ಹುಳಿಯಾರು: ಶೆಟ್ಟಿಕೆರೆ ಸಿಸ್ಟನ್ ಬಳಕೆಗೆ ಆಗ್ರಹ

ಹುಳಿಯಾರು:       ಶೆಟ್ಟಿಕೆರೆ ಗ್ರಾಮದಲ್ಲಿ ಸಾಕಷ್ಟು ಸಿಸ್ಟನ್‍ಗಳಿದ್ದು ಅದನ್ನು ಕಳೆದ ಮೂರು ವರ್ಷಗಳ ಹಿಂದಿನಿಂದಲೂ ಬಳಸದೆ ಅದರ ಮೇಲೆ ಗಿಡ ಗಂಟೆಗಲು ಬೆಳೆದು ನಿಂತಿವೆ.       2012 ರಿಂದ 2017 ರವರೆಗೆ ಸತತವಾಗಿ ಬರಗಾಲದ ಹಿನ್ನಲೆಯಲ್ಲಿ ಅಭಾವ ಪರಿಹಾರ, ತುರ್ತುನಿಧಿ, ಗ್ರಾ.ಪಂ, ತಾ.ಪಂ, ಜಿ.ಪಂ, ಅನೇಕ ಯೋಜನೆಗಳನ್ನು ಶೆಟ್ಟಿಕೆರೆಯಲ್ಲಿ ಅನುಷ್ಠಾನ ಮಾಡಲಾಗಿತ್ತು, ಅತಿಯಾದ ಬರದ ಹಿನ್ನಲೆಯಲ್ಲಿ ನೀರಿಗೆ ಅಭಾವ ಉಂಟಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಬೋರೆವೆಲ್‍ಗಳು ನಿಂತು ಹೋದ ಪರಿಣಾಮ ಎಲ್ಲಾ ಸಿಸ್ಟನ್‍ಗಳು ಬಳಕೆಗೆ ಬಾರದಂತೆ ಆಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಾವು ಇನ್ನಿತರ ಕ್ರಿಮಿ ಕೀಟಗಳಿಗೆ ವಾಸ ತಾಣವಾಗಿರುವ ಸಿಸ್ಟನ್‍ಗಳನ್ನು ಸ್ವಚ್ಛ ಗೊಳಿಸಿ ಸದ್ಬಳಕೆ ಮಾಡಿಕೊಳ್ಳಲು ಗ್ರಾಪಂ ನವರು ಮುಂದಾಗಬೇಕಿದೆ. ಸದ್ಯ ಶೆಟ್ಟಿಕೆರೆ ಕೆರೆ ತುಂಬಿದ್ದು, ಅಂತರ್ಜಲ ವೃದ್ಧಿ ಆಗಿದ್ದು ಸುಮಾರು 100 ರಿಂದ 200 ಅಡಿ ಆಳದಲ್ಲಿ ನೀರು…

ಮುಂದೆ ಓದಿ...

