ಸೋಂಕಿಗೆ ಹೆದರಿ ಕೊರೊನ ದೇವಿಯ ಮೊರೆ

ತುಮಕೂರು:      ಮಹಾ ಮಾರಿ ಕೊರೋನ ವಿಶ್ವವನ್ನೇ ತಲ್ಲಣಗೊಳಿಸಿ ಮಾನವ ಕುಲವನ್ನೇ ಬೆಚ್ಚಿಬೀಳಿಸಿದೆ. ವೈದ್ಯರು, ನರ್ಸ್ ಗಳು, ಸ್ವಚ್ಚತಾ ಕರ್ಮಿಗಳು, ಪೋಲೀಸರು ಜನರ ಜೀವದ ರಕ್ಷಣೆಗೆ ಪಣತೊಟ್ಟಿದ್ದಾರೆ.      ಇದರ ನಡುವೆ ಜನರು ಸೋಂಕಿಗೆ ಹೆದರಿ ಕೊರೊನ ದೇವಿಯ ಮೊರೆ ಹೋಗಿರುವ ಘಟನೆ ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಕೊಂಡಾಪುರ ಗೋಮಾಳ ಗ್ರಾಮದಲ್ಲಿ ನಡೆದಿದೆ.       ಹೌದು.. ಭಯವೇ ಭಕ್ತಿಯ ಮೂಲ ಎಂಬ ನಾಣ್ಣುಡಿಯಂತೆ, ಕೊರೊನ ಖಾಯಿಲೆಗೆ ಭಯಭೀತರಾಗಿ ತಾವೇ ಕೊರೊನ ದೇವಿಯನ್ನು ಸೃಷ್ಟಿಸಿ ಪೂಜೆಗೈದಿರುವ ಘಟನೆ ಶುಕ್ರವಾರ ಜರುಗಿದೆ.       ಬೇವಿನ ಮರದ ಬುಡದಲ್ಲಿ ಚಿಕ್ಕದಾದ ಹಸಿರೆಲೆ ಹೊದಿಕೆಯ ಚಪ್ಪರವನ್ನು ಹಾಕಿ ಹಣ್ಣು, ಹೂ, ಕಾಯಿ, ಮೊಸರನ್ನ ಮತ್ತು ಪೊಂಗಲ್ ಎಡೆ ಇಟ್ಟು ಹರಕೆ ಹೊತ್ತಿದ್ದಾರೆ.       ನಮ್ಮೂರಿಗೆ ಯಾವುದೇ ಖಾಯಿಲೆ ಕಸಾರೆ ಬರದಿರಲಿ…

ಮುಂದೆ ಓದಿ...

ಚಿಕ್ಕನಾಯಕನಹಳ್ಳಿ: ಲಾಕ್ಡೌನ್ ಸಡಿಲ ; ಟ್ಯಾಕ್ಸಿ ಚಾಲಕರ ಜೊತೆ ಪಿಎಸ್‍ಐ ಸಭೆ!!

