ತಹಶೀಲ್ದಾರ್ ರನ್ನು ನಿಂದಿಸಿದ ಶಾಸಕ ಡಿ.ಸಿ.ಗೌರಿಶಂಕರ್ ; ಆಡಿಯೋ ವೈರಲ್!

ತುಮಕೂರು :       ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತುಮಕೂರು ತಹಶೀಲ್ದಾರ್ ಮೋಹನ್ ಕುಮಾರ್ ರವರ ಜೊತೆ ಅಸಂಬದ್ಧವಾಗಿ ಮಾತನಾಡಿದ ಆಡಿಯೋ ವೈರಲ್ ಆಗಿದೆ.       ಗ್ರಾಮಾಂತರ ಶಾಸಕ ಗೌರಿಶಂಕರ್ ತನ್ನ ನಾಲಿಗೆಯ ಮೇಲೆ ಹಿಡಿತವಿಲ್ಲದೆ ತಾಲ್ಲೂಕು ದಂಡಾಧಿಕಾರಿಯೊಂದಿಗೆ ಅಸಭ್ಯವಾಗಿ ಮಾತನಾಡಿದ್ದು ಶಾಸಕ ಸ್ಥಾನಕ್ಕೆ ಚ್ಯುತಿ ಬರುವಂತದ್ದಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಓರ್ವ ಶಾಸಕರಾಗಿ ತಾಲ್ಲೂಕು ದಂಡಾಧಿಕಾರಿ ಮೋಹನ್ ರವರೊಟ್ಟಿಗೆ ಹೇಗೆ ಮಾತನಾಡಬೇಕೆಂಬ ಪರಿವಿಲ್ಲದೆ ಏಕ ವಚನಗಳನ್ನು ಬಳಸಿ ಮಾತನಾಡಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವಂತಹ ಚರ್ಚೆಗಳಾಗುತ್ತಿವೆ.       ತಹಶೀಲ್ದಾರ್ ರವರೋರ್ವರನ್ನು ನೀವು ದನ ಕಾಯುತ್ತಿದ್ದೀರಾ ಎನ್ನುವ ಪದದೊಂದಿಗೆ ಆರಂಭ ಮಾಡಿ ಮುಂದೆ ಬಳಸಿದ ಪದಪುಂಜಗಳು ಶಾಸಕ ಸ್ಥಾನಕ್ಕೆ ಶೋಭೆ ತರುವಂತದ್ದಾಗಿರಲಿಲ್ಲ. ಶಾಸಕರಾದ ತಕ್ಷಣ ತನ್ನ ಸರ್ವಾಧಿಕಾರಿ ಧೋರಣೆಯಿಂದ ತಹಶೀಲ್ದಾರರೊಬ್ಬರನ್ನು ಆ ರೀತಿ ಮಾತನಾಡಲು ಆ ಕ್ಷೇತ್ರದ ಜನ ಆಯ್ಕೆ…

ಮುಂದೆ ಓದಿ...

ಹೃದಯಘಾತ : ಗೃಹರಕ್ಷಕ ದಳದ ಘಟಕಾಧಿಕಾರಿ ಸಾವು!

