ತುಮಕೂರು : ರಕ್ಷಕರನ್ನು ರಕ್ಷಿಸಿ ಅಭಿಯಾನಕ್ಕೆ ಚಾಲನೆ

 ತುಮಕೂರು :      ಕೊರೋನಾ ವಿರುದ್ಧ ಸೈನಿಕರಂತೆ ದಣಿವರಿಯದೆ ಹೋರಾಡುತ್ತಿರುವ ವೈದ್ಯರು, ಪೆÇಲೀಸರು ಸೇರಿದಂತೆ ಫ್ರಂಟ್ ಲೈನ್ ವರ್ಕರ್ಸ್ ಗಳ ಆರೋಗ್ಯ ರಕ್ಷಣೆಗಾಗಿ ಸ್ಪಿರುಲಿನಾ ಫೌಂಡೇಶನ್ ವತಿಯಿಂದ ಕೊರಟಗೆರೆ ತಾಲೂಕಿನ ಪ್ರವಾಸಿ ಮಂದಿರದಲ್ಲಿಂದು ಹಮ್ಮಿಕೊಂಡಿದ್ದ ‘ರಕ್ಷಕರನ್ನು ರಕ್ಷಿಸಿ’ ಅಭಿಯಾನಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಚಾಲನೆ ನೀಡಿದರು.        ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕೋವಿಡ್ -19 ವಿರುದ್ಧ ಹೋರಾಡುತ್ತಿರುವ ಯೋಧರ ಆರೋಗ್ಯ ರಕ್ಷಣೆಗಾಗಿ ಸ್ಪಿರುಲಿನಾ ಫೌಂಡೇಶನ್ ಪ್ರಾರಂಭಿಸಿರುವ ಅಭಿಯಾನ ಉತ್ತಮವಾಗಿದೆ. ವೆಂಟಿಲೇಟರ್, ಆಮ್ಲಜನಕ ಸಿಲಿಂಡರ್, ಹಾಸಿಗೆಗಳನ್ನು ಖರೀದಿಸಬಹುದು, ಆದರೆ ಶಕ್ತಿಯುತ ವೈದ್ಯರು, ದಾದಿಯರು ಸೇರಿದಂತೆ ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಹೋರಾಡುತ್ತಿರುವವರನ್ನು ವಾರಾಂತ್ಯದಲ್ಲಿ ಬದಲಾಯಿಸಲು ಅಥವಾ ಹೊಸದಾಗಿ ಉತ್ಪನ್ನ ಮಾಡಲು ಸಾಧ್ಯವಿಲ್ಲ. ಹಾಗಾಗಿ ಅವರ ಆರೋಗ್ಯ ರಕ್ಷಣೆ ಮುಖ್ಯವಾಗಿದೆ. ಕಳೆದ ಒಂದು ವರ್ಷದಿಂದ ದಣಿವರಿಯದೇ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಉತ್ತಮ ಸೌಲಭ್ಯಗಳನ್ನು…

ಮುಂದೆ ಓದಿ...

ನರೇಗಾ ಯೋಜನೆ : ಸಿಇಓ ಅವರಿಂದ ಕಾಮಗಾರಿ ಪರಿಶೀಲನೆ

ತುಮಕೂರು:        ಕೊರಟಗೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಪ್ರಗತಿಯಲ್ಲಿರುವ ಮಹಾತ್ಮಗಾಂಧಿ ನರೇಗಾ ಯೋಜನೆಯ ಕಾಮಗಾರಿಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಕೆ.ವಿದ್ಯಾಕುಮಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.        ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ಜೆಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಮನೆ ತೋಟ ಗ್ರಾಮದ ಸಂಜೀವಮ್ಮ ಕೋಂ ವೆಂಕಟಗಿರಯಪ್ಪನವರ ಜಮೀನಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಕೃಷಿಹೊಂಡ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಅವರು, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿಗಧಿತ ಸಮಯಕ್ಕೆ ಕೂಲಿ ಹಣ ಪಾವತಿಯಾಗಿರುವ ಬಗ್ಗೆ ಕೂಲಿ ಕಾರ್ಮಿಕರೊಂದಿಗೆ ಚರ್ಚೆ ನಡೆಸಿದರು. ಅಲ್ಲದೆ ಗ್ರಾಮೀಣ ಭಾಗಕ್ಕೆ ಬೆಂಗಳೂರು ಸೇರಿದಂತೆ ಇತರೆ ನಗರ ಪ್ರದೇಶದಿಂದ ಯಾರಾದರೂ ಗ್ರಾಮಗಳಿಗೆ ಬಂದಿದ್ದರೆ, ಅವರಿಗೆ ಉದ್ಯೋಗ ಚೀಟಿ ಇದ್ದಲಿ ಅವರಿಗೂ ನರೇಗಾ ಅಡಿ ಕೆಲಸ ನೀಡಲಾಗುವುದು. ಇದನ್ನು ಗ್ರಾಮೀಣ ಭಾಗದ ಜನ ಸದುಪಯೋಗ…

ಮುಂದೆ ಓದಿ...

ಕೋವಿಡ್ ಲಸಿಕೆ ವೇಳೆ ಕಾಣೆಯಾದ ಸಾಮಾಜಿಕ ಅಂತರ

 ಚಿಕ್ಕನಾಯಕನಹಳ್ಳಿ:       ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಜನ ಮುಗಿ ಬಿದ್ದಿದ್ದು, ಸಾಮಾಜಿಕ ಅಂತರವಿಲ್ಲದೆ ಲಸಿಕೆ ನೀಡಲಾಗುತ್ತಿತ್ತು.       ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜನರಿಗೆ ಲಸಿಕೆ ಪಡೆಯುವ ಬಗ್ಗೆ ಆಸಕ್ತಿಬಂದಿದೆ. ಈ ಕಾರಣದಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಲು ದಿನದಿಂದ ದಿನಕ್ಕೆ ಹೆಚ್ಚು ಜನ ಬರಲಾರಂಭಿಸಿದ್ದಾರೆ. ಬುಧವಾರವೂ ಸಹ ಸಾರ್ವಜನಿಕ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ಲಸಿಕೆ ಪಡೆಯಲು ಆಗಮಿಸಿದ್ದರು. ಒಬ್ಬರಿಗೆ ಲಸಿಕೆ ಹಾಕುವುದಕ್ಕೆ ಸಮಯ ಹಿಡಿಯುತ್ತದೆ, ಹೆಸರು, ವಿಳಾಸ, ವಿವರ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಿಕೊಂಡು ಲಸಿಕೆ ನೀಡಲು ಕನಿಷ್ಠ 15 ನಿಮಿಷವಾದರೂ ಬೇಕಾಗುತ್ತದೆ. ಅದರಂತೆ ಇಂದು ಲಸಿಕಾ ಕೊಠಡಿಯಲ್ಲಿ ಜನರ ಒತ್ತಡ ಜಾಸ್ತಿಯಿತ್ತು, ಇಲ್ಲಿ ಸಮಾಜಿಕ ಅಂತರವೂ ಇರಲಿಲ್ಲ, ಅಲ್ಲಿ ನಿರ್ವಹಣೆಗೆ ಇದ್ದ ಒಬ್ಬರೇ ಪೊಲೀಸ್…

ಮುಂದೆ ಓದಿ...