ಗುಬ್ಬಿ: ವಲಸಿಗರಿಂಗ ಹೆಚ್ಚುತ್ತಿರುವ ಕೊರೋನಾ ಸೋಂಕು

ಗುಬ್ಬಿ:       ಕರೋನಾ ಮಹಾಮಾರಿಯು ಗುಬ್ಬಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಇರುವುದು ಒಂದೆಡೆಯಾದರೆ ಕಸಬಾ ಹೋಬಳಿಯ ಹೇರೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಮೊದಲು ಗ್ರಾಮದಲ್ಲಿ ಸುಮಾರು 35 ಜನ ಕೋವಿಡ್ ಖಾಯಿಲೆಗೆ ತುತ್ತಾಗಿದ್ದಾರೆ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ತಿಳಿಸಿದ್ದಾರೆ.       ಹೇರೂರು ಗ್ರಾಮ ಪಂಚಾಯ್ತಿಗೆ ಎಂಟು ಗ್ರಾಮಗಳು ಸೇರಿದ್ದು ಸುಮಾರು 8216 ಜನಸಂಖ್ಯೆಯುಳ್ಳ ಈ ಗ್ರಾಮ ಪಂಚಾಯ್ತಿಗೆ ಮದಲೂರು ಗ್ರಾಮವು ಸೇರಿದ್ದು 1035 ಜನಸಂಖ್ಯೆಯುಳ್ಳ ಗ್ರಾಮವಾಗಿದ್ದು ಪ್ರತಿ ಮನೆಗೆ ಮೂರು ಬಾರಿ ಸ್ಯಾನಿಟೈಸರ್ ಮಾಡಿಸಲಾಗಿತ್ತು. ಬೇರೆ ಬೇರೆ ನಗರಗಳಿಂದ ಈ ಗ್ರಾಮಕ್ಕೆ ಬಂದಂತಹ ವ್ಯಕ್ತಿಗಳಿಂದ ರೋಗವು ಹೆಚ್ಚಾಗುತ್ತಿದ್ದು ಪ್ರತಿಯೊಂದು ಮನೆಯ ಎಲ್ಲಾ ವ್ಯಕ್ತಿಗಳಿಂದ ಗಂಟಲು ದ್ರವವನ್ನು ತೆಗೆಯುತ್ತಿದ್ದೇವೆ. ಅವಶ್ಯಕತೆ ಇರುವ ವ್ಯಕ್ತಿಗಳನ್ನು ಕ್ವಾರಂಟೈನ್‍ನಲ್ಲಿ ಇರಿಸಿ ಹಾಗೂ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು ರೋಗವು ಉಲ್ಬಣಗೊಂಡ ಕಾರಣ…

ಮುಂದೆ ಓದಿ...