ಚಿಕ್ಕನಾಯಕನಹಳ್ಳಿ:     ಲಾಕ್ಡೌನ್ ಸಡಿಲದ ಸಮದರ್ಭದಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಅನುಸರಿಸಬೇಕಾದ ನಿಯಮಗಳ ಬಗ್ಗೆ ತಿಳುವಳಿಕೆ ಸಭೆಯನ್ನು ಪಿಎಸ್‍ಐ ಪಿ. ಶಿವಪ್ಪ ನಡೆಸಿದರು.       ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಭೆಯು ಪಿಎಸೈ ಪಿ. ಶಿವಪ್ಪನವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿ ಕೊರೊನಾ ವೈರಾಣು ವಿರುದ್ದ ಹೋರಾಟದಲ್ಲಿ ಲಾಕ್‍ಡೌನ್ ನಿಯಮ ಜಾರಿಗೆ ಬಂದಿದ್ದು ಈಚೆಗೆ ಇದನ್ನು ಹಂತಹಂತವಾಗಿ ಸಡಿಲಗೊಳಿಸಲಾಗಿದೆ.       ಇದರ ಮುಂದುವರಿಕೆಯ ಭಾಗದಂತೆ ಆಟೋ ಹಾಗೂ ಟ್ಯಾಕ್ಸಿಗಳಿಗೆ ರಸ್ತೆಯಲ್ಲಿ ಓಡಾಡಲು ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಾಗಿದೆ. ವಾಹನಗಳಲ್ಲಿ ಎಲ್ಲಾ ರೀತಿಯ ದಾಖಲಾತಿಗಳಿರಬೇಕು. ಆಟೋ ಚಾಲಕರಿಗೂ ಹಾಗೂ ಪ್ರಯಾಣಿಕರಿಗೂ ನಡುವೆ ಅಂತರದ ಪಟ್ಟಿಯನ್ನು ಹಾಕಿಕೊಳ್ಳಬೇಕು, ಚಾಲಕ ಹೊರತಾಗಿ ಇಬ್ಬರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ.       ಎಲ್ಲರೂ…

ಮುಂದೆ ಓದಿ...

ತುಮಕೂರು: ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ!

ತುಮಕೂರು:       ನಗರದ ಬಟವಾಡಿ ಮೇಲುಸೇತುವ ಬಳಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಶವ ನೇತಾಡುತ್ತಿದದ್ದು ಕಂಡು ಬಂದಿದೆ.       ಇಂದು ಮುಂಜಾನೆ ಬಡವಾಡಿ ಮೇಲುಸೇತುವೆ ಬಳಿ ಓಡಾಡುತ್ತಿದ್ದ ಜನತೆಯನ್ನು ಈ ಘಟನೆ ಬೆಚ್ಚಿಬಿಳಿಸಿದಂತು ನಿಜ, ಮೇಲುಸೇತುವೆಯ ಎತ್ತರದಲ್ಲಿ ವ್ಯಕ್ತಿಯೊಬ್ಬ ನೇತಾಡುತ್ತಿದ್ದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.       ಇನ್ನೂ ವ್ಯಕ್ತಿಯು ರಾಮನಗರದ ಹಾರೋಹಳ್ಳಿಯ ಮಧು ಎಂದು ಗುರುತಿಸಿಲಾಗಿದೆ (ವ್ಯಕ್ತಿಯ ಬಳಿ ಇದ್ದ ಮೊಬೈಲ್ ಮೂಲಕ ತಿಳಿದುಕೊಳ್ಳಲಾಗಿದೆ) ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಮುಂದೆ ಓದಿ...

