ಹೊರ ರಾಜ್ಯದಿಂದ ಜಿಲ್ಲೆಗೆ ಬಂದವರಿಗೆ ನಗರದ ಕೆಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಸೆಲ್ಫ್ ರಿಪೋರ್ಟಿಂಗ್ ಸೆಂಟರ್ ಸ್ಥಾಪನೆ

ತುಮಕೂರು :       ಹೊರ ರಾಜ್ಯದಿಂದ ತುಮಕೂರು ಜಿಲ್ಲೆಗೆ ಬರುವ ಸಾರ್ವಜನಿಕರು ವರದಿ ಮಾಡಿಕೊಳ್ಳಲು ಜಿಲ್ಲಾಡಳಿತ ವತಿಯಿಂದ ನಗರದ ತಾತ್ಕಾಲಿಕ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ “ಸೆಲ್ಫ್ ರಿಪೋರ್ಟಿಂಗ್ ಸೆಂಟರ್” ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ವೀಕ್ಷಣೆ ಮಾಡಿದರು.       ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊರ ರಾಜ್ಯದಿಂದ ಜಿಲ್ಲೆಗೆ ಬರಲು ಸೇವಾ ಸಿಂಧುನಲ್ಲಿ ಈಗಾಗಲೇ 1200ಕ್ಕೂ ಹೆಚ್ಚು ಜನರು ನೊಂದಾಯಿಸಿಕೊಂಡಿದ್ದಾರೆ. ಹೊರ ರಾಜ್ಯದಿಂದ ಜಿಲ್ಲೆಗೆ ಬರುವ ಜನರು, ಕಡ್ಡಾಯವಾಗಿ ಸ್ವಯಂ ವರದಿ ಮಾಡಿಕೊಳ್ಳಬೇಕು. ಇಲ್ಲಿ ಇವರಿಗೆ ಪರೀಕ್ಷೆಗೊಳಪಡಿಸಲಾಗುವುದು. ರೋಗ ಲಕ್ಷಣಗಳು ಇರುವವರನ್ನು ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಸ್ಥಳಾಂತರಿಸಲಾಗುವುದು. ನಗರ ಪಟ್ಟಣ ಪ್ರದೇಶದವರನ್ನು ಹೋಂ ಕ್ವಾರೆಂಟೈನ್‍ಗೆ ಕಳುಹಿಸಲಾಗುವುದು. ಆದರೆ ಗ್ರಾಮೀಣ ಪ್ರದೇಶದವರನ್ನು ಸಾಂಸ್ಥಿಕ ಹೋಂ ಕ್ವಾರೆಂಟೈನ್ ಮಾಡಲಾಗುವುದು. ಹೊರ ರಾಜ್ಯದಿಂದ ಖಾಸಗಿ ವಾಹನಗಳಲ್ಲಿ ಬಂದರೆ ಗಡಿ ಭಾಗಗಳಲ್ಲಿ ಅವರು ಕೆಎಸ್‍ಆರ್‍ಟಿಸಿ…

ಮುಂದೆ ಓದಿ...

ತುಮಕೂರು ಜಿಲ್ಲೆಯಲ್ಲಿ 11 ಕ್ಕೇರಿದ ಕೊರೊನಾ : ಜನರಲ್ಲಿ ಹೆಚ್ಚಿದ ಆತಂಕ

ತುಮಕೂರು :       ಜಿಲ್ಲೆಯಲ್ಲಿ ಒಟ್ಟು 11 ಪ್ರಕರಣಗಳು ಕೊರೊನಾ ಸೋಂಕಿತರು ಎಂದು ದೃಢಪಟ್ಟಿದ್ದು, ಇಂದು ಶಿರಾ ಮತ್ತು ಪಾವಗಡ ಸೇರಿದಂತೆ 4 ಕೋವಿಡ್-19 ಪಾಸಿಟೀವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ.       ಶಿರಾ ನಗರಕ್ಕೆ ಬೆಂಗಳೂರಿನ ಪಾದರಾಯನಪುರದ ಪುಂಡನೊಬ್ಬ ಪಾದರಾಯನಪುರ ಗಲಾಟೆಯಿಂದ ತಪ್ಪಿಸಿಕೊಂಡು ಶಿರಾ ಸಂಬಂಧಿಕರ ಮನೆಗೆ ಬಂದಿದ್ದು, ತಾಲ್ಲೂಕು ಆಡಳಿತದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆತನನ್ನ ಕ್ವಾರೆಂಟೈನ್ ಮಾಡಲಾಗಿತ್ತು. ಆತನ ಗಂಟಲು ಮತ್ತು ಮೂಗಿನ ದ್ರವವನ್ನು ತೆಗೆದು ಕಳುಹಿಸಲಾಗಿತ್ತು. ಆತನಿಗೂ ಸಹಾ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಶಿರಾ ನಗರದ ಜನರಲ್ಲಿ ಆತಂಕಕ್ಕೀಡುಮಾಡಿದೆ. ಜಿಲ್ಲೆಯಲ್ಲಿ ಮೊಟ್ಟಮೊದಲಿಗೆ ಕೊರೊನಾ ಸೋಂಕು ತಗುಲಿದ್ದ ವ್ಯಕ್ತಿ ಶಿರಾ ನಗರದವರು ಎಂಬುದು ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಶಿರಾ ನಗರದ ಜನರಲ್ಲಿ ಅಂದಿನಿಂದ ಆತಂಕ ಮಡುಗಟ್ಟಿತ್ತು. ಎಲ್ಲವೂ ಮುಗಿದುಹೋಯಿತು ಎನ್ನುವಷ್ಟರಲ್ಲಿ…