ತುಮಕೂರು :  ಕಾರ್ಪೋರೇಟರ್ ನೇತೃತ್ವದಲ್ಲಿ ಆಲದಮರ ಪಾರ್ಕ್ ಸ್ವಚ್ಛತೆ

ತುಮಕೂರು :        ನಗರದ 15ನೇ ವಾರ್ಡಿನ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಆಲದ ಮರದ ಪಾರ್ಕ್ ಅನ್ನು ವಾರ್ಡಿನ ಕಾರ್ಪೋರೆಟರ್ ಗಿರಿಜಾ ಧನಿಯಕುಮಾರ್ ಅವರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಚಕ್ರವರ್ತಿ ಗೆಳೆಯರ ಬಳಗ ಹಾಗೂ ಅಕೇಷನಲ್ ಕ್ರಿಕೆಟ್ ಅಸೋಸಿಯೇಷನ್ ಸದಸ್ಯರ ಸಹಕಾರದೊಂದಿಗೆ ಶುಚಿಗೊಳಿಸುವ ಕಾರ್ಯ ನಡೆಯಿತು       ಸ್ಮಾರ್ಟ್‍ಸಿಟಿ ಯೋಜನೆಯಡಿ ಸುಮಾರು 99 ಲಕ್ಷ ರೂ.ಗಳಲ್ಲಿ ಜೂನಿಯರ್ ಕಾಲೇಜಿನ ಆಲದಮರದ ಪಾರ್ಕ್ ಅನ್ನು ಅಭಿವೃದ್ದಿ ಪಡಿಸುವ ಕಾಮಗಾರಿ ನಡೆದಿದ್ದು, ಕೊನೆಯ ಹಂತದಲ್ಲಿದೆ. ಆದರೆ ಕೆಲವರು ಪಾರ್ಕಿನಲ್ಲಿ ಮದ್ಯಪಾನ ಮಾಡಿ, ಎಲ್ಲೆಂದರಲ್ಲಿ ಬಾಟಲಿಗಳನ್ನು ಎಸೆದಿರುವುದಲ್ಲದೆ, ತಿಂಡಿ ತಿಂದ ಪೊಟ್ಟಣಗಳನ್ನು ಬೇಕಾಬಿಟ್ಟಿ ಬಿಸಾಕಿರುವ ಕಾರಣ ಇಡೀ ಪಾರ್ಕು ಕೊಳೆತು ನಾರುತ್ತಿದೆ. ಆದ್ದರಿಂದ ಚಕ್ರವತಿ ಗೆಳೆಯರ ಬಳಗದ ಪ್ರಕಾಶ್, ಅಕೇಷನಲ್ ಕ್ರಿಕೆಟ್ ಅಸೋಸಿಯೇಷನ್‍ನ ಲೋಕೇಶ್, ಧನಿಯಕುಮಾರ್ ಹಾಗೂ ಅವರ ಟೀಮ್‍ನ ಸದಸ್ಯರು, ನಗರಪಾಲಿಕೆಯ ಪೌರಕಾರ್ಮಿಕ…

ಮುಂದೆ ಓದಿ...

ಅಸಂಘಟಿತ ವಲಯದ ಕಾರ್ಮಿಕರಿಗೆ ವಂಚನೆಯಾಗದಂತೆ ಕೋವಿಡ್ ಪರಿಹಾರ ನೀಡಲು ಖಡಕ್ ಸೂಚನೆ

 ತುಮಕೂರು  :       ಕೋವಿಡ್ ಎರಡನೇ ಅಲೆ ಇಡೀ ರಾಜ್ಯವನ್ನೆ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದ ಅಸಂಘಟಿತ ವಲಯದ ಅನೇಕ ಕಾರ್ಮಿಕರು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಇದನ್ನು ಮನಗಂಡ ಸರ್ಕಾರ ಅಸಂಘಟಿತ ಕಾರ್ಮಿಕರಿಗಾಗಿ ಘೋಷಣೆ ಮಾಡಿರುವ ಪರಿಹಾರ ಪ್ಯಾಕೇಜ್ ಅನ್ನು ವಂಚನೆಯಾಗದಂತೆ ಸಕಾಲಕ್ಕೆ ಅರ್ಹರಿಗೆ ವಿತರಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.        ಅವರಿಂದು ತಮ್ಮ ಕಚೇರಿಯಿಂದ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ, ಕಾರ್ಮಿಕ ಮುಖಂಡರು, ಅಸಂಘಟಿತ ಕಾರ್ಮಿಕ ಮುಖಂಡರುಗಳೊಂದಿಗೆ ಜೂಮ್ ಸಭೆ ನಡೆಸಿ ಮಾತನಾಡುತ್ತಾ, ಜಿಲ್ಲೆಯಲ್ಲಿರುವ 11 ಅಸಂಘಟಿತ ಕಾರ್ಮಿಕ ವಲಯದ ಫಲಾನುಭವಿಗಳಿಗೆ ಕಡ್ಡಾಯವಾಗಿ ಈ ಕೋವಿಡ್ ಪರಿಹಾರ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು. ಪರಿಹಾರ ಸೌಲಭ್ಯ ಕುರಿತು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರು, ಅರ್ಹ ಫಲಾನುಭವಿಗಳಿಗೆ ಮಾಹಿತಿ ನೀಡಬೇಕು. ಇದುವರೆಗೂ ನೋಂದಣಿಯಾಗದೇ ಇರುವ ಅರ್ಹ…

ಮುಂದೆ ಓದಿ...