ತುಮಕೂರು: ಗ್ರಾಮಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ -ಡಿಸಿ

        ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ತಡೆಯಲು ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸೋಂಕು ಮತ್ತು ಸಂಪರ್ಕಿತರ ಪತ್ತೆ, ಕೋವಿಡ್ ಪರೀಕ್ಷೆ, ಕೋವಿಡ್ ಕೇರ್ ನಿರ್ವಹಣೆ ಮತ್ತು ಸೋಂಕಿತರನ್ನು ಕೇರ್‍ಗೆ ಸ್ಥಳಾಂತರಿಸುವುದು, ತ್ವರಿತ ಚಿಕಿತ್ಸೆ, ಜನಜಾಗೃತಿ ಕಾರ್ಯವನ್ನು ಕಟ್ಟುನಿಟ್ಟಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಸೂಚಿಸಿದರು.       ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವೀಡಿಯೋ ಕಾನ್ಫರೆನ್ಸ್ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಪ್ರತಿ ಗ್ರಾಮಗಳಲ್ಲೂ ಪರಿಣಾಮಕಾರಿಯಾಗಿ ಮಾರ್ಗಸೂಚಿಗಳನ್ನು ಅನುμÁ್ಠನಗೊಳಿಸುವುದರೊಂದಿಗೆ ಸೋಂಕನ್ನು ನಿಯಂತ್ರಣಕ್ಕೆ ತರಬೇಕು ಎಂದು ನಿರ್ದೇಶಿಸಿದರು.        ಈವರೆಗೆ ಗ್ರಾಮ ಪಂಚಾಯತ್ ಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗುತ್ತಿತ್ತು. ಇನ್ನು ಮುಂದೆ ಗ್ರಾಮಗಳನ್ನೂ ಹಾಟ್ ಸ್ಪಾಟ್ ಪ್ರದೇಶಗಳೆಂದು ಗುರುತಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. 20ಕ್ಕಿಂತ ಹೆಚ್ಚು ಪ್ರಕರಣಗಳಿರುವ ಗ್ರಾಮವನ್ನು ರೆಡ್…

ಮುಂದೆ ಓದಿ...

ಸೋಂಕಿತರಿಗೆ ಚಿಕಿತ್ಸೆ ಜೊತೆ ಮಾನಸಿಕ ಧೈರ್ಯ ತುಂಬುವಂತೆ ಸಲಹೆ

ಕೊರಟಗೆರೆ:       ಕೊರೋನಾ ರೋಗಿಗಳಿಗೆ ಚಿಕಿತ್ಸೆ ಯೊಂದಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಿ ಎಂದು ಶಾಸಕ ಡಾ.ಜಿ.ಪರಮೇಶ್ವರ್ ವೈದ್ಯರುಗಳಿಗೆ ಸಲಹೆ ನೀಡಿದರು.       ಕೋವಿಡ್ ರೋಗಕ್ಕೆ ಸಂಬಂಧಿಸಿದಂತೆ, ತಹಶೀಲ್ದಾರ್, ತಾಲ್ಲೂಕು ವೈದ್ಯಾದಿಕಾರಿ, ಪಿಹೆಚ್‍ಸಿ ವೈದ್ಯರುಗಳು, ಅಧಿಕಾರಿಗಳ ವೈಯಕ್ತಿಕ ಸಂಭಾಷಣೆಯನ್ನು ವೀಡಿಯೋ ಸಂವಾದದ ಮುಖಾಂತರ ಮಾಹಿತಿ ಪಡೆದು ಆದೇಶಿಸಿದರು. ತಾಲ್ಲೂಕಿನಲ್ಲಿ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಕಾನೂನು ಮುಖಾಂತರ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿ, ಕೊರೋನಾ ರೋಗಿಗಳು ಸಾವಿನಿಂದ ತಪ್ಪಿಸಲು ಸಾಕಷ್ಟು ಮುಂಜಾಗ್ರತಾ ಕ್ರಮ ಮತ್ತು ಅಗತ್ಯ ಚಿಕಿತ್ಸೆಯನ್ನು ನೀಡುವಂತೆ ರೋಗಿಗಳ ಬಗ್ಗೆ ನಿರಂತರ ನಿಗಾ ಇಡುವಂತೆ ಆದೇಶಿಸಿದರು.       ವೈದ್ಯರು ಕೊರೋನಾ ರೋಗಿಗಳಿಗೆ ಚಿಕಿತ್ಸೆಯೊಂದಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಲೇ ಬೇಕಿದ್ದು ಇದರಿಂದಾಗಿ ಸೋಂಕಿತರು ಅರ್ಧಗುಣವಾದಂತೆ ಆಗುತ್ತದೆ ಎಂದು ಸಲಹೆ ನೀಡಿದ್ದಾರೆ. ಪ್ರಸ್ತುತ ಆಸ್ಪತ್ರೆಗಳಲ್ಲಿ ಆಮ್ಲಜನಕದ ದಾಸ್ತಾನು ಬಗ್ಗೆ…

ಮುಂದೆ ಓದಿ...

ತುಮಕೂರು : ವೈದ್ಯಕೀಯ ಸೌಲಭ್ಯಗಳ ಕೊರತೆ ನೀಗಿಸಲು ಸಂಸದರ ಮನವಿ

ತುಮಕೂರು:        ಜಿಲ್ಲೆಯಲ್ಲಿ ವ್ಯಾಕ್ಸಿನ್ ಮತ್ತು ಅಕ್ಸಿಜನ್ ಕೊರತೆಯಿದ್ದು, ಇದರ ಬಗ್ಗೆ ಗಮನಹರಿಸಲು ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಸೂಚಿಸುವಂತೆ ಸಂಸದ ಜಿ.ಎಸ್.ಬಸವರಾಜು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಮನವಿ ಮಾಡಿದ್ದಾರೆ.       ತಮ್ಮ ಗೃಹ ಕಚೇರಿಯಲ್ಲಿ ಜೆ.ಪಿ.ನಡ್ಡಾ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಬೆಳಗಾವಿ ನಂತರದ ಎರಡನೇ ಅತಿ ದೊಡ್ಡ ಜಿಲ್ಲೆ ತುಮಕೂರು, 11 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಬೆಂಗಳೂರು ನಗರಕ್ಕೆ ಹತ್ತಿರವಿದ್ದು, ಸರಕಾರ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದ ಬಹುತೇಕರು ಜಿಲ್ಲೆಗೆ ವಾಪಸ್ಸಾಗಿದ್ದೇ ಕೋವಿಡ್ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ. ಜಿಲ್ಲಾಡಳಿತ ನಿರಂತರ ಶ್ರಮಪಟ್ಟು ಕೋವಿಡ್ ಹರಡದಂತೆ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ತುಮಕೂರು ನಗರವೂ ಸೇರಿದಂತೆ ಜಿಲ್ಲೆಯಲ್ಲಿ 6ಕ್ಕೂ ಹೆಚ್ಚು ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಲಾಗಿದೆ. ರೋಗಲಕ್ಷಣಗಳಿಲ್ಲದ ಕೋವಿಡ್ ಸೋಂಕಿತರಿಗೆ ಇಲ್ಲಿ ಆರೈಕೆ ಮಾಡಲಾಗುತ್ತಿದೆ.ಉಳಿದಂತೆ ಶಾಸ್ವಕೋಶಕ್ಕೆ ರೋಗ ತಲುಗಿದ ವ್ಯಕ್ತಿಗಳನ್ನು…

ಮುಂದೆ ಓದಿ...