ಮುಂದೆ ಓದಿ...

ಭ್ರಷ್ಟಾಚಾರ ಆರೋಪ ಹೊತ್ತಿದ್ದ ಡಿಎಚ್‍ಓ ಚಂದ್ರಿಕಾ ದಿಢೀರ್ ಎತ್ತಂಗಡಿ

ತುಮಕೂರು :       ಪಿಪಿಇ ಕಿಟ್ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ||ಚಂದ್ರಿಕಾ ದಿಢೀರ್ ವರ್ಗಾವಣೆಯಾಗಿದೆ. ಗುಬ್ಬಿ ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಅವರು ಈ ಅವ್ಯವಹಾರ ಕುರಿತಂತೆ ಸುದ್ಧಿಗೋಷ್ಠಿ ನಡೆಸಿ ಆರೋಪಿಸಿದ್ದರು. ಡಿಎಚ್‍ಓ ಚಂದ್ರಿಕಾ ರವರು ಇಡೀ ಜಿಲ್ಲೆಯಾದ್ಯಂತ ಭ್ರಷ್ಟಾಚಾರವೆಸಗಿದ್ದು, ಕೋವಿಡ್-19 ಪರೀಕ್ಷೆ ಮಾಡಲು ಬಳಸುತ್ತಿದ್ದ ಕಿಟ್‍ಗಳನ್ನು ತಾಲ್ಲೂಕ್ ಆಸ್ಪತ್ರೆಗಳು ಖರೀದಿಸುವ ವಿಚಾರದಲ್ಲಿ ತಮಗೆ ಬೇಕಾದ ಕಂಪನಿಗಳೊಂದಿಗೆ ಶಾಮೀಲಾಗಿ ಭ್ರಷ್ಟಾಚಾರ ಮಾಡಿದ್ದಾರೆ.       ಸಾವಿನ ಮನೆಯಲ್ಲಿ ಹಣ ಮಾಡುವ ದಂಧೆಗಿಳಿದಿದ್ದಾರೆ ಎನ್ನುವಂತಹ ಆರೋಪಗಳು ಪ್ರಬಲವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಾದ್ಯಂತ ಡಿಎಚ್‍ಓ ಚಂದ್ರಿಕಾ ರವರ ಭ್ರಂಹಾಂಡ ಭ್ರಷ್ಟಾಚಾರ ಕುರಿತು ತೀವ್ರವಾದ ವಿರೋಧ ಬಂದ ಹಿನ್ನೆಲೆಯಲ್ಲಿ ನಮ್ಮ ಪತ್ರಿಕೆಯೂ ಸೇರಿದಂತೆ ಮಾಧ್ಯಮಗಳು ಚಂದ್ರಿಕಾ ರವರ ಭ್ರಷ್ಟಾಚಾರ ಕುರಿತು ವರದಿಯನ್ನ ಪ್ರಕಟಿಸಿತ್ತು. ಮೇಲ್ನೋಟಕ್ಕೆ ಭ್ರಷ್ಟಾಚಾರ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ…

ಮುಂದೆ ಓದಿ...

