ ಪಾವತಿಗೆ ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶಿಸಿದರು.       ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ…

ಮುಂದೆ ಓದಿ...

ರಸ್ತೆಯಲ್ಲಿ ಸಂಚರಿಸುವವರಿಗೆ ಕೊರೋನಾ ಪರೀಕ್ಷೆ

ಹುಳಿಯಾರು:       ಕೊರೋನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಸರ್ಕಾರ ಕೊರೋನಾ ನಿರ್ಬಂಧ ಸಡಿಸಿಲಿದೆ. ಪರಿಣಾಮ ಹುಳಿಯಾರು ಪಟ್ಟಣಕ್ಕೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಪಟ್ಟಣ ಪಂಚಾಯ್ತಿ ಮತ್ತು ಆರೋಗ್ಯ ಇಲಾಖೆ ರಸ್ತೆಯಲ್ಲಿ ಸಂಚರಿಸುವವರಿಗೆ ಕೊರೋನಾ ಪರೀಕ್ಷೆ ಮಾಡುವ ಮೂಲಕ ಮುನ್ನೆಚ್ಚರಿಕೆ ಕ್ರಮ ವಹಿಸಿದೆ. ಹುಳಿಯಾರಿನ ಪೊಲೀಸ್ ಸ್ಟೇಷನ್ ಸರ್ಕಲ್‍ಗೆ ನಾಲ್ಕು ದಿಕ್ಕಿನ ರಸ್ತೆ ಸೇರುತ್ತದೆ. ಅಲ್ಲದೆ ಹಳ್ಳಿಗಳಿಂದ ಪಟ್ಟಣಕ್ಕೆ ಬರುವವರು ಈ ಸರ್ಕಲ್ ಮೂಲಕ ಓಡಾಡಲೇ ಬೇಕಿದೆ. ಹಾಗಾಗಿ ಸರ್ಕಲ್‍ನಲ್ಲಿ ಬಳಿ ಜನರ ಕೊರೋನಾ ಪರೀಕ್ಷೆಗೆ ಮುಂದಾಗಿದ್ದರು. ಅತ್ತ ಪಪಂ ಸಿಬ್ಬಂದಿ ಬೈಕ್‍ನಲ್ಲಿ ತೆರಳುವವರನ್ನು ನಿಲ್ಲಿಸಿ ಕೊರೋನಾ ಪರೀಕ್ಷೆ ಮಾಡಿಸುವಂತೆ ಸೂಚಿಸುತ್ತಿದ್ದರು. ಇತ್ತ ಆರೋಗ್ಯ ಸಿಬ್ಬಂದಿ ಆರ್‍ಟಿಪಿಸಿಆರ್ ಪರೀಕ್ಷೆ ಮಾಡುತ್ತಿದ್ದರು.       ಕೊರೋನಾ ಪರೀಕ್ಷೆ ಮಾಡಿಸುವಂತೆ ತಿಳಿಸಿದಾಗ ಕೆಲವರು ಈಗಾಗಲೇ ಮಾಡಿಸಿದ್ದು ನೆಗೆಟಿವ್ ಬಂದಿದೆ ಎಂದು ಮೊಬೈಲ್ ಮೆಸೇಜ್ ತೋರಿಸಿ…

ಮುಂದೆ ಓದಿ...

ಸೆಮಿ ಲಾಕ್‍ಡೌನ್ : ಜನರ ಓಡಾಟದಿಂದ ಹೆಚ್ಚಿದ ಆತಂಕ

ತುಮಕೂರು:       ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಮಾಣ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸೆಮಿ ಲಾಕ್‍ಡೌನ್ ಜಾರಿಗೊಳಿಸಿರುವುದರಿಂದ ಕಲ್ಪತರುನಾಡು ತುಮಕೂರಿನಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆಯಾದರೂ ರಸ್ತೆಗಿಳಿದಿರುವ ವಾಹನಗಳ ಸಂಚಾರ ಭರಾಟೆ, ಜನರ ಓಡಾಟ ಮತ್ತಷ್ಟು ಆತಂಕ ಸೃಷ್ಠಿಸಿದೆ.       ಸರ್ಕಾರ, ಜಿಲ್ಲಾಡಳಿತಗಳು ಏನೇ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಜಾರಿ ಮಾಡಿದರೂ ಅದಕ್ಕೆ ಕ್ಯಾರೆ ಎನ್ನದೆ ಜನರು ಮಾತ್ರ ತಮಗಿಷ್ಟ ಬಂದಂತೆ ಅಡ್ಡಾಡುತ್ತಿರುವುದು ನಿಯಂತ್ರಣಕ್ಕೆ ಬರುತ್ತಿರುವ ಕೊರೋನಾ ಸೋಂಕು ಮತ್ತೆ ಹಬ್ಬುವ ಲಕ್ಷಣಗಳು ಗೋಚರಿಸುತ್ತಿವೆ.       ಬೆಳಿಗ್ಗೆಯಿಂದಲೇ ಆಟೋ ರಿಕ್ಷಾಗಳು, ಕಾರುಗಳು, ದ್ವಿಚಕ್ರ ವಾಹನಗಳು ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದು, ಯಾರ ಭಯವೂ ಇಲ್ಲದೆ ಸಂಚರಿಸುತ್ತಿರುವುದು ಕಂಡು ಬರುತ್ತಿದೆ. ಇನ್ನು ಆಟೋ ರಿಕ್ಷಾಗಳಿಗೆ ಇಬ್ಬರು ಪ್ರಯಾಣಿಕರನ್ನು ಮಾತ್ರ ಕೂರಿಸಿಕೊಳ್ಳುವಂತೆ ಆದೇಶ ಮಾಡಿದ್ದರೂ ಕೆಲ ಆಟೋಗಳವರು ಮೂರು, ನಾಲ್ವರನ್ನು ಕೂರಿಸಿಕೊಂಡಿದ್ದರೆ, ಮತ್ತೆ ಕೆಲವರು…

ಮುಂದೆ ಓದಿ...