 ಕೊರಟಗೆರೆ:      ಅನಾರೋಗ್ಯದಿಂದ ಬಳಲುತ್ತೀದ್ದ ಕೊರಟಗೆರೆ ಪೊಲೀಸ್ ಠಾಣೆಯ ಗೃಹರಕ್ಷಕ ದಳದ ಘಟಕಾಧಿಕಾರಿ ಹನುಮಂತರಾಜು ಹೃದಯಘಾತದಿಂದ ತುಮಕೂರು ನಗರದ ಶ್ರೀದೇವಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಶುಕ್ರವಾರ ಮುಂಜಾನೆ ಜರುಗಿದೆ.       ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಗೌರಗಾನಹಳ್ಳಿ ಗ್ರಾಮದ ವಾಸಿಯಾದ ರಂಗಯ್ಯನ ಮಗನಾದ ಹನುಮಂತರಾಜು(35) ಮೃತ ದುರ್ದೈವಿ. ಪ್ರಸ್ತುತ ಈಗ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಘಟಕಾಧಿಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.       ಮೃತ ಹನುಮಂತರಾಜು ಏ.29ರ ಬುಧವಾರ ತಡರಾತ್ರಿ ಕೊರಟಗೆರೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ತುಮಕೂರಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ಸೂಚನೆಯಂತೆ ನಗರದ ಶ್ರೀದೇವಿ ಆಸ್ಪತ್ರೆಗೆ ದಾಖಲಾಗಿ ಮೇ.1ರ ತನಕ ಚಿಕಿತ್ಸೆ ಪಡೆದಿದ್ದಾರೆ. ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತೆಯಲ್ಲಿ ಮೃತಪಟ್ಟಿದ್ದಾರೆ.       ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ…

ಮುಂದೆ ಓದಿ...

ಕಾಡು ಮೊಲ ಚರ್ಮ ತೆಗೆಯುವ ವಿಡೀಯೋ ವೈರಲ್ : ಆರೋಪಿಗಳಿಬ್ಬರ ಬಂಧನ

ಕೊರಟಗೆರೆ:       ವನ್ಯಪ್ರಾಣಿ ಕಾಡುಮೊಲ ಬೇಟಿಯಾಡಿ ಚರ್ಮವನ್ನು ಸುಲಿಯುವ ವಿಡಿಯೋ ಮತ್ತು ಪೊಟೋ ಟಿಕ್‍ಟಾಕ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿವರ್ಗ ಸೆರೆಹಿಡಿದು ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುವ ಘಟನೆ ಶುಕ್ರವಾರ ನಡೆದಿದೆ.       ತುಮಕೂರು ಉಪಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಸಿ.ಗಿರೀಶ್ ಮಾರ್ಗದರ್ಶನ ಮತ್ತು ಮಧುಗಿರಿ ಸಹಾಯಕ ಉಪ ಸಂರಕ್ಷಣಾಧಿಕಾರಿ ಶ್ರೀನಿವಾಸ ಎನ್.ಯರಡೋಣಿ ಮತ್ತು ಕೊರಟಗೆರೆ ವಲಯ ಅರಣ್ಯಾಧಿಕಾರಿ ಸತೀಶ್‍ಚಂದ್ರ ನೇತೃತ್ವದ ತಂಡ ವಿನಯ್ ಮತ್ತು ವಿನಯಕುಮಾರ್ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.       ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ಕರಿದುಗ್ಗನಹಳ್ಳಿ ವಿನಯ ಮತ್ತು ಎಸ್.ಗೊಲ್ಲಹಳ್ಳಿ ವಿನಯಕುಮಾರ್ ಎಂಬಾತನು ಟಿಕ್‍ಟಾಕ್ ಪ್ರಚಾರದ ಹುಚ್ಚು ಮನಸ್ಸಿನಿಂದ ಮೊಲದ ಚರ್ಮ ಸುಳಿಯುವ ವಿಡಿಯೋ ಮತ್ತು ಪೊಟೋ ಹಾಕಿರುವ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿವರ್ಗ…

ಮುಂದೆ ಓದಿ...