ಶೀಘ್ರದಲ್ಲಿಯೇ ಮಧುಗಿರಿಗೆ ಹೇಮೆ ಹರಿಯಲಿದ್ದಾಳೆ : ಶಾಸಕ ಎಂ.ವಿ.ವೀರಭದ್ರಯ್ಯ

 ಮಧುಗಿರಿ :       ಸರ್ಕಾರ ನೀರು ಬಿಡಲು ಒಪ್ಪಿದ್ದು, ಶೀಘ್ರದಲ್ಲಿಯೇ ಮಧುಗಿರಿಯ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಯಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.       ಪಟ್ಟಣದ ತಾ.ಪಂ.ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಿಡಿಓಗಳ ಸಭೆಯಲ್ಲಿ ಮಾತನಾಡಿದ ಅವರು ಎರಡನೇ ಅವಧಿಗೆ ಮಧುಗಿರಿಗೆ ಹೇಮೆ ಹರಿಯಲಿದ್ದು, ಪಟ್ಟಣದಲ್ಲಿ ನೀರಿನ ಸಮಸ್ಯೆ ದೂರಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.      ಗ್ರಾಮೀಣ ಭಾಗದಲ್ಲಿ 50 ಖಾಸಗಿ ಕೊಳವೆಬಾವಿಯಿಂದ ನೀರು ಪಡೆದು ಜನರಿಗೆ ನೀಡುತ್ತಿದ್ದು, ತಹಶೀಲ್ದಾರ್ ಡಾ. ವಿಶ್ವನಾಥ್ ರವರು ಹಣ ಬಿಡುಗಡೆಗೆ ವಿಳಂಬ ಮಾಡುತ್ತಿದ್ದಾರೆ ಎಂದು ಪಿಡಿಓಗಳು ಶಾಸಕರ ಗಮನಕ್ಕೆ ತಂದಾಗ, ಕಷ್ಟದಲ್ಲಿ ಹಣ ಸಿಗಲಿದೆ ಎಂಬ ಕಾರಣಕ್ಕೆ ರೈತರು ಸರ್ಕಾರಕ್ಕೆ ನೀರು ಕೊಡುತ್ತಾರೆ. ನೀವು ಹಣ ಬಿಡುಗಡೆ ಮಾಡದಿದ್ದರೆ ಪಿಡಿಓಗಳು ಏನು ಮಾಡಬೇಕು. ಇದರಿಂದ ಸರ್ಕಾರಕ್ಕೂ ನಮಗೂ ಕೆಟ್ಟ ಹೆಸರು ಬರಲಿದೆ ಎಂದು…

ಮುಂದೆ ಓದಿ...

ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ: ತುಮಕೂರು ಜಿಲ್ಲೆ ದಾಪುಗಾಲು

 ತುಮಕೂರು:       ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ 10 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡುವ ಗುರಿ ಹೊಂದಲಾಗಿದ್ದು, ಕಳೆದ ಮೇ 21ರೊಳಗೆ ಒಟ್ಟು 55456 ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ತುಮಕೂರು ಜಿಲ್ಲೆ ನರೇಗಾ ಅನುಷ್ಠಾನದಲ್ಲಿ ದಾಪುಗಾಲು ಹಾಕಿದೆ.        ಪಾವಗಡ ತಾಲೂಕಿನ 39 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೈಯಕ್ತಿಕ ಹಾಗೂ ಸಮುದಾಯದ 338 ಕಾಮಗಾರಿಗಳು ಪ್ರಗತಿಯಲ್ಲಿದ್ದು ಜಿಲ್ಲೆಗೆ 5ನೇ ಸ್ಥಾನದಲ್ಲಿದೆ.    ಕ್ಯಾತಗಾನಕೆರೆ ಹೂಳೆತ್ತುವ ಕಾಮಗಾರಿ:-        ಪಾವಗಡ ತಾಲೂಕು ಬಿ.ಕೆ ಹಳ್ಳಿ ಗ್ರಾಮಪಂಚಾಯಿತಿ ಕ್ಯಾತಗಾನಹಳ್ಳಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯನ್ನು 3 ಲಕ್ಷ ವೆಚ್ಚದಲ್ಲಿ ಕೈಗೊಂಡಿದ್ದು, ಸಾಮಾಗ್ರಿ ವೆಚ್ಚ-20,000 ರೂ. ಕೂಲಿ ವೆಚ್ಚ 2.80 ಲಕ್ಷ ರೂಪಾಯಿಗಳು ಈವರೆಗೆ…

ಮುಂದೆ ಓದಿ...

ತುಮಕೂರು : ಕರೋನ ದೃಢಪಟ್ಟಿರುವ ಗ್ರಾಮಕ್ಕೆ ಮಾಜಿ ಶಾಸಕ ಸುರೇಶ್ ಗೌಡ ಭೇಟಿ!!

