ಕುಟುಂಬವಿಲ್ಲದೇ ಕೊರೊನಾ ಸೋಂಕಿತೆಯ ಅಂತ್ಯಕ್ರಿಯೆ

ಮಧುಗಿರಿ :       ತಾಲೂಕಿನ ಬಡವನಹಳ್ಳಿ ಯಲ್ಲಿ ಕೊರೊನಾ ಸೋಂಕಿತ ಮಹಿಳೆಯೊಬ್ಬರು ಮೃತಪಟ್ಟಿದ್ದು ಅಂತ್ಯ ಸಂಸ್ಕಾರಕ್ಕೆ ಸಂಬಂಧಿಕರು ಯಾರು ಬಾರದ ಕಾರಣ ಪಿಡಿಒ ಮತ್ತು ಗ್ರಾಮಲೆಕ್ಕಾಧಿಕಾರಿ ಜೊತೆಗೆ ಸ್ವಯಂಸೇವಕರೆ ಅಂತ್ಯಸಂಸ್ಕಾರ ನಡೆಸಿದ ಘಟನೆ ನಡೆದಿದೆ.       ಬಡವನಹಳ್ಳಿ ಗ್ರಾಮದ ಮಹಿಳೆಯೊಬ್ಬರು ಕೊರೊನಾ ಸೋಂಕಿನಿಂದ ಇಂದು ಮೃತ ಪಟ್ಟಿದ್ದು, ಸಂಬಂಧಿಕರು ಯಾರೂ ಅಂತಿಮ ಸಂಸ್ಕಾರ ನೆರವೇರಿಸಲು ಬರಲಿಲ್ಲ. ಅಲ್ಲದೆ ಇಂದು ರಂಜಾನ್ ಹಬ್ಬವಿದ್ದ ಕಾರಣ ಮಧುಗಿರಿಯಲ್ಲಿನ ಮುಸ್ಲಿಂ ಸಮುದಾಯದ ಸ್ವಯಂ ಸೇವಕರೂ ಸಹ ಬಾರದ ಕಾರಣ ಅದೇ ಗ್ರಾಮದ ಬಾವಿಮನೆ ರಂಗನಾಥ್, ನೂರ್ ಜಾನ್, ರವಿ, ಮೆಹಬೂಬ್ ಪಾಷ, ಇವರುಗಳು ಸ್ವಯಂಪ್ರೇರಿತ ರಾಗಿ ಬಂದು ಪಿಡಿಒ ಶಿಲ್ಪ, ಗ್ರಾಮಲೆಕ್ಕಾಧಿಕಾರಿ ನವೀನ್ ಕುಮಾರ್ ಮತ್ತು ಆರೋಗ್ಯ ಇಲಾಖೆಯ ರವರೊಂದಿಗೆ ಜೊತೆಗೂಡಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.       ಕಳೆದ ಭಾನುವಾರ ಇದೇ ಕುಟುಂಬದಲ್ಲಿ…

ಮುಂದೆ ಓದಿ...

18-44 ವರ್ಷ ವಯೋಮಾನದವರ ಕೋವಿಡ್ ಲಸಿಕಾಕರಣ ಸ್ಥಗಿತ

ತುಮಕೂರು:       ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಈಗಾಗಲೇ 18 ರಿಂದ 44 ವರ್ಷ ವಯೋಮಾನದವರಿಗೆ ನೀಡಲಾಗುತ್ತಿರುವ ಕೋವಿಶೀಲ್ಡ್ ಲಸಿಕಾಕರಣವನ್ನು ಮೇ14 ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಮೊದಲನೇ ಡೋಸ್ ಪಡೆದ 18 ರಿಂದ 44 ವರ್ಷದ ವಯೋಮಾನದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು 2ನೇ ಡೋಸ್ ಲಸಿಕೆ ಪಡೆಯಲು ಅರ್ಹರಿದ್ದರೆ ಅಂತಹ ಫಲಾನುಭವಿಗಳು 2ನೇ ಡೋಸ್ ಲಸಿಕೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.       ಎರಡನೇ ಡೋಸ್ ಲಸಿಕೆ ನೀಡುವ ಸಮಯದಲ್ಲಿ ಕೋವಿಶೀಲ್ಡ್ ಮೊದಲನೇ ಡೋಸ್ ಪಡೆದು 8 ವಾರಗಳನ್ನು ಪೂರ್ಣಗೊಳಿಸಿರುವ ಮತ್ತು ಕೋವ್ಯಾಕ್ಸಿನ್ ಮೊದಲನೇ ಡೋಸ್ ಪಡೆದು 6 ವಾರಗಳನ್ನು ಪೂರ್ಣಗೊಳಿಸಿರುವ ಫಲಾನುಭವಿಗಳಿಗೆ ಮೊದಲು ಲಸಿಕೆ ನೀಡಲಾಗುವುದೆಂದು ತಿಳಿಸಿದ್ದಾರೆ.

ಮುಂದೆ ಓದಿ...

ತುಮಕೂರು : ಕೋವಿಡ್ ಚಿಕಿತ್ಸಾ ವಿಧಾನ ಕುರಿತು ಪರಿಶೀಲನೆ

ತುಮಕೂರು:       ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧು ಸ್ವಾಮಿ ಅವರು ಜಿಲ್ಲಾಸ್ಪತ್ರೆ ಹಾಗೂ ಶ್ರೀ ದೇವಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಕೋವಿಡ್ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸಾ ವಿಧಾನ, ಆರೈಕೆ ಸೇರಿ ದಂತೆ ಔಷಧೋಪಚಾರದ ಬಗ್ಗೆ ಪರಿಶೀಲನೆ ನಡೆಸಿದರು.        ಸೋಂಕಿತರಿಗೆ ಯಾವ್ಯಾವ ಆಸ್ಪತ್ರೆಗಳಲ್ಲಿ ಎμÉ್ಟಷ್ಟು ಪ್ರಮಾಣದಲ್ಲಿ ಹಾಸಿಗೆ ನೀಡಲಾಗಿದೆ? ಸೋಂಕಿತರ ಪ್ರಮಾಣ ಎಷ್ಟಿದೆ? ಸಮಸ್ಯೆಯಿಲ್ಲದೆ ಚಿಕಿತ್ಸೆ ನೀಡಲಾಗುತ್ತಿದೆಯಾ? ಎಂಬ ಬಗ್ಗೆಯೂ ಮಾಹಿತಿ ಪಡೆದರು.       ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರ ಕಚೇರಿಯಲ್ಲಿ ಸಭೆ ನಡೆಸಿದ ಸಚಿವರು, ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಮಾಹಿತಿ ವಾರ್ ರೂಂ ಗೆ ತಲುಪಬೇಕು. ಇದರಿಂದ ಹಾಸಿಗೆ ಅವಶ್ಯಕತೆ ಇರುವವರಿಗೆ ತಕ್ಷಣ ಹಾಸಿಗೆ ವ್ಯವಸ್ಥೆ ಮಾಡಬಹುದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ ಪರೀಕ್ಷೆ ಪ್ರಮಾಣ ಕಡಿಮೆ ಯಾಗಬಾರದು. ನಿಗಧಿಯಂತೆಯೇ ಪರೀಕ್ಷೆಗಳು…

ಮುಂದೆ ಓದಿ...