ಗುಬ್ಬಿ : ಕೆರೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ

ಗುಬ್ಬಿ :       ಕೆರೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿ ಎಸ್ ಪುರದಲ್ಲಿ ನಡೆದಿದ್ದು ಮೃತ ಬಾಲಕನ್ನು ಶ್ರೀನಿವಾಸ್ ಎಂದು ಪತ್ತೆ ಹಚ್ಚಲಾಗಿದೆ.       ಗುರುವಾರ ಬೆಳಗ್ಗೆ 10 ಗಂಟೆಯಲ್ಲಿ ಸ್ನೇಹಿತರೊಂದಿಗೆ ಸಿ ಎಸ್ ಪುರ ಕೆರೆಗೆ ಈಜಲು ಹೋದ ಶ್ರೀನಿವಾಸ್ ಅಚಾನಕ್ ಆಗಿ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಕಂಡ ಸ್ನೇಹಿತರೆಲ್ಲರು ಭಯದಿಂದ ಓಡಿ ಹೋಗಿದ್ದಾರೆ. ಘಟನೆ ಬಗ್ಗೆ ತಿಳಿದ ಸ್ಥಳೀಯ ವ್ಯಕ್ತಿಗಳು ಅವನನ್ನು ರಕ್ಷಿಸಲು ಮುಂದಾಗಿದ್ದು ಅಷ್ಟರಲ್ಲಾಗಲೇ ಶ್ರೀನಿವಾಸ್ ಮೃತಪಟ್ಟಿದ್ದನು ಸ್ಥಳಕ್ಕೆ ಸಿ.ಎಸ್.ಪುರ ಪೆÇಲೀಸ್ ಠಾಣೆಯ ಎ ಎಸ್ ಐ ಬಸವರಾಜ್ ಭೇಟಿ ನೀಡಿ ಪ್ರಕರಣವನ್ನು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದೆ ಓದಿ...

ತುಮಕೂರು : ತಂಬಾಕು ಕಾರ್ಯಾಚರಣೆ: 11,580 ರೂ.ದಂಡ ವಸೂಲಿ

ತುಮಕೂರು :       ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತುಮಕೂರು ವತಿಯಿಂದ ತಂಬಾಕು ನಿಯಂತ್ರಣ ಕಾನೂನು-2003 ರ ಪ್ರಮುಖ ನಿಯಮಗಳಡಿ ಹಾಗೂ ಕೋವಿಡ್ -19 ನಿಯಂತ್ರಣದ ಸಲುವಾಗಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತುಮಕೂರು ನಗರದ ಶಿರಾಗೇಟ್, ಊರುಕೆರೆ, ಯಲ್ಲಾಪುರದ ಕೆಲ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದವರ ಹಾಗೂ ತಂಬಾಕು ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದವರ ವಿರುದ್ದ ಒಟ್ಟು 100 ಪ್ರಕರಣಗಳನ್ನು ದಾಖಲಿಸಿ, 11,580 ರೂ.ಗಳ ದಂಡ ವಸೂಲಿ ಮಾಡಲಾಗಿದೆ.       ಕಾರ್ಯಾಚರಣೆಯ ಬಗ್ಗೆ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ನಾಗೇಂದ್ರಪ್ಪ ಹಾಗೂ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳಾದ ಡಾ|| ಮೋಹನ್ ದಾಸ್ ಆರ್.ವಿ ಇವರುಗಳು ಮಾತನಾಡಿ, ಕೋವಿಡ್-19 ರೋಗವು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕ…

ಮುಂದೆ ಓದಿ...

ಭಿಕ್ಷುಕರಂತೆ ಅನ್ನ ಬೇಡುವ ದುಸ್ಥಿತಿ ವಲಸೆ ಕಾರ್ಮಿಕರದ್ದು

ಪಾವಗಡ :       ತುಂಗಭದ್ರಾ ಕುಡಿ ಯುವ ನೀರಿನ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಿಗೆ ಕಳೆದ 50 ದಿನಗಳಿಂದ ಆಹಾರವಿಲ್ಲ. ಪ್ರತಿದಿನ ತಿಂಡಿ ಊಟಕ್ಕಾಗಿ ಸಮೀಪದ ಬೆಳ್ಳಿಬೆಟ್ಲು ಮತ್ತು ಶೈಲಾಪುರ ಗ್ರಾಮಗಳಿಗೆ ಅಲೆದಾಡುತ್ತಿರುವುದು ಮನಕಲಕುವಂತಿದೆ.       ಸುಮಾರು 2,350 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಈ ಕಾಮಗಾರಿ ಕೆಲಸ ಮಾಡಲು ಬಂದಿದ್ದರು. ಆದರೆ ಈ ಲಾಕ್‍ಡೌನ್‍ಯಿಂದಾಗಿ ತಮ್ಮ ಊರುಗಳಿಗೆ ಹೋಗಲು ಪರದಾಡುತ್ತಿದ್ದಾರೆ. ಮತ್ತೊಂದೆಡೆ ಇವರು ಸ್ವಗ್ರಾಮಗಳಿಗೆ ತೆರಳುತ್ತೇವೆ ಎಂದು ಮನವಿ ಮಾಡಿದರೆ ಗುತ್ತಿಗೆದಾರರಿಂದಲೇ ಹಲ್ಲೆಯತ್ನ ನಡೆಯುತ್ತದೆ. ಈ ರೀತಿಯ ಹತ್ತು ಹಲವು ಚಿತ್ರಹಿಂಸೆ ಅನುಭವಿಸುತ್ತಾ ಕಳೆದ 4 ತಿಂಗಳಿಂದ ವೇತನವಿಲ್ಲದೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬ ಆರೋಪ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ವಲಸೆ ಕಾರ್ಮಿಕರಿಂದ ಕೇಳಿ ಬರುತ್ತಿದೆ. ತಮಗೆ ಸೂಕ್ತ ಭದ್ರತೆಯನ್ನು ನೀಡುವಂತೆ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ.  …

ಮುಂದೆ ಓದಿ...