ತುಮಕೂರು :      ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಹೆಬ್ಬೂರು ಹೋಬಳಿಯ ಬಳ್ಳಗೆರೆ ಗ್ರಾಮ ಪಂಚಾಯತಿ ಮಾಯಣ್ಣನ ಪಾಳ್ಯದಲ್ಲಿ ಕರೋನ ಸೋಂಕು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ವಿಷಯ ತಿಳಿದ ತಕ್ಷಣ ಆ ಗ್ರಾಮಕ್ಕೆ ಮಾಜಿ ಶಾಸಕರಾದ ಬಿ.ಸುರೇಶ್ ಗೌಡ ರವರು ಭೇಟಿ ನೀಡಿಸರ್ಕಾರ ಯಾವ ಯಾವ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ ಎಂದು ಪರಿಶೀಲಿಸಿದರು.       ಎಂಬುದರ ಬಗ್ಗೆ ತಾಲ್ಲೂಕು ದಂಡಾಧಿಕಾರಿ, ತಾಲ್ಲೂಕು ಪಂಚಾಯತಿ EO, ತಾಲ್ಲೂಕು ಆರೋಗ್ಯಅಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ನರ್ಸ್ ಹಾಗೂ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರೊಂದಿಗೆ ಪರಿಶೀಲನೆ ನೆಡಸಿ, ಗ್ರಾಮಸ್ಥರಿಗೆ ಕೋವಿಡ್ 19 ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರುವುದರೊಂದಿಗೆ ಜೀವ ಹಾಗೂ ಜೀವನವನ್ನು ಕಾಪಾಡಿಕೊಳ್ಳುವಂತೆ ಹಾಗೂ ಏನೇ ಆದರೂ ದೃತಿಗೆಡಬೇಡಿ, ನಿಮ್ಮೊಂದಿಗೆ ನಾನು ಹಾಗೂ ನಮ್ಮ ಸರ್ಕಾರ ಸದಾ ನಿಮ್ಮ ಜೊತೆ ಇದೆ…

ಮುಂದೆ ಓದಿ...

ತುಮಕೂರು‌ :‌ ಇಂದು‌ ಒಂದೇ ದಿನ 9 ಕೊರೊನಾ ಪಾಸಿಟಿವ್ ಪ್ರಕರಣ!!

ತುಮಕೂರು :       ಜಿಲ್ಲೆಯಲ್ಲಿ ಇಂದು ಒಂದೇ ದಿನ ಹೊಸದಾಗಿ‌ 9 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು ಸೊಂಕಿತರ ಸಂಖ್ಯೆ 25 ಕ್ಕೆರಿದೆ ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.       ಮುಂಬೈ ನಿಂದ ತುರುವೆಕೆರೆಗೆ ವಾಪಾಸಾಗಿರುವ ನಾಲ್ಕು ಜನರಿಗೆ ಕೋವಿಡ್ 19 ದೃಡಪಟ್ಟಿದ್ದು ಪಿ 1611 ಹೆಣ್ಣು 29 ವರ್ಷ, ಪಿ 1612 ಗಂಡು 39 ವರ್ಷ, ಪಿ1613 ಗಂಡು 10 ವರ್ಷ, ಪಿ 1614 ಗಂಡು 21 ವರ್ಷ ಎಂದು ಗುರುತಿಸಲಾಗಿದೆ. ನಾಲ್ವರನ್ನ ತುರುವೆಕೆರೆಯಲ್ಲಿ ಕ್ವಾರೈಂಟೈನ್ ಮಾಡಲಾಗಿತ್ತು ನೆನ್ನೆ ತುಮಕೂರಿನ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.       ಮುಂಬೈ ಮಹಾರಾಷ್ಟ್ರದಿಂದ ತುಮಕೂರಿಗೆ ಬಂದಿದ್ದ ಇಬ್ಬರಿಗೆ ಪಾಸಿಟಿವ್ ಬಂದಿದ್ದು ಪಿ 1615 ಗಂಡು 08 ವರ್ಷ, ಪಿ 1623 ಗಂಡು 60 ವರ್ಷ ಎಂದು ಗುರುತಿಸಲಾಗಿದೆ.…

ಮುಂದೆ ಓದಿ...