ತುಮಕೂರು : ಪ್ರಾಣಿ ಮತ್ತು ಸಂಚಾರಕರಿಗೆ ಊಟದ ವ್ಯವಸ್ಥೆ

ತುಮಕೂರು:      ಅತಿಥಿ ಗೃಹ ಬಿಟ್ಟುಕೊಡುವ ಬಗ್ಗೆ ಜಮೀರ್ ಅಹಮದ್ ಅವರು ಕುಮಾರಸ್ವಾಮಿ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳಬೇಕು, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ಅಂತವರ ಬಗ್ಗೆ ಸರಿಯಾಗಿ ಮಾತನಾಡಲಿ ಎಂದರು.       ಹದಿನೈದು ವರ್ಷದಿಂದ ಮೇಖ್ರಿ ಸರ್ಕ¯ನ ಅತಿಥಿಗೃಹವನ್ನು ಕುಮಾರಸ್ವಾಮಿ ಅವರೇ ಬಳಸುತ್ತಿದ್ದರು. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಕಳೆದ ಏಳೆಂಟು ವರ್ಷಗಳಿಂದ ಕುಮಾರ ಸ್ವಾಮಿ ಅಲ್ಲಿಗೆ ಹೋಗಿಲ್ಲ, ನನ್ನ ಕೆಲಸ ಮಾಡುವ ಕೆಲ ಹುಡುಗರು ಅಲ್ಲಿದ್ದರು, ಜೊತೆಗೆ ನನ್ನ ಶೂಟಿಂಗ್ ಉಪಕರಣಗಳು ಇದ್ದವು ಎಂದರು.       ಕಳೆದ ಎರಡು ಮೂರು ದಿನದ ಹಿಂದೆ ಮನೆ ಖಾಲಿ ಮಾಡುವಂತೆ ತಿಳಿಸಿದ್ದರು ಆzರೆ ಹುಡುಗರೆಲ್ಲ ಕೊರೋನಾ ಕಾರಣದಿಂದ ಮನೆಗೆ ಹೋಗಿದ್ದರಿಂದ ಖಾಲಿ ಮಾಡಲು ಆಗಿರಲಿಲ್ಲ, ಅವರೇ ಹೋಗಿ ಮನೆ ಕಿ ಹೊಡೆದದಿದ್ದಾರೆ, ಅದನ್ನು ನಮ್ಮ ಹುಡುಗರು ಪ್ರಶ್ನಿಸಿದ್ದಕ್ಕೆ ವಾಗ್ವಾದವಾಗಿದೆ ಅಷ್ಟೇ ಹಲ್ಲೆ…

ಮುಂದೆ ಓದಿ...

ರಸ್ತೆ, ಚರಂಡಿ ಅವ್ಯವಸ್ಥೆ : ವ್ಯಾಪರ ವಹಿವಾಟು ಅಸ್ತವ್ಯಸ್ತ

ತುಮಕೂರು:       ನಗರದ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಲು ಜೆಸಿಬಿಯಿಂದ ಆವರಣದ ರಸ್ತೆಗಳನ್ನು ಅಗೆದ ಕಾರಣ, ವ್ಯಾಪಾರ ವಹಿವಾಟಿಗೆ ಅಡಚಣೆಯಾಗಿ ಗುರುವಾರ ವ್ಯವಹಾರ ಚಟುವಟಿಕೆಗಳು ಅಸ್ತವ್ಯಸ್ತವಾದವು.       ಕಾಮಗಾರಿ ಆರಂಭಿಸುವ ಬಗ್ಗೆ ಇಲ್ಲಿನ ವರ್ತಕರಿಗೆ ಮಾಹಿತಿ ನೀಡದೆ, ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ಕಾಮಗಾರಿಗೆ ಮುಂದಾಗಿರುವ ಬಗ್ಗೆ ವರ್ತಕರು ಎಪಿಎಂಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಳೆಗಾಲದಲ್ಲಿ ಮಳೆ ನೀರು ಮಾರುಕಟ್ಟೆ ಒಳಗೆ ನುಗ್ಗಿ ಅವಾಂತರವಾಗುತ್ತಿತ್ತು. ಇಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ, ಎಪಿಎಂಸಿಯಿಂದ ಸುವ್ಯವಸ್ಥಿತ ಚರಂಡಿ ನಿರ್ಮಿಸಿ, ಆವರಣದಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.       ಮಾರುಕಟ್ಟೆ ಅಭಿವೃದ್ಧಿಗೆ ನಾವು ವಿರೋಧ ಮಾಡುವುದಿಲ್ಲ, ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಆಗಬೇಕು ಎಂಬ ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ಆದರೆ, ಕಾಮಗಾರಿ ಆರಂಭಿಸುವ…

ಮುಂದೆ ಓದಿ...

ಡಿ.ಸಿ.ಗೌರಿಶಂಕರ್ ಎಲ್ಲಾ ಜನಪ್ರತಿನಿಧಿಗಳಿಗೂ ಮಾದರಿ : ನಿಖಿಲ್

ತುಮಕೂರು:       ಗ್ರಾಮಾಂತರ ಜನರ ಕಷ್ಟದಲ್ಲಿ ಜೊತೆಯಾಗಿರುವ ಶಾಸಕ ಡಿ.ಸಿ.ಗೌರಿಶಂಕರ್ ಅವರಂತೆ ಉಳಿದ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.       ಗ್ರಾಮಾಂತರ ಕ್ಷೇತ್ರದ ಬಳ್ಳಗೆರೆಯಲ್ಲಿ ಬಡವರಿಗೆ ಹಾಗೂ ಕೊರೋನಾ ವಾರಿಯರ್ಸ್‍ಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಕ್ಷೇತ್ರದ ಜನರ ನೆರವಿಗೆ ನಿಲ್ಲಬೇಕಿರುವುದು ಜನಪ್ರತಿನಿಧಿಗಳ ಕೆಲಸ, ಕೊರೋನಾ ಸಂಕಷ್ಟದ ಸಮಯದಲ್ಲಿ ಜನರಿಗೆ ಅವಶ್ಯಕವಿರುವ, ಪಡಿತರ, ಔಷಧವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಿರುವ ಗೌರಿಶಂಕರ್ ಅವರ ಕಾರ್ಯ ಮಾದರಿಯಾದದ್ದು ಎಂದರು.       ಸರ್ಕಾರ ಕೋವಿಡ್ ಕೇರ್‍ಗಳನ್ನು ಮಾತ್ರ ಮಾಡುತ್ತದೆ, ಅದೆಷ್ಟೋ ಕೋವಿಡ್ ಕೇಂದ್ರಗಳು ನಿರ್ವಹಣೆ ಕೊರತೆಯನ್ನು ಎದುರಿಸುತ್ತಿವೆ, ಗೌರಿಶಂಕರ್ ಅವರು ಕೋವಿಡ್ ಕೇಂದ್ರವನ್ನು ಸ್ವಂತ ಹಣದಲ್ಲಿ ಆಕ್ಸಿಜನ್ ಸಹಿತ ಕೇಂದ್ರವನ್ನಾಗಿ ಮಾರ್ಪಡಿಸಿರುವುದಲ್ಲದೇ, ಉತ್ತಮವಾಗಿ ನಿರ್ವಹಣೆ ಮಾಡುವ ಮೂಲಕ ಕ್ಷೇತ್ರದ ಜನರಿಗೆ…

ಮುಂದೆ ಓದಿ...