ನಿಗಧಿಪಡಿಸಿದ ಪ್ರಮಾಣದಂತೆ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಲು ಸೂಚನೆ

 ತುಮಕೂರು:       ಜಿಲ್ಲೆಗೆ ನಿಗಧಿಪಡಿಸಿರುವ ಪ್ರಮಾಣದಂತೆ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಮಾಡುವಂತೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸರಬರಾಜು ಮತ್ತು ವಿತರಕರಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಕೃಷಿ ಚಟುವಟಿಕೆ ಆರಂಭದ ಹಿನ್ನೆಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಿದ್ಧತೆ ಕುರಿತು ಗೂಗಲ್ ಮೀಟ್ ಮೂಲಕ ಇತ್ತೀಚೆಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸರಬರಾಜುದಾರರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರೈತರಿಗೆ ಬೀಜ ಮತ್ತು ರಸಗೊಬ್ಬರ ವಿತರಣೆ ಸಂದರ್ಭದಲ್ಲಿ ಕೊರೋನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಕೋವಿಡ್ ತಡೆಗಟ್ಟಲು ಮುಂಜಾಗ್ರತೆಯಾಗಿ ಸ್ಯಾನಿಟೈಜರ್‍ಗಳನ್ನು ಬಳಸಬೇಕು. ಒಬ್ಬ ರೈತರಿಂದ ಮತ್ತೊಬ್ಬ ರೈತರ ನಡುವೆ ಅಂತರ ಕಾಪಾಡುವಂತೆ ಮತ್ತು ಮಾಸ್ಕ್ ಬಳಸುವಂತೆ ಸೂಚಿಸಬೇಕು ಎಂದರಲ್ಲದೆ ಸ್ವಚ್ಛತೆ ಕಾಪಾಡಲು ರೈತರಿಗೆ ಸಾಬೂನು ಮತ್ತು ನೀರಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಗೆ ನಿಗಧಿಪಡಿಸಿರುವ ಕಾಪು…

ಮುಂದೆ ಓದಿ...

ತುಮಕೂರು : ದಾನಿಗಳಿಂದ 300 ಆಮ್ಲಜನಕ ಸಾಂದ್ರಕ ಕೊಡುಗೆ

ತುಮಕೂರು:      ಕೋವಿಡ್-19 ನಿರ್ವಹಣೆ ದೃಷ್ಟಿಯಿಂದ ಕ್ವಾರಿ, ಕ್ರಷರ್, ರೈಸ್ ಮಿಲ್ ಮಾಲೀಕರು ಸುಮಾರು 300 ಆಮ್ಲಜನಕ ಸಾಂದ್ರಕಗಳ ನೆರವು ನೀಡಿದ್ದು, ಇದರಿಂದ ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 600 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆಯಾದಂತಾಗಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ತುಮಕೂರು ಮಚೆರ್ಂಟ್ ಕ್ರೆಡಿಟ್ ಕೋ-ಆಪರೇಟಿವ್, ಜಿಲ್ಲಾ ಜಲ್ಲಿ ಕ್ರಷರ್ ಆಸೋಸಿಯೇಷನ್, ಜಿಲ್ಲಾ ರೈಸ್ ಮಿಲ್ ಆಸೋಸಿಯೇಷನ್ ಹಾಗೂ ಮತ್ತಿತರ ಕೈಗಾರಿಕೆ ಮತ್ತು ಸಂಘ ಸಂಸ್ಥೆಗಳ ವತಿಯಿಂದ ನೀಡಿದ್ದ 300 ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿ ಮಾತನಾಡಿದ ಅವರು, ಆಮ್ಲಜನಕ ಸಾಂದ್ರಕಗಳ ನೆರವಿನಿಂದಾಗಿ ಕೋವಿಡ್ ನಿರ್ವಹಣೆಗೆ ಹೆಚ್ಚು ಸಹಕಾರಿಯಾಗಿದೆ ಎಂದು ತಿಳಿಸಿದರು. ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ದೊಡ್ಡ ಮಟ್ಟದ ಸಹಕಾರ ದಾನಿಗಳಿಂದ ಬರುತ್ತಿದ್ದು, ಇದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದ ಸಚಿವರು ಜಿಲ್ಲೆಯ ಪರವಾಗಿ,…

ಮುಂದೆ ಓದಿ...

ತುಮಕೂರು : ಬಾಲ್ಯವಿವಾಹ ಮಾಡದಂತೆ ಡಿಸಿ ಎಚ್ಚರಿಕೆ

ತುಮಕೂರು: ಕೋವಿಡ್-19 ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡಿ ಯಾರೂ ಬಾಲ್ಯವಿವಾಹಕ್ಕೆ ಮುಂದಾಗಬಾರದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಪೋಷಕರಲ್ಲಿ ಮನವಿ ಮಾಡಿದ್ದಾರೆ. ಕೊರೋನಾ ಲಾಕ್‍ಡೌನ್, ಕಫ್ರ್ಯೂ ಸಂದರ್ಭದಲ್ಲಿ ಬಹುತೇಕ ವಿವಾಹಗಳನ್ನು ಮನೆಯ ಹತ್ತಿರ ಮಾಡಲಾಗುತ್ತಿದೆ. ಕೆಲವರು ಈ ವೇಳೆ ಯಾರಿಗೂ ತಿಳಿಯದಂತೆ ಬಾಲ್ಯ ವಿವಾಹವನ್ನು ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಸುಖ ಜೀವನ ಹಾಳಾಗುತ್ತದೆ. ಆದ್ದರಿಂದ ಗಂಡಿಗೆ 21 ಹಾಗೂ ಹೆಣ್ಣಿಗೆ 18 ವರ್ಷ ತುಂಬುವವರೆಗೂ ವಿವಾಹ ಮಾಡಬಾರದು. ಬಾಲ್ಯವಿವಾಹದಿಂದ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಅವರ ಜೀವನ ನರಕವಾಗುತ್ತದೆ ಎಂದು ತಿಳಿಸಿದ್ದಾರೆ. ಇದು ಮುಂದೆ ಹುಟ್ಟುವ ಮಕ್ಕಳ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ರೀತಿ ಕ್ರಮ ಕೈಗೊಳ್ಳಲಾಗಿದೆ. ಪೋಷಕರು ಕೋವಿಡ್-19 ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಮಕ್ಕಳಿಗೆ ಬಾಲ್ಯ ವಿವಾಹ ಮಾಡಲು ಮುಂದಾಗಬಾರದು. ಬಾಲ್ಯವಿವಾಹ ಮಾಡುವುದು ಅಪರಾಧ. ಅಪ್ರಾಪ್ತ ಹುಡುಗಿಯನ್ನು…

