ಚಿಕ್ಕನಾಯಕನಹಳ್ಳಿ : ಆಮ್ಲಜನಕ ಘಟಕಕ್ಕೆ ಜೆಸಿಎಂ ಚಾಲನೆ

ಚಿಕ್ಕನಾಯಕನಹಳ್ಳಿ :       ಕೊರೋನಾ ಸಮಯದಲ್ಲಿ ಉಂಟಾದ ಆಮ್ಲಜನಕ ಕೊರತೆಯನ್ನು ನೀಗಿಸಲು ಜಿಲ್ಲೆಯಲ್ಲಿ ಆಮ್ಲಜನಕ ಘಟಕ ನಿರ್ಮಾಣ ಮಾಡುತ್ತಿದ್ದು ಚಿಕ್ಕನಾಯಕನಹಳ್ಳಿ, ಶಿರಾ, ತಿಪಟೂರಿನಲ್ಲಿ ಆಮ್ಲಜನಕ ಘಟಕ ಆರಂಭಿಸುತ್ತಾ ಕೊರೋನಾ 3ನೇ ಅಲೆಗೆ ಜಿಲ್ಲೆಯಲ್ಲಿ ಮುಂಜಾಗೃತವಾಗಿ ಸಜ್ಜಾಗುತ್ತಿದ್ದೇವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕದ ಆರಂಭದ ವೇಳೆ ಮಾತನಾಡಿದ ಸಚಿವರು, ಚಿಕ್ಕನಾಯಕನಹಳ್ಳಿ ಘಟಕ 500ಲೀ, ತಿಪಟೂರಿನಲ್ಲಿ 400ಲೀ ಹಾಗೂ ಶಿರಾದಲ್ಲಿ 400 ಲೀಟರ್ ಆಮ್ಲಜನಕ ಘಟಕವನ್ನು ಮಾಡುತ್ತಿದ್ದೇವೆ, ತುಮಕೂರು ಜಿಲ್ಲಾ ಆಸ್ಪತ್ರೆಗೆ 1 ಸಾವಿರ ಲೀಟರ್ ನೀಡಲಾಗಿದೆ, ಖಾಸಗಿಯವರ ನೆರವಿನೊಂದಿಗೆ ಕೊರಟಗೆರೆ, ತುರುವೇಕೆರೆ, ಕುಣಿಗಲ್ ನಲ್ಲಿ ಆಮ್ಲಜನಕ ಘಟಕ ಬರುತ್ತಿದೆ ಎಂದರಲ್ಲದೆ, ಪಾವಗಡ ತಾಲ್ಲೂಕಿನಲ್ಲಿ ಮೊದಲೇ 100 ಲೀ ಸಾಮರ್ಥ್ಯದ ಘಟಕವಿತ್ತು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಪಂ ಸಿಇಓ ವಿದ್ಯಾಕುಮಾರಿ, ಡಿಹೆಚ್ ಓ ನಾಗೇಂದ್ರಪ್ಪ, ಡಿವೈಎಸ್ಪಿ…

ಮುಂದೆ ಓದಿ...

ಕೋವಿಡ್ ರೋಗಿಗಳಿಗೆ ನಿರಂತರ ಆಕ್ಸಿಜನ್ ಪೂರೈಕೆ ಅವಶ್ಯಕ

ತುಮಕೂರು :        ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ರೋಗಿಗಳಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದೆ. ರೋಗಿಯ ಶ್ವಾಸಕೋಶಕ್ಕೆ ವೈರಾಣು ದಾಳಿಮಾಡಿ ಉಸಿರಾಟದ ಗಾಳಿಯಲ್ಲಿರುವ ಆಕ್ಸಿಜನ್ ಹೀರಿ ಕೊಳ್ಳುವ ಶಕ್ತಿಯನ್ನು ಕುಂದಿಸುತ್ತದೆ.       ಇದೇ ಕಾರಣಕ್ಕೆ ಅತೀ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಇತಂಹ ರೋಗಿಗಳಿಗೆ ಕೃತಕ ಆ್ಯಕ್ಸಿಜನ್‍ನ್ನು ಒದಗಿಸುವುದರಿಂದ ಅದೆಷ್ಟೊ ಪ್ರಾಣಗಳನ್ನು ಉಳಿಸಬಹುದಾಗಿದೆ. ಇರದಲ್ಲೂ ಎರಡು ಪ್ರಕಾರದ ಕೃತಕ ಆ್ಯಕ್ಸಿಜನ್ ನ್ನು ರೋಗಿಗಳಿಗೆ ನೀಡಬಹುದು. ಒಂದು ಮೆಡಿಕಲ್ ಆ್ಯಕ್ಸಿಜನ್ ಸಿಲಿಂಡರ್‍ಗಳ ಮುಖಾಂತರ ರೋಗಿಗಳಿಗೆ ಒದಗಿಸುವುದು. ಇನ್ನೊಂದು ಆ್ಯಕ್ಸಿಜನ್ ಕಾಂಟೈಟ್ರೆಟರ್, ಇವುಗಳನ್ನು ತುಂಬಾ ಸುಲಭವಾಗಿ ರೋಗಿಗಳು ಇರುವ ವಾರ್ಡ್, ಮನೆ ಮುಂತಾದ ಕಡೆಗಳಲ್ಲಿ ಬಳಸಬಹುದಾಗಿದೆ. ಇವುಗಳು ಕೃತಕ ಆಮ್ಲಜನಕವನ್ನು ಪೂರೈಸಿ ರೋಗಿಯು ಚಿಕಿತ್ಸೆಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಮೆಡಿಕಲ್ ಆ್ಯಕ್ಸಿಜನ್ ಪೂರೈಕೆ ತುಂಬಾ ಸಹಾಯಕಾರಿಯಾಗಿದೆ ಇಂತಹ ಸಂಜೀವಿನಿ ಆ್ಯಕ್ಸಿಜನ್ ಕಾಂಟೈಟ್ರೆಟರ್‍ಗಳನ್ನು…

