ಹುಳಿಯಾರು : ಬೀಗ ಜಡಿದಿದ್ದ ಆಸ್ಪತ್ರೆ ಬಾಗಿಲ ಬಳಿ ಜ್ವರಪೀಡಿತನ ನರಳಾಟ

 ಹುಳಿಯಾರು:       ಕೊರೊನಾ ಸೋಂಕಿನ ಆತಂಕ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಜನರಲ್ಲಿ ಪ್ರಾಣಭಯ ಹುಟ್ಟಿಸಿದ್ದು ಸೂಕ್ತ ಚಿಕಿತ್ಸೆಗಾಗಿ ಸರ್ಕಾರದ ಮುಂದೆ ಕೈಚಾಚಿ ಕೂತಿದ್ದಾರೆ. ಆದರೂ ಸರ್ಕಾರ ಮಾತ್ರ ಈ ವಿಚಾರವನ್ನು ಇನ್ನೂ ಗಂಭೀರವಾಗಿ ಪರಿಗಣಿಸದೆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಇದಕ್ಕೆ ಚಿಕ್ಕನಾಯಕನಹಳ್ಳಿ ತಾಲೂಕಿನ ದೊಡ್ಡಎಣ್ಣೇಗೆರೆಯಲ್ಲಿ ಶನಿವಾರ ನಡೆದ ಘಟನೆ ಸ್ಪಷ್ಟ ನಿದರ್ಶನವಾಗಿದೆ. ಹೌದು, ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯ್ತಿಯ ಹುಲ್ಲೇನಹಳ್ಳಿಯ ನೀರುಘಂಟಿ ಲಕ್ಕಪ್ಪ ಅವರಿಗೆ ಸಿಕ್ಕಾಪಟ್ಟೆ ಜ್ವರ ಬಂದಿದೆ. ಪರಿಣಾಮ ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಶನಿವಾರ ಮಧ್ಯಾಹ್ನ ಆಗಮಿಸಿದ್ದಾರೆ. ಆದರೆ ಮಧ್ಯಾಹ್ನಕ್ಕೆ ಆಸ್ಪತ್ರೆಯ ಬೀಗ ಜಡಿದು ಸಿಬ್ಬಂದಿಗಳೆಲ್ಲರೂ ತೆರಳಿದ್ದಾರೆ. ಚಿಕಿತ್ಸೆ ಸಿ ಗದೆ ಬೀಗ ಜಡಿದ ಬಾಗಿಲ ಬಳಿಯೇ ಜ್ವರ ಪೀಡಿತ ಲಕ್ಕಪ್ಪ ನರಳಾಡಿದ್ದಾರೆ. ಈತನ ನರಳಾಟ ಗಮನಿಸಿದ ಮತ್ತೊಬ್ಬ ವಾಟರ್ ಮ್ಯಾನ್ ಕುಮಾರ್ ಓಡೋಡಿ ಬಂದು ಮೆಡಿಕಲ್ ಸ್ಟೋರ್‍ನಲ್ಲಿ…

ಮುಂದೆ ಓದಿ...

ತುಮಕೂರು: ಶಿರಾ ಕೋವಿಡ್ ಆಸ್ಪತ್ರೆಗೆ 50 ಆಕ್ಸಿಜನ್ ಹಾಸಿಗೆ

ತುಮಕೂರು:        ಜಿಲ್ಲೆಯಲ್ಲಿ ಕೋವಿಡ್- 19 2ನೇ ಅಲೆಯಿಂದಾಗಿ ಜನರು ತತ್ತರಿಸುತ್ತಿದ್ದು, ಆಕ್ಸಿಜನ್‍ಗಾಗಿ ಸೋಂಕಿತರು ಪರದಾಡುತ್ತಿದ್ದು, ಶಿರಾ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಅವರು ಶಿರಾ ಕೋವಿಡ್ ಆಸ್ಪತ್ರೆಗೆ ಹೆಚ್ಚುವರಿಯಾಗಿ 50 ಆಕ್ಸಿಜನ್ ಹಾಸಿಗೆಯನ್ನು ಸ್ವಂತ ಹಣದಲ್ಲಿ ಅಳವಡಿಸಲು ಮುಂದಾಗಿದ್ದಾರೆ.       ತುಮಕೂರು ನಗರವನ್ನು ಹೊರತುಪಡಿಸಿದರೆ ಶಿರಾ ತಾಲ್ಲೂಕಿನ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಶಿರಾ ತಾಲ್ಲೂಕು ಆಸ್ಪತ್ರೆಯಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದ್ದು, ಸರ್ಕಾರದಿಂದ 50 ಆಕ್ಸಿಜನ್ ಹಾಸಿಗೆಗಳ ವ್ಯವಸ್ಥೆಯನ್ನು ಮಾಡಿದ್ದು, ಸೋಂಕಿತರಿಗೆ ಸಮಸ್ಯೆಯಾಗಬಾರದು ಎನ್ನುವ ಮುಂದಾಲೋಚನೆಯಿಂದ ಶಾಸಕರು ಹೆಚ್ಚುವರಿಯಾಗಿ 50 ಆಕ್ಸಿಜನ್ ಹಾಸಿಗೆ ಅಳವಡಿಸಲು ಬೆಂಗಳೂರಿನ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ, ಹಾಸಿಗೆ ಅಳವಡಿಸಲು ಸಂಸ್ಥೆಯವರೊಂದಿಗೆ ಪರಿಶೀಲಿಸಿದರು.        ಈ ವೇಳೆ ಮಾತನಾಡಿದ ಶಾಸಕ ರಾಜೇಶ್‍ಗೌಡ, ಕೋವಿಡ್ 2ನೇ ಅಲೆಯಿಂದಾಗಿ ಸಾಮಾನ್ಯ ಜನರು ಕಷ್ಟವನ್ನು…

ಮುಂದೆ ಓದಿ...