ಮುಂದೆ ಓದಿ...

ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಪಾಲಿಕೆ ಮೇಯರ್ ಚಾಲನೆ

ತುಮಕೂರು:         ನಗರದ ಹನುಮಂತಪುರ ಶ್ರೀ ಕೊಲ್ಲಾಪುರದಮ್ಮ ಸಮುದಾಯ ಭವನದ ಆವರಣದಲ್ಲಿ ಉಚಿತ ಉಪಹಾರ ವಿತರಣೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಉಚಿತ ಮೊದಲನೇ ಲಸಿಕಾ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಉಪಮೇಯರ್ ನಾಜೀಮಾಬೀ, ಆಯುಕ್ತರಾದ ರೇಣುಕಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್, ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ಧರಣೇಂದ್ರಕುಮಾರ್, ಸದಸ್ಯರಾದ ಟಿ.ಜಿ.ನರಸಿಂಹಮೂರ್ತಿ, ಎ.ಶ್ರೀನಿವಾಸ್, ಶ್ರೀನಿವಾಸಮೂರ್ತಿ ಮುಂತಾದವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಟಿ.ಜಿ.ನರಸಿಂಹಮೂರ್ತಿ ಮಾತನಾಡಿ, ಲಾಕ್‍ಡೌನ್‍ನಿಂದ ನಗರದ ಹನುಮಂತಪುರ ಹಾಗೂ ಸುತ್ತಮುತ್ತಲಿರುವ ಬಡವರು, ನಿರ್ಗತಿಕರು ಊಟದ ಸಮಸ್ಯೆ ಎದುರಿಸುತ್ತಿರುವ ಹಿನ್ನಲೆಯಲ್ಲಿ ಶ್ರೀ ಕೊಲ್ಲಾಪುರದಮ್ಮ ಸಮುದಾಯ ಭವನ ಸಮಿತಿ ವತಿಯಿಂದ ಬೆಳಗಿನ ಉಚಿತ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ಶ್ರೀ ಕೊಲ್ಲಾಪುರದಮ್ಮ ಸಮುದಾಯ ಭವನದ ವತಿಯಿಂದ ಈ ಹಿಂದೆ ಹಲವಾರು ಸಾಮಾಜಿಕ ಸೇವಾ…

ಮುಂದೆ ಓದಿ...

15 ದಿನಗಳಲ್ಲಿ ಸಹಜ ಸ್ಥಿತಿಗೆ ರಾಜ್ಯ : ಸಚಿವ ಜೆ.ಸಿ.ಮಧುಸ್ವಾಮಿ

ಹುಳಿಯಾರು: ಲಾಕ್‍ಡೌನ್ ಪರಿಣಾಮ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣ ಕ್ಷಿಣಿಸುತ್ತಿದ್ದು ಹದಿನೈದು ದಿನಗಳಲ್ಲಿ ಶೇ.5 ಕ್ಕಿಂತ ಕಡಿಮೆಗೆ ಬರಲಿದೆ. ಆಗ ಯಾವುದಕ್ಕೂ ನಿರ್ಬಂಧವಿಲ್ಲದೆ ಸಹಜ ಸ್ಥಿತಿಗೆ ರಾಜ್ಯ ಬರಲಿದೆ. ಆದರೆ ಕೊರೋನಾ ವೈರಸ್ ಮಾತ್ರ ಇರಲಿದ್ದು ಜನರು ಈಗಿನಂತೆ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಹುಳಿಯಾರು ಮಾತಾ ಚಾರಿಟಬಲ್ ಟ್ರಸ್ಟ್‍ನ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು ಹುಳಿಯಾರಿನ 8, 10, 12, 13 ವಾರ್ಡ್‍ಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದಾರೆ. ಕೋವಿಡ್ ಲಕ್ಷಣ ಹೊಂದಿ ಹೋಂ ಐಸೋಲೇಷನ್ ನೆಪದಲ್ಲಿ ಮನೆಯಲ್ಲಿಯೇ ಉಳಿಯುತ್ತಿರುವವರು, ಸರಿಯಾಗಿ ಮಾರ್ಗಸೂಚಿ ಪಾಲಿಸದೆ ಆಚೆಕಡೆ ಸುತ್ತಾಡುತ್ತಿರುವುದರ ಮೂಲಕ ಕೋವಿಡ್ ಹೆಚ್ಚಳಕ್ಕೆ ಕಾರಣರಾಗುತ್ತಿದ್ದಾರೆ. ಹಾಗಾಗಿ ಮೇ. 19 ನೇ ತಾರೀಖಿನಿಂದ ಪಾಸಿಟಿವ್ ಬಂದಿರುವವರನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸಿ ಎಂದು ಜಿಲ್ಲಾ…

ಮುಂದೆ ಓದಿ...