ಮುಂದೆ ಓದಿ...

ಹೇಮಾವತಿ ನಾಲಾ ಕಾಮಗಾರಿ ಜೂ.30 ರಂದು ನಿರ್ಧಾರ

ಚಿಕ್ಕನಾಯಕನಹಳ್ಳಿ:       ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಇತರೆ ಭಾಗಕ್ಕೆ ಹಾಗೂ ತಿಪಟೂರು ತಾಲ್ಲೂಕಿನ ಹಾಲ್ಕುರ್ಕೆ ಭಾಗದ ಹೇಮಾವತಿ ನಾಲಾ ಕಾಮಗಾರಿ ಜೂನ್ 30 ರಂದು ನಿರ್ಧಾರವಾಗಲಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.       ಅವರು ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಲಸಿಕಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮದ ನಂತರ ವರದಿಗಾರರ ಪ್ರಶ್ನೆಗೆ ಉತ್ತರಿಸಿ ಚಿಕ್ಕನಾಯಕನಹಳ್ಳಿ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಬೋರನಕಣಿವೆಯವರೆಗೆ ತಿಪಟೂರು ತಾಲ್ಲೂಕಿನ ಹಾಲ್ಕುರ್ಕೆ ಮಾರ್ಗದ ಹೇಮಾವತಿ ನಾಲಾ ಕಾಮಗಾರಿಗಳು ಸ್ಥಗಿತಗೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿ ಹಿಂದಿನ ಗುತ್ತಿಗೆದಾರರು ನ್ಯಾಯಾಲಯಕ್ಕೆ ಹೋಗಿ, ಆದೇಶ ತಂದ ಕಾರಣ ಈ ಭಾಗದ ಎಲ್ಲಾ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಇದಕ್ಕೂ ಮುನ್ನ ಈ ಹಿಂದೆ ಅವರ ಮನವೊಲಿಸಿ ಅವರೊಂದಿಗೆ ಕರಾರು ಮಾಡಿಕೊಂಡು ಶೆಟ್ಟಿಕೆರೆ ಭಾಗಕ್ಕೆ ನೀರು ಹರಿಸಿದ್ದೆವು. ಈಗ ಅದು ಕ್ಲೋಸ್ ಆಗಿದೆ. ಈಗ…

ಮುಂದೆ ಓದಿ...

ತುಮಕೂರು :  ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಟ್ಯಾಬ್ಲೆಟ್ ಪಿಸಿಗಳ ವಿತರಣೆ

ತುಮಕೂರು :        ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ಪಿಸಿಗಳ ವಿತರಣೆ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಕರೆ ನೀಡಿದರು.       ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ವ ಮಾನವ ಸಭಾಂಗಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಉಚಿತ ಟ್ಯಾಬ್ಲೆಟ್ ಪಿಸಿಗಳ ವಿತರಣೆ ಮತ್ತು ಐಸಿಟಿ ಯುಕ್ತ ಸ್ಮಾರ್ಟ್ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಹಾಗೂ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್ಲೆಟ್ ವಿತರಿಸಿ ಅವರು ಮಾತನಾಡಿದರು.     ವಿದ್ಯಾರ್ಥಿಗಳು ಟ್ಯಾಬ್ಲೆಟ್ ಅನ್ನು ಶಿಕ್ಷಣಕ್ಕೆ ಮಾತ್ರ ಉಪಯೋಗಿಸಬೇಕೇ ಹೊರತು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.      …

ಮುಂದೆ ಓದಿ...