ತುಮಕೂರು:121 ಗ್ರಾ.ಪಂ. ಹಾಟ್ ಸ್ಪಾಟ್ ಪ್ರದೇಶಗಳು

ತುಮಕೂರು:      ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿರುವ 121 ಗ್ರಾಮ ಪಂಚಾಯತಿಗಳನ್ನು ಹಾಟ್ ಸ್ಪಾಟ್ ಪ್ರದೇಶಗಳೆಂದು ಗುರುತಿಸಿ ಸೋಂಕಿನ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಿಳಿಸಿದ್ದಾರೆ.       ತುಮಕೂರು ತಾಲೂಕಿನ ಬೆಳಗುಂಬ, ಕೆಸ್ತೂರ್, ತಿಮ್ಮರಾಜನಹಳ್ಳಿ, ಕೋರಾ, ಅರಕೆರೆ, ಸ್ವಾಂದೇನಹಳ್ಳಿ, ಊರುಕೆರೆ, ಬೆಳ್ಳಾವಿ, ದೊಡ್ಡನಾರವಂಗಲ, ಬುಗುಡನಹಳ್ಳಿ, ಮಲ್ಲಸಂದ್ರ, ಸೀತಕಲ್ಲು, ಹಿರೇಹಳ್ಳಿ, ಮೈದಾಳ, ಕೆಸರುಮಡು, ಹೊನ್ನುಡಿಕೆ, ಹೊಳಕಲ್, ಪಾಲಸಂದ್ರ, ಹರಳೂರು, ಹೆತ್ತೇನಹಳ್ಳಿ, ಹೆಬ್ಬೂರು, ಕನಕೊಪ್ಪೆ, ಗಂಗೋನಹಳ್ಳಿ,ಸಿರಿವರ, ಬಳ್ಳಗೆರೆ, ನಾಗವಲ್ಲಿ, ಹೆಗ್ಗೆರೆ ಗ್ರಾಮ ಪಂಚಾಯತಿಗಳನ್ನು ಹಾಟ್ ಸ್ಪಾಟ್ ಪ್ರದೇಶಗಳೆಂದು ಘೋಷಿಸಲಾಗಿದೆ. ಅದರಂತೆಯೇ, ಗುಬ್ಬಿ ತಾಲೂಕಿನ ಹಾಗಲವಾಡಿ, ಮಂಚಲದೊರೆ, ಹೊಸಕೆರೆ, ಚೇಳೂರು, ಬಿದರೆ, ಮೂಗನಾಯಕನಕೋಟೆ, ದೊಡ್ಡಗುಣಿ, ಮಾರಶೆಟ್ಟಿಹಳ್ಳಿ, ನಿಟ್ಟೂರು, ಅಮ್ಮನಗಟ್ಟ, ಎಂಎಚ್.ಪಟ್ನ, ಹಡಗೂರು, ಹೇರೂರು, ಕಡಬ, ಜಿ.ಹೊಸಹಳ್ಳಿ, ಸಿ.ಎಸ್.ಪುರ. ಶಿರಾ ತಾಲೂಕಿನ ತಡಕಲೂರು, ದೊಡ್ಡಬಣಗೆರೆ, ಹುಲಿಕುಂಟೆ, ದ್ವಾರನಕುಂಟೆ, ಬೇವಿನಹಳ್ಳಿ, ಬರಗೂರು, ಹಂದಿಕುಂಟೆ,…

ಮುಂದೆ ಓದಿ...

ತುಮಕೂರು: ಹಾಸಿಗೆಗಳನ್ನು ಕಾಯ್ದಿರಿಸಲು ವೈದ್ಯರ ನೇಮಕ

ತುಮಕೂರು:       ಕೋವಿಡ್-19 ಸೋಂಕಿತರಿಗೆ ಹಾಸಿಗೆಗಳನ್ನು ಕಾಯ್ದಿರಿಸುವ ಸಂಬಂಧ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ವೈದ್ಯರನ್ನು ನಿಯೋಜಿಸಿದ್ದಾರೆ.       ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿದಿನ 2000- 2500 ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ಈ ಪೈಕಿ ಹೆಚ್ಚಿನ ಸೋಂಕಿತರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಆಕ್ಸಿಜನ್ ಪ್ರಮಾಣ ಕಡಿಮೆಯಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಸದರಿ ಸೋಂಕಿತರನ್ನು ವೈದ್ಯಕೀಯ ವಿದ್ಯಾಲಯ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಸರ್ಕಾರದ ನಿರ್ದೇಶನದಂತೆ ಪ್ರತ್ಯೇಕವಾಗಿ ವಿಭಾಗವಾರು ಹಾಸಿಗೆಗಳನ್ನು ಕಾಯ್ದಿರಿಸಬೇಕು. ವೈದ್ಯಕೀಯ ವಿದ್ಯಾಲಯಗಳಲ್ಲಿ ಒಟ್ಟು ಹಾಸಿಗೆಗಳ ಪೈಕಿ ಶೇ.75% ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇ.50% ರಷ್ಟು ಹಾಸಿಗಗಳನ್ನು ಕಾಯ್ದಿರಿಸಬೇಕು. ಜಿಲ್ಲಾ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಿ ಕ್ರಮ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಈಗಾಗಲೇ ಅಧಿಕಾರಿಗಳು ಖಾಸಗಿ ವೈದ್ಯಕೀಯ ವಿದ್ಯಾಲಯ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19…

ಮುಂದೆ ಓದಿ...