ಮಧುಗಿರಿ : ದೇವಿಗೆ ಕೋಣ ಬಲಿ ಕೊಡಲು ಭಕ್ತಾದಿಗಳು ಪ್ರತಿಭಟನೆ

ಮಧುಗಿರಿ:       ಹಿಂದಿನ ಸಂಪ್ರದಾಯದಂತೆ ಕೋಣವನ್ನು ದೇವಿಗೆ ದೇವಸ್ಥಾನದ ಮುಂದೆಯೇ ಬಲಿ ಕೊಡ ಬೇಕು ಎಂದು ಶ್ರೀ ದಂಡಿನ ಮಾರಮ್ಮ ದೇವಾಲಯದ ಬಾಗಿಲಿಗೆ ಬೀಗ ಹಾಕಿ ಕೆಲ ಗಂಟೆಗಳ ಕಾಲ ಉತ್ಸವ ಮೂರ್ತಿಯನ್ನು ದೇವಾಲಯದ ಮುಂಭಾಗ ಇಟ್ಟು ಬುಧವಾರ ಭಕ್ತಾದಿಗಳು ಪ್ರತಿಭಟನೆ ನಡೆಸಿದರು.       ಪಟ್ಟಣದ ಪುರಾತನ ಪ್ರಸಿದ್ದ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ರಾತ್ರಿ ಆಡಳಿತಾಧಿಕಾರಿ ಡಾ.ನಂದಿನಿ ದೇವಿ ಚಾಲನೆ ನೀಡಿದರು, ನಂತರ ಬುಧವಾರ ಬೆಳಗಿನ ಜಾವ ಹಿಂದಿನ ಧಾರ್ಮಿಕ ಕಾರ್ಯಗಳ ನಿಯಮಾವಳಿಯಂತೆ ಕೋಣದ ಬಲಿ ಹಾಗೂ ಪ್ರಥಮ ದಿನದ ಅಂಗವಾಗಿ ಆರತಿ ಸೇವೆಯನ್ನು ನೆಡೆಸಿ ಕೊಡುವ ನಿಯಮ ಹಲವು ವರ್ಷಗಳಿಂದ ಸಾಗುತ್ತ ಬಂದಿದ್ದು. ಅದರಂತೆ ಕೋಣವನ್ನು ಬಲಿ ಕೊಡಲು ಮುಂದಾದಾಗ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಅಡ್ಡಿಪಡಿಸಿದ್ದರಿಂದ ಭಕ್ತಾದಿಗಳು ಹಾಗೂ ಅಧಿಕಾರಿಗಳ ನಡುವೆ…

ಮುಂದೆ ಓದಿ...

ಕೊರೊನಾ ವೈರಸ್ : ಮುಂಜಾಗ್ರತೆ ವಹಿಸಲು ಶಾಲೆಗಳಿಗೆ ಸೂಚನೆ!

ತುಮಕೂರು:        ಕೊರೊನಾ ವೈರಸ್ ಕೋವಿನ್-19 ಸೋಂಕು ಕುರಿತು ಶಾಲೆಗಳಲ್ಲಿ ಮುಂಜಾಗ್ರತೆ ವಹಿಸಬೇಕು ಹಾಗೂ ನೆಗಡಿ, ಕೆಮ್ಮು, ಜ್ವರ ಬಂದ ಮಕ್ಕಳಿಗೆ ಕಾಯಿಲೆ ವಾಸಿಯಾಗುವವರೆಗೂ ರಜೆ ನೀಡುವಂತೆ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ಸೂಚನೆ ನೀಡಿದ್ದಾರೆ.       ಸರ್ಕಾರಿ/ ಅನುದಾನಿತ/ ಖಾಸಗಿ ಶಾಲೆಗಳ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅರಿವು ನೀಡಬೇಕು. ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಅಂತಹ ಮಕ್ಕಳಿಗೆ ರಜೆ ನೀಡಿ ಮನೆಗೆ ಕಳುಹಿಸಿ ಚಿಕಿತ್ಸೆ ಪಡೆಯಲು ಸೂಕ್ತ ಮಾರ್ಗದರ್ಶನ ನೀಡಬೇಕು. ಎಲ್ಲಾ ವಿದ್ಯಾರ್ಥಿಗಳಿಗೂ ಪರೀಕ್ಷಾ ಸಮಯವಾಗಿದ್ದು, ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಜಾತ್ರೆ/ಸಮಾರಂಭಗಳಲ್ಲಿ ಹೊರಗಿನ ತಿಂಡಿ, ನೀರು ಸೇವಿಸದಂತೆ ಅವರು ಸಲಹೆ ನೀಡಿದ್ದಾರೆ. ಶೌಚಾಲಯಗಳ ಬಳಕೆ ನಂತರ ಕೈತೊಳೆಯುವ ಕ್ರಮದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಅವರು ತಿಳಿಸಿದ್ದಾರೆ.

ಮುಂದೆ ಓದಿ...

ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸೂಚನೆ

ತುಮಕೂರು :       ತುಮಕೂರು ಜಿಲ್ಲೆಯಲ್ಲಿ ಸುಮಾರು 563 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರಬಹುದು ಎಂದು ಗುರುತಿಸಲಾಗಿದ್ದು, ತೀವ್ರವಾಗಿ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ಎಂ. ರವಿಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕರೆಯಲಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೀರಿನ ಸಮಸ್ಯೆ ಕಂಡುಬರುವ ಮೊದಲೇ ಅಧಿಕಾರಿಗಳು ಆ ಗ್ರಾಮಗಳಿಗೆ ಭೇಟಿ ನೀಡಿ ನೀರಿನ ಮೂಲ ಇರುವ ಬೋರ್‍ವೆಲ್‍ಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು, ಖಾಸಗಿ ವ್ಯಕ್ತಿಗಳ ಬೋರ್‍ವೆಲ್‍ಗಳಿಂದಲೂ ನೀರು ಪಡೆಯುವ ಅವಕಾಶ ಕಲ್ಪಿಸಲಾಗಿದ್ದು, ಅದನ್ನು ಸಹ ಬಳಸಿಕೊಂಡು ತೀವ್ರವಾಗಿ ನೀರಿನ ಸಮಸ್ಯೆ ಕಂಡಿರುವ…

ಮುಂದೆ ಓದಿ...