ತುಮಕೂರಿನಿಂದ 765 ವಲಸೆ ಕಾರ್ಮಿಕರಿಗೆ ಬಸ್ಸಿನಲ್ಲಿ ಪ್ರಯಾಣ ವ್ಯವಸ್ಥೆ

ತುಮಕೂರು:       ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೇ ಉಳಿದುಕೊಂಡಿದ್ದ ರಾಜ್ಯದ ವಿವಿಧ ಜಿಲ್ಲೆಗಳ 765 ವಲಸೆ ಕಾರ್ಮಿಕರು ತಮ್ಮ ಊರಿಗೆ ಪ್ರಯಾಣ ಬೆಳೆಸಲು ಒಟ್ಟು 24 ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು ಎಂದು ಕ.ರಾ.ರ.ಸಾ.ನಿ.ದ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ತಿಳಿಸಿದ್ದಾರೆ.       ತುಮಕೂರು ನಗರದ ಬಸ್ ನಿಲ್ದಾಣದಿಂದ ಮುದ್ದೇಬಿಹಾಳ್, ರಾಯಚೂರು, ಶಿವಮೊಗ್ಗ, ಹಾವೇರಿ, ಕಲ್ಬುರ್ಗಿ, ಬಾಗಲಕೋಟೆ, ಹುಬ್ಬಳ್ಳಿ, ಬೆಂಗಳೂರು, ಯಾದಗಿರಿ, ರಾಯಚೂರು-ಬಳ್ಳಾರಿ, ಹಾಸನ-ಶಿವಮೊಗ್ಗ, ಯಾದಗಿರಿ-ಕಲ್ಬುರ್ಗಿ ಜಿಲ್ಲೆಗಳಿಗೆ ಒಟ್ಟು 13 ಬಸ್‍ಗಳಲ್ಲಿ 438 ಕಾರ್ಮಿಕರು ಪ್ರಯಾಣ ಮಾಡಿದರು.       ಗುಬ್ಬಿ ಬಸ್ ನಿಲ್ದಾಣದಿಂದ ಕಲ್ಬುರ್ಗಿ ಜಿಲ್ಲೆಗೆ 30; ಕುಣಿಗಲ್‍ನಿಂದ ಕರಟಗಿ ಹಾಗೂ ಬಾಗಲಕೋಟೆ-ವಿಜಾಪುರ ಜಿಲ್ಲೆಗಳಿಗೆ ಒಟ್ಟು 73; ಮಧುಗಿರಿಯಿಂದ ತುಮಕೂರಿಗೆ 22; ಚಿಕ್ಕನಾಯಕನಹಳ್ಳಿಯಿಂದ ಬೆಂಗಳೂರು ಹಾಗೂ ವಿಜಾಪುರಕ್ಕೆ 91; ತುರುವೇಕೆರೆ ಬಸ್‍ನಿಲ್ದಾಣದಿಂದ ಬೆಂಗಳೂರು, ರಾಯಚೂರು ಹಾಗೂ ವಿಜಾಪುರಕ್ಕೆ 111 ಪ್ರಯಾಣಿಕರು ತಮ್ಮ…

ಮುಂದೆ ಓದಿ...

ವಲಸೆ ಪ್ರಯಾಣಿಕರಿಗೆ ಆಹಾರ ವಿತರಿಸಿದ ಆರ್.ರಾಜೇಂದ್ರ

ತುಮಕೂರು:       ಲಾಕ್‍ಡೌನ್ ಹಿನ್ನಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕೂಲಿಕಾರ್ಮಿಕರಿಗೆ, ನಿರ್ಗತಿಕರಿಗೆ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ, ಹೋಂಗಾಡ್ರ್ಸ್‍ಗಳಿಗೆ ನಿರಂತರವಾಗಿ ಆಹಾರ ವಿತರಿಸುತ್ತಿರುವ ಆರ್. ರಾಜೇಂದ್ರ ನೇತೃತ್ವದ ಆರ್.ಆರ್. ಅಭಿಮಾನಿ ಬಳಗವು ಮಂಗಳವಾರ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರಿಗೆ ಆಹಾರ, ಮಕ್ಕಳಿಗೆ ಬಿಸ್ಕೆಟ್ ಮತ್ತು ನೀರು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.       ಪ್ರಯಾಣಿಕರಿಗೆ ಉಚಿತ ಊಟದ ಪಾಕೆಟ್ ಮತ್ತು ಕುಡಿಯುವ ನೀರನ್ನು ವಿತರಿಸಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಕೋವಿಡ್-19 ಲಾಕ್‍ಡೌನ್ ಆದಾಗಿನಿಂದ ಯುವ ಕಾಂಗ್ರೆಸ್ ವತಿಯಿಂದ ನಗರದಲ್ಲಿ ನಿರಂತರವಾಗಿ ಬೆಳಿಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ನಿನ್ನೆಯಿಂದ ನಗರದ ಕೆಎಸ್ ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು.        ಕೂಲಿಕಾರ್ಮಿಕರು…

ಮುಂದೆ ಓದಿ...

ಕೊವಿಡ್-19 ನಿರ್ವಹಣೆ ರಾಜ್ಯ ಸರಕಾರ ವಿಫಲ – ಮಾಜಿ ಡಿಸಿಎಂ ಆರೋಪ

ಕೊರಟಗೆರೆ:       ಕೋರಾ ಮತ್ತು ಪುರವಾರ ಜಿಪಂ ಕ್ಷೇತ್ರಕ್ಕೆ ಸರಕಾರದ ಆದೇಶದಂತೆ ಅನುಧಾನ ಹಂಚಿಕೆ ಮಾಡಿ.. ನೀವೇನು ನನ್ನ ಕೊರಟಗೆರೆ ಕ್ಷೇತ್ರಕ್ಕೆ ಏನು ದಾನ ಕೋಡಬೇಡಿ.. ಟಾಸ್ಕ್‍ಪೂರ್ಸ್ ಸಮಿತಿಯಿಂದ ನನ್ನ ಕೈಬಿಟ್ಟಿರುವ ಹಿಂದಿರುವ ಉದ್ದೇಶವೇನು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ತುಮಕೂರು ಗ್ರಾಮಾಂತರ ಮತ್ತು ಮಧುಗಿರಿ ತಹಶೀಲ್ದಾರ್, ಇಓ ವಿರುದ್ದ ಕಿಡಿಕಾರಿದರು.        ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ತುಮಕೂರು ಗ್ರಾಮಾಂತರ, ಕೊರಟಗೆರೆ ಹಾಗೂ ಮಧುಗಿರಿ ತಾಲೂಕು ಮಟ್ಟದ ಅಧಿಕಾರಿಗಳ ಕೋವಿದ್-19 ಮತ್ತು ಕುಡಿಯುವ ನೀರು ಪೂರೈಕೆಯ ತುರ್ತುಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.        ತುಮಕೂರು ಗ್ರಾಮಾಂತರ, ಕೊರಟಗೆರೆ ಮತ್ತು ಮಧುಗಿರಿ ತಾಲೂಕು ಬರಪೀಡಿತವೆಂದು ಸರಕಾರ ಘೋಷಣೆ ಮಾಡಿ ಪ್ರತಿ ತಾಲೂಕಿಗೆ 1ಕೋಟಿ ಅನುಧಾನ ಬಿಡುಗಡೆ ಮಾಡಿದೆ. ತುಮಕೂರು ಗ್ರಾಮಾಂತರದ ಕೋರಾ ಮತ್ತು ಮಧುಗಿರಿಯ ಪುರವಾರದಲ್ಲಿ ನೀರಿನ…

ಮುಂದೆ ಓದಿ...