ಕೃಷಿ ವಲಯಕ್ಕೆ ಲಾಕ್ ಡೌನ್ ನಡುವೆಯೂ ಸಡಿಲಿಕೆ – ಸಚಿವ ಗೋಪಾಯ್ಯ

ತುಮಕೂರು:       ಕೊರೋನಾದಿಂದ ದೇಶ ಸಂಕಷ್ಟದಲ್ಲಿದ್ದು, ರೈತರು ಬೆಳೆದರೆ ಮಾತ್ರ ದೇಶ ಉದ್ಧಾರ ಆಗಲು ಸಾಧ್ಯ ಎನ್ನುವುದನ್ನು ಅರಿತು ಕೃಷಿ ವಲಯಕ್ಕೆ ಲಾಕ್ ಡೌನ್ ನಡುವೆಯೂ ಸಡಿಲಿಕೆಯನ್ನು ನೀಡಲಾಗಿತ್ತು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಗೋಪಾಯ್ಯ ತಿಳಿಸಿದರು.       ತಾಲ್ಲೂಕಿನ ಬುಗುಡನಹಳ್ಳಿ ಗ್ರಾಮದಲ್ಲಿ ಕೊರೋನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಪಡಿತರ ವಿತರಿಸಿ ಮಾತನಾಡಿದ ಅವರು, ಆಹಾರವನ್ನು ಸರಿಯಾಗಿ ಪೂರೈಕೆ ಮಾಡದ 150 ಅಂಗಡಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.       ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪಡಿತರವನ್ನು ಉಚಿತವಾಗಿ ನೀಡಲಾಗುತ್ತಿದೆ, ರಾಜ್ಯ ಸಂಕಷ್ಟದಲ್ಲಿರುವ ಪರಿಸ್ಥಿತಿಯಲ್ಲಿ ಹಣ ಪಡೆಯದಂತೆ ಮನವಿ ಮಾಡಿದರೂ, ಅಂಗಡಿ ಮಾಲೀಕರು ಕೇಳದೇ ಮೋಸ ಮಾಡುತ್ತಿದ್ದ ಅಂಗಡಿಗಳು ಹಾಗೂ ಕಾರ್ಯ ನಿರ್ವಹಿಸದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.  …

ಮುಂದೆ ಓದಿ...

ತುಮಕೂರು : ಕೋವಿಡ್-19 ಸೋಂಕಿತ ವ್ಯಕ್ತಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ!!

ತುಮಕೂರು:       ತುಮಕೂರು ಜಿಲ್ಲೆಯಲ್ಲಿ ಗುಜರಾತ್ ಮೂಲದ ಕೋವಿಡ್-19 ಪಿ-447 ಸೋಂಕಿತ ವ್ಯಕ್ತಿಯು ಸಂಪೂರ್ಣವಾಗಿ ಗುಣಮುಖರಾಗಿ ಇಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.        ಮಹಾಮಾರಿ ಕೋವಿಡ್-19ರ ಸೋಂಕಿಗೆ ಒಳಾಗಿದ್ದ ವ್ಯಕ್ತಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸೋಂಕಿನಿಂದ ಮುಕ್ತರಾಗಿರುವ ಸಂತಸ ಅವರ ಮುಖದಲ್ಲಿ ಕಾಣಿಸುತ್ತಿತ್ತು. ಸೋಂಕಿತ ವ್ಯಕ್ತಿಯು ಮಾರ್ಚ್ 12ರಂದು ತುಮಕೂರು ಜಿಲ್ಲೆಗೆ ಆಗಮಿಸಿದ್ದು, ದೇಶದಲ್ಲಿ ಲಾಕ್‍ಡೌನ್ ಆಗಿರುವುದರಿಂದ ಇಲ್ಲೇ ಉಳಿದುಕೊಂಡಿದ್ದರು, ಹೊರ ರಾಜ್ಯದಿಂದ ಬಂದಿರುವ ವ್ಯಕ್ತಿಗಳನ್ನು ರ್ಯಾಂಡ್‍ಮ್ ಆಗಿ ತಪಾಸಣೆಗೊಳಪಡಿಸಲಾಗಿತ್ತು. ಇದರಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿತ್ತು. ಕಳೆದ 14 ದಿನಗಳಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, 12ನೇ ದಿನ ಮತ್ತು 13 ದಿನದಂದು ಲ್ಯಾಬ್‍ಗೆ ಕಳುಹಿಸಿದ ಮಾದರಿ ನೆಗೆಟಿವ್ ಬಂದಿದ್ದು, ಸಾಂಸ್ಥಿಕ ಹೋಂ ಕ್ವಾರೆಂಟೈನ್‍ನಲ್ಲಿ ಇಡಲಾಗುವುದು. ಇವರು ಹೊರ ರಾಜ್ಯದವರಾಗಿರುವುದರಿಂದ ಮತ್ತೆ 28ನೇ ದಿನ…

ಮುಂದೆ ಓದಿ...