ಪೊಲೀಸರ ಮೇಲಿನ ಕಾಳಜಿಗೆ ಅಭಿನಂದನೆ

ತುಮಕೂರು:       ಸಾರ್ವಜನಿಕ ಸೇವೆಯಲ್ಲಿ ಸದಾ ತೊಡಗಿಕೊಂಡಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಮುಖಗವಸು, ಕೈಗವಸು ಹಾಗೂ ಸ್ಯಾನಿಟೈಜರ್‍ಗಳನ್ನು ನೀಡುವ ಮೂಲಕ ಪೊಲೀಸರ ಮೇಲೆ ಕಾಳಜಿ ತೋರಿರುವ ಹೆಗ್ಗೆರೆ ಗ್ರಾಮಸ್ಥರಿಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಲಕ್ಷ್ಮಯ್ಯ ಅಭಿನಂದನೆ ಸಲ್ಲಿಸಿದರು.       ತಮ್ಮ ಠಾಣೆಯಲ್ಲಿ ಗುರುವಾರ ಹೆಗ್ಗೆರೆ ಗ್ರಾಮಸ್ಥರಿಂದ ಮುಖಗವಸು, ಕೈಗವಸು ಹಾಗೂ ಸ್ಯಾನಿಟೈಜರ್‍ಗಳನ್ನು ಸ್ವೀಕರಿಸಿ ಮಾತನಾಡಿದ ಅವರು ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಹಾಗೂ ರಕ್ಷಣಾ ದೃಷ್ಟಿಯಿಂದ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಹೆಗ್ಗೆರೆ ಗ್ರಾಮಸ್ಥರು ರಕ್ಷಣಾ ಸಾಮಗ್ರಿಗಳನ್ನು ನೀಡಿರುವುದು ಅಭಿನಂದನಾರ್ಹ ಎಂದರಲ್ಲದೆ ಕೊರೋನಾ ಕಾರ್ಯಾಚರಣೆಯಲ್ಲಿ ಪೊಲೀಸರೊಂದಿಗೆ ನಾವಿದ್ದೇವೆ ಎಂಬ ಗ್ರಾಮಸ್ಥರ ಕಾಳಜಿಯು ನಮಗೆ ಇನ್ನಷ್ಟು ಸ್ಫೂರ್ತಿದಾಯಕವಾಗಿದೆ ಎಂದರು.       ಈ ಸಂದರ್ಭದಲ್ಲಿ ಹೆಗ್ಗೆರೆ ಗ್ರಾಮದ ಮುಖಂಡರಾದ ಚಂದ್ರಶೇಖರ್‍ಗೌಡ, ಕೃಷ್ಣಯ್ಯ,…

ಮುಂದೆ ಓದಿ...

ವಿಕಲಚೇತನನಿಗೆ ತಾಲೂಕು ಆಡಳಿತದ ವತಿಯಿಂದ ಅಗತ್ಯ ಸಾಮಗ್ರಿ ವಿತರಣೆ

ತುಮಕೂರು:      ಅಗತ್ಯ ವಸ್ತುಗಳಿಲ್ಲದೆ ಸಮಸ್ಯೆಯಲ್ಲಿ ಸಿಲುಕಿದ್ದ ನಗರದ ಸರ್ಕಾರಿ ಪಾಲಿಟೆಕ್ನಿಕ್ ಬಳಿ ಪೆಟ್ಟಿಗೆ ಅಂಗಡಿಯಲ್ಲಿಯೇ ವಾಸವಿದ್ದು, ಚಮ್ಮಾರಿಕೆ ಕಾಯಕ ಮಾಡುತ್ತಿರುವ ವಿಕಲಚೇತನ ಮಂಜುನಾಥ ಅವರಿಗೆ ಇಂದು ತಾಲೂಕು ಆಡಳಿತದ ವತಿಯಿಂದ ದಿನನಿತ್ಯದ ದಿನಸಿ ಸಾಮಗ್ರಿಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಯಿತು ಎಂದು ಕಾರ್ಮಿಕ ಅಧಿಕಾರಿ ಸುಭಾಷ್ ಎಮ್ ಆಲದಕಟ್ಟಿ ತಿಳಿಸಿದ್ದಾರೆ.      ಕೋವಿಡ್ 19ಗೆ ಸಂಬಂಧಿಸಿದಂತೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸುಮಾರು 50 ವರ್ಷದ ಮಂಜುನಾಥ್ ಅವರು ಅಗತ್ಯ ವಸ್ತುಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆಂದು ಕಾರ್ಮಿಕ ಇಲಾಖೆಗೆ ಟ್ವಿಟರ್ ಮೂಲಕ ಬಂದ ದೂರಿಗೆ ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಪಂದಿಸಲಾಗಿದೆ.       ಅನಿರೀಕ್ಷಿತ ಲಾಕ್ ಡೌನ್‍ನಿಂದ ಮಂಜುನಾಥ ಅವರ ಜೀವನ ನಿರ್ವಹಣೆ ದುಸ್ತರವಾಗಿತ್ತು. ಅಲ್ಲದೆ ಅವರು ಪಡಿತರ ಚೀಟಿ ಹೊಂದಿಲ್ಲದಿರುವ ಮಾಹಿತಿಯೂ ಸಹ ಈ ಸಂದರ್ಭದಲ್ಲಿ ತಿಳಿದು ಬಂದಿದೆ. ಪಡಿತರ ಚೀಟಿಯೊಂದಿಗೆ ಸರ್ಕಾರದ ಇನ್ನಿತರ…

ಮುಂದೆ ಓದಿ...

ಕೊರೋನಾ ದೂರ ಮಾಡುವಲ್ಲಿ ಯೋಧರಂತೆ ಕಾರ್ಯನಿರ್ವಹಿಸಿ – ಸಿದ್ಧಲಿಂಗ ಸ್ವಾಮೀಜಿ

ತುಮಕೂರು:       ಯುವ ಸಮೂಹ ದೇಶ ಸಂಕಷ್ಟದಲ್ಲಿ ಇರುವ ಸಮಯದಲ್ಲಿ ದೇಶಕ್ಕೆ ಕೊಡುಗೆ ನೀಡಲು ಮುಂದಾಗಿರುವುದು ಶ್ಲಾಘನೀಯವಾದ ಕಾರ್ಯ ಎಂದು ಸಿದ್ಧಗಂಗಾ ಮಠಾಧೀಶರಾದ ಸಿದ್ಧಲಿಂಗಸ್ವಾಮೀಜಿ ತಿಳಿಸಿದರು.      ನಗರದ ಬೀರೇಶ್ವರ ಕನ್ವೆಷನ್ ಹಾಲ್ ನಲ್ಲಿ ಆರ್.ಆರ್.ಅಭಿಮಾನಿ ಬಳಗದ ವತಿಯಿಂದ ಕೊರೋನಾ ಸಂಕಷ್ಟದಲ್ಲಿರುವವರಿಗೆ ಆಹಾರ ವಿತರಣಾ ಕಾರ್ಯವನ್ನು ವೀಕ್ಷಿಸಿ ಮಾತನಾಡಿದ ಅವರು, ಯುವ ಸಮೂಹ ಒಟ್ಟಾಗಿ ಸಂಕಷ್ಟದಲ್ಲಿ ಇರುವವರ ಸೇವೆಗೆ ತೊಡಗಿರುವುದು ಸಂತಸದ ವಿಚಾರ, ಇಂತಕ್ಕೆ ಕಾರ್ಯಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.         ದೇಶವಷ್ಟೇ ಅಲ್ಲದೇ ಪ್ರಪಂಚಾದ್ಯಂತ ಕೊರೋನಾ ವ್ಯಾದಿ ಹಬ್ಬಿದ್ದು, ಇದರಿಂದ ನಿಜವಾಗಿಯೂ ತೊಂದರೆಗೆ ಒಳಗಾಗಿರುವುದು ಕಟ್ಟಡ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಅವರ ಹೊಟ್ಟೆ ತುಂಬಿಸುವ ಕೆಲಸಕ್ಕೆ ರಾಜೇಂದ್ರ ಅವರ ನೇತೃತ್ವದಲ್ಲಿ ಯುವಕರು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಾತ್ಮಗಾಂಧಿ ಅವರು ಹೇಳಿದಂತೆ ಯುವಕರು ಈ ದೇಶದ ಆಸ್ತಿ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು…

ಮುಂದೆ